ಬೆಂಗಳೂರು : ದೇಶದ ಒಟ್ಟು 15 ಕೋಟಿ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 6 ಕೋಟಿ ಮಹಿಳೆಯರು ಸದಾ ಆನ್‌ಲೈನ್‌ನಲ್ಲಿರುತ್ತಾರೆಯಂತೆ. ತಮ್ಮ ದೈನಂದಿನ ಜೀವನವನ್ನು ಸುಧಾರಿಸಲು ಇವರು ಇಂಟರ್ನೆಟ್ ಮೊರೆ ಹೋಗುತ್ತಾರೆ ಎನ್ನುತ್ತದೆ ವರದಿ. ಮಾಹಿತಿಯ ಪ್ರಕಾರ, 75% ಮಹಿಳೆಯರು 15-34 ವರ್ಷ ವಯಸ್ಸಿನವರಾಗಿದ್ದಾರೆ.ಇನ್ನು ಸದಾ ಆನ್‌ಲೈನ್‌ನಲ್ಲಿ ಇರುವ ಹುಡುಗಿಯರು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಆಸಕ್ತಿದಾಯಕವಾಗಿದೆ. ಮಹಿಳೆಯರು ತಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ತಮ್ಮ ಮೊಬೈಲ್‌ ಮೂಲಕವೇ ಉತ್ತರ ಕಂಡು ಕೊಳ್ಳುವ ಪ್ರಯತ್ನ ಮಾಡುತ್ತಾರೆಯಂತೆ.   


COMMERCIAL BREAK
SCROLL TO CONTINUE READING

ವೃತ್ತಿ ಮತ್ತು ಶಾಪಿಂಗ್‌ಗೆ ಸಂಬಂಧಿಸಿದ ವಿಷಯಗಳು : 
ಗೂಗಲ್ ವರದಿಯ ಪ್ರಕಾರ, ಹುಡುಗಿಯರು ಬಾಲ್ಯದಿಂದಲೂ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಅವರು ತಮ್ಮ ವೃತ್ತಿಜೀವನಕ್ಕೆ ಗರಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಾರೆ.ಅಂತಹ ಹುಡುಗಿಯರು ಅಂತರ್ಜಾಲದಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಾರೆ.ತಮ್ಮ ವೃತ್ತಿಜೀವನವನ್ನು ಯಾವ ದಿಕ್ಕಿನಲ್ಲಿ ಮುಂದುವರಿಸಬೇಕು ಎನ್ನುವುದರ ಬಗ್ಗೆ ಅರಿತುಕೊಳ್ಳುವ ಪ್ರಯತ್ನದಲ್ಲಿ ಇರುತ್ತಾರೆ. ಹೊಸ ಹೊಸ ಕೋರ್ಸ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ  ಉತ್ತರಗಳನ್ನು ಹುಡುಕಲು ಅವರು ಅನೇಕ ಬಾರಿ Google ಅನ್ನು ಬಳಸುತ್ತಾರೆ.


ಇದನ್ನೂ ಓದಿ : WhatsApp Statusನಲ್ಲೂ ಶೇರ್ ಮಾಡಬಹುದು ಉದ್ದುದ್ದ ವಾಯ್ಸ್ ನೋಟ್ : ಈ ರೀತಿ ಕೆಲಸ ಮಾಡಲಿದೆ ಈ ವೈಶಿಷ್ಟ್ಯ


ಆನ್‌ಲೈನ್ ಶಾಪಿಂಗ್ :
ಇದಲ್ಲದೇ ಹುಡುಗಿಯರು ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ಹೋಗುತ್ತಾರೆ. ಇಲ್ಲಿ  ಬಟ್ಟೆ ವಿನ್ಯಾಸಗಳು,ಹೊಸ ಸಂಗ್ರಹಗಳು,ಕೊಡುಗೆಗಳ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಾರೆ. ಇದು ಈಗಾಗಲೇ ಹಲವು ಸಂಶೋಧನೆಗಳಲ್ಲಿಯೂ ಬೆಳಕಿಗೆ ಬಂದಿದೆ.


ಫ್ಯಾಷನ್ :
ಹುಡುಗಿಯರು ಸುಂದರವಾಗಿ ಮತ್ತು ಇತರರಿಗಿಂತ ಭಿನ್ನವಾಗಿ ಕಾಣಲು ಇಷ್ಟಪಡುತ್ತಾರೆ.ಇದಕ್ಕಾಗಿ ಅವರು ಫ್ಯಾಷನ್, ಟ್ರೆಂಡ್‌ಗಳು, ಸೌಂದರ್ಯ ಚಿಕಿತ್ಸೆಗಳು ಮತ್ತು ಮನೆಮದ್ದುಗಳ ಬಗ್ಗೆ ಹುಡುಕಲು ಇಂಟರ್ನೆಟ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. 


ಮೆಹಂದಿ ಡಿಸೈನ್ : 
ಹುಡುಗಿಯರಿಗೆ ಮೆಹಂದಿ ಹಾಕಿಕೊಳ್ಳುವುದೆಂದರೆ ಬಲು ಇಷ್ಟ. ಇದು ಸಂಶೋಧನೆಯಲ್ಲೂ ಬೆಳಕಿಗೆ ಬಂದಿದೆ.ಹುಡುಗಿಯರು ಸಾಮಾನ್ಯವಾಗಿ ಇತ್ತೀಚಿನ ಮೆಹಂದಿ ವಿನ್ಯಾಸಗಳನ್ನು ಗೂಗಲ್‌ನಲ್ಲಿ ಹುಡುಕುತ್ತಾರೆ. 


ಇದನ್ನೂ ಓದಿ : Airtel : ಉಚಿತ ನೆಟ್‌ಫ್ಲಿಕ್ಸ್, ಅನಿಯಮಿತ ಕರೆ… 5G ಇಂಟರ್ನೆಟ್‌ನೊಂದಿಗೆ ವಿಶೇಷ ಯೋಜನೆ


ರೊಮ್ಯಾಂಟಿಕ್ ಹಾಡು : 
ಸಾಮಾನ್ಯವಾಗಿ ಎಲ್ಲರೂ ಸಂಗೀತ ಕೇಳಲು ಇಷ್ಟಪಡುತ್ತಾರೆ.ಹುಡುಗಿಯರು ಹೆಚ್ಚು ಸರ್ಚ್ ಮಾಡುವ ವಿಷಯಗಳಲ್ಲಿ ಸಂಗೀತವೂ ಸೇರಿದೆ.ಹುಡುಗಿಯರು ಅಂತರ್ಜಾಲದಲ್ಲಿ ರೊಮ್ಯಾಂಟಿಕ್ ಹಾಡುಗಳನ್ನು ಹುಡುಕಿ ಅದನ್ನು ಕೇಳುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.