Bajaj CNG Bike: ಭಾರತದ ಪ್ರಸಿದ್ಧ ಬೈಕ್ ತಯಾರಿಕಾ ಕಂಪನಿ ಬಜಾಜ್ ವಿಶ್ವ ಪರಿಸರ ದಿನಾಚರಣೆಯ (World Environment Day) ಈ ದಿನ (ಜುಲೈ 05, 2024) ವಿಶ್ವದ ಮೊದಲ ಸಿ‌ಎನ್‌ಜಿ ಮೋಟಾರ್‌ಸೈಕಲ್ (ವರ್ಲ್ಡ್ ಫ್ರಿಸ್ಟ್ CNG ಬೈಕ್)  ಅನ್ನು ಬಿಡುಗಡೆ  ಮಾಡಲಿದೆ.  ಲಭ್ಯವಿರುವ ಮಾಹಿತಿಗಳ ಪ್ರಕಾರ, ಈ ಬೈಕ್‌ಗೆ ಕಂಪನಿಯು ಫ್ರೀಡಂ 125  ಎಂದು ಹೆಸರಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಪರಿಸರ ದಿನದಂದೇ ಪರಿಸರ ಸ್ನೇಹಿ ಬೈಕ್ ಬಿಡುಗಡೆ: 
ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ಬೈಕ್‌ಗಳಿಗೆ ಪರ್ಯಾಯವಾಗಿ ಕ್ಲೀನರ್, ಹೆಚ್ಚು ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಪರ್ಯಾಯವನ್ನು ನೀಡುವ ಮೂಲಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಲು ಬಜಾಜ್ ಕಂಪನಿಯು ವಿಶ್ವ ಪರಿಸರ ದಿನಾಚರಣೆಯ ((World Environment Day)) ದಿನವೇ ಹಳೆಯ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗಿಂತ ಕಡಿಮೆ ಮಾಲಿನ್ಯಕಾರಕ ಪರಿಸರ ಸ್ನೇಹಿ ಬಜಾಜ್ ಸಿ‌ಎನ್‌ಜಿ ಬೈಕ್ ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ. 


ಇದನ್ನೂ ಓದಿ- Learner DLಗಾಗಿ ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಿ !ಹಂತ ಹಂತದ ಪ್ರಕ್ರಿಯೆ ಹೀಗಿದೆ !


ಪೆಟ್ರೋಲ್ ಮತ್ತು ಸಿಎನ್‌ಜಿ ಇಂಧನ ಎರಡರಲ್ಲೂ ಕಾರ್ಯನಿರ್ವಹಣೆ: 
ಇತ್ತೀಚಿನ ದಿನಗಳಲ್ಲಿ ಇಂಧನ ಬೆಲೆಗಳು ಗಗನಮುಖಿಯಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಆರ್ಥಿಕ ಸ್ನೇಹಿಯಾಗುವಂತೆ ಬಜಾಜ್ ಫ್ರೀಡಂ 125cc ಎಂಜಿನ್ ಅನ್ನು ಹೊಂದಿದ್ದು, ತಡೆರಹಿತ ಪರಿವರ್ತನೆಯನ್ನು ಒದಗಿಸಲು ಈ ಬೈಕ್ ಅನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಇಂಧನ ಎರಡರಲ್ಲೂ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂಬುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ. 


ಕಡಿಮೆ ಮಾಲಿನ್ಯಕಾರಕ: 
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಮಾಲಿನ್ಯ ವಿಷಯದಲ್ಲಿ ಬಜಾಜ್ ಫ್ರೀಡಂ 125  (Bajaj Freedom 125) ಪರಿಸರಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪೆಟ್ರೋಲ್‌ನಲ್ಲಿ ಚಲಿಸುವ ವಾಹನಗಳಿಗೆ ಹೋಲಿಸಿದರೆ ಈ ವಾಹನವು ಕಡಿಮೆ ಮಾಲಿನ್ಯವನ್ನು ಹೊರಸೂಸುತ್ತದೆ. ಇಂಗಾಲದ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಅಥವಾ ಮೀಥೇನ್ ಅಲ್ಲದ ಹೈಡ್ರೋಕಾರ್ಬನ್‌ಗಳಾಗಿದ್ದರೂ, ಸಿಎನ್‌ಜಿ ಹೊರಸೂಸುವಿಕೆಯು ಗಮನಾರ್ಹವಾಗಿ ಕಡಿಮೆ ಇದೆ. ಇದು ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯವನ್ನು ಎದುರಿಸಲು ಭಾರತ ಸರ್ಕಾರದ ಪ್ರಯತ್ನಕ್ಕೆ ಹೊಂದಿಕೆಯಾಗುತ್ತದೆ ಎನ್ನಲಾಗಿದೆ. 


ಇದನ್ನೂ ಓದಿ- Royal Enfield : ಸದ್ಯದಲ್ಲೇ ಬರಲಿದೆ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಿಕ್ ಬೈಕ್, ಲಾಂಚ್ ಯಾವಾಗ?


ಬಜಾಜ್ ಫ್ರೀಡಂ 125 ಬೆಲೆ: 
ಪರಿಸರ ಸ್ನೇಹಿ ಸಾರಿಗೆ ವಿಧಾನವನ್ನು ಬಯಸುವವರಿಗೆ ಆಕರ್ಷಕ ಆಯ್ಕೆಯಾಗಿರುವ ಬಜಾಜ್ ಫ್ರೀಡಂ 125 ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಇದರ ಬೆಲೆ ಸುಮಾರು 80,000 ರಿಂದ 90,000 (ಎಕ್ಸ್ ಶೋ ರೂಂ) ಇರಬಹುದು ಎಂದು ನಿರೀಕ್ಷಿಸಲಾಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.