Xiaomi Christmas Sale: ಕೇವಲ 899 ರೂ.ಗೆ 5G ಫೋನ್ ಖರೀದಿಸಿ; ಸ್ಮಾರ್ಟ್ ಟಿವಿ, ಲ್ಯಾಪ್ಟಾಪ್ಗಳ ಮೇಲೂ ಭಾರಿ ರಿಯಾಯಿತಿ
Xiaomi Christmas Sale 2021: ಸ್ಮಾರ್ಟ್‌ಫೋನ್ ತಯಾರಕ Xiaomi ಇತ್ತೀಚೆಗೆ ಭಾರತದಲ್ಲಿ ತನ್ನ ವೆಬ್ಸೈಟ್ನಲ್ಲಿ ವಿಶೇಷ Xiaomi ಕ್ರಿಸ್ಮಸ್ ಸೇಲ್ 2021 ಅನ್ನು ಬಿಡುಗಡೆ ಮಾಡಿದೆ, ಇದರಲ್ಲಿ ನಿಮಗೆ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಲ್ಯಾಪ್ಟಾಪ್ಗಳು ಮತ್ತು ಸ್ಪೀಕರ್ಗಳಂತಹ ಅನೇಕ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್‌ನಲ್ಲಿ ಲಭ್ಯವಿರುವ ಕೆಲವು ಡೀಲ್ಗಳ ಬಗ್ಗೆ ತಿಳಿಯೋಣ.
Xiaomi Christmas Sale 2021: ಚೀನೀ ಸ್ಮಾರ್ಟ್‌ಫೋನ್ ತಯಾರಕ Xiaomi ಸಹ ಭಾರತದಲ್ಲಿ ವಿಶೇಷ ಕ್ರಿಸ್ಮಸ್ ಮಾರಾಟವನ್ನು ತಂದಿದೆ. Xiaomi ಕ್ರಿಸ್ಮಸ್ ಸೇಲ್ 2021 (Xiaomi Christmas Sale 2021), ಇದರಲ್ಲಿ ನೀವು Xiaomi ಯ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್ ಟಿವಿಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶವನ್ನು ಪಡೆಯುತ್ತೀರಿ, ಉದಾಹರಣೆಗೆ, Xiaomi 11 Lite NE 5G ಅನ್ನು ನೀವು ಕೇವಲ 899 ರೂ.ಗೆ ಮನೆಗೆ ಕೊಂಡೊಯ್ಯಬಹುದು. ಈ ಮಾರಾಟದಲ್ಲಿ ಕೆಲವು ಉತ್ಪನ್ನಗಳ ಮೇಲೆ ಲಭ್ಯವಿರುವ ಕೊಡುಗೆಗಳ ಬಗ್ಗೆ ತಿಳಿಯೋಣ.
Xiaomi ಯ 5G ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಿ :
Xiaomi 11 Lite NE 5G: Xiaomi ಯ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್ (Smartphones) ಮಾರುಕಟ್ಟೆಯ ಬೆಲೆ 33,999ರೂ. ಆಗಿದೆ. ಆದರೆ Xiaomi ಮಾರಾಟದಲ್ಲಿ ನೀವು ಇದನ್ನು 28,999 ರೂ. ಗೆ ಖರೀದಿಸಬಹುದು. ಈ ಫೋನ್ ಖರೀದಿಸುವಾಗ, ನೀವು 1,500 ರೂ.ಗಳ ಆಕ್ಸೆಸರಿ ರಿಯಾಯಿತಿಯನ್ನು ಪಡೆಯುತ್ತೀರಿ ಮತ್ತು ರೂ 5 ಸಾವಿರ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ, ಇದು ನಿಮ್ಮ ಫೋನ್‌ನ ಬೆಲೆಯನ್ನು ರೂ. 22,499 ಕ್ಕೆ ಮತ್ತಷ್ಟು ಕಡಿಮೆ ಮಾಡುತ್ತದೆ. ಈ ಡೀಲ್‌ನಲ್ಲಿ ನಿಮಗೆ Mi Exchange ಆಫರ್ ಅನ್ನು ಸಹ ನೀಡಲಾಗುತ್ತಿದ್ದು ಇದರಿಂದ ನೀವು 21,600 ರೂ. ವರೆಗೆ ಉಳಿಸಬಹುದು ಮತ್ತು ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಲಾಭವನ್ನು ನೀವು ಪಡೆದರೆ ನೀವು Xiaomi 11 Lite NE 5G ಅನ್ನು ಕೇವಲ 899 ರೂ.ಗಳಿಗೆ ಖರೀದಿಸಬಹುದು. ಇದರಲ್ಲಿ ನಿಮಗೆ ಬ್ಯಾಂಕ್ ಆಫರ್ ಕೂಡ ನೀಡಲಾಗುತ್ತಿದೆ.
Redmi note 11T 5G: 22,999 ಬೆಲೆಯ ಈ ಸ್ಮಾರ್ಟ್‌ಫೋನ್ ಅನ್ನು ನೀವು Xiaomi ಮಾರಾಟದಲ್ಲಿ 19,999 ರೂ.ಗೆ ಖರೀದಿಸಬಹುದು. ಇದರಲ್ಲಿ, ನೀವು 1,500 ರೂ.ಗಳ ಆಕ್ಸೆಸರಿ ಡಿಸ್ಕೌಂಟ್ ಅನ್ನು ಪಡೆಯುತ್ತೀರಿ ಮತ್ತು Mi ಎಕ್ಸ್ಚೇಂಜ್ ಕೊಡುಗೆಯೊಂದಿಗೆ ನೀವು ರೂ. 5,500 ವರೆಗೆ ಉಳಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ, ನಿಮಗೆ ಫೋನ್‌ನ ಬೆಲೆ ಕೇವಲ 12,999 ರೂ. ಆಗಿರುತ್ತದೆ. ನೀವು ಇದನ್ನು ICICI ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ನಿಮಗೆ ಒಂದು ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ ಮತ್ತು ನೀವು 22,999 ರೂ.ಗಳ ಈ ಫೋನ್ ಅನ್ನು ಕೇವಲ 11,999 ರೂ.ಗಳಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು.
ಇದನ್ನೂ ಓದಿ- ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು: ಕೇವಲ 50 ಪೈಸೆಗೆ 1 ಕೀಮಿ ಮೈಲೇಜ್ ನೀಡುತ್ತೆ
ಸ್ಮಾರ್ಟ್ ಟಿವಿಗಳಲ್ಲಿ ದೊಡ್ಡ ರಿಯಾಯಿತಿ:
Mi TV 4A 40 Horizon: ಈ 40-ಇಂಚಿನ Xiaomi ಸ್ಮಾರ್ಟ್ ಟಿವಿಯ (Smart Tv) ಮಾರುಕಟ್ಟೆ ಬೆಲೆ ರೂ. 29,999 ಆದರೆ Xiaomi ಮಾರಾಟದಲ್ಲಿ ನೀವು ಈ ಟಿವಿಯನ್ನು ರೂ. 22,999 ಕ್ಕೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ಇದರ ಖರೀದಿಯ ಮೇಲೆ 2 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ, ಇದು ಈ ಟಿವಿಯ ಬೆಲೆಯನ್ನು 20,999 ರೂಪಾಯಿಗಳಿಗೆ ತರುತ್ತದೆ. ಇದರೊಂದಿಗೆ ನೀವು ನೋ ಕಾಸ್ಟ್ EMI ನಲ್ಲಿಯೂ ಈ ಟಿವಿ ಖರೀದಿಸಬಹುದು.
Mi TV 5X ಸರಣಿ: ಇದು 50-ಇಂಚಿನ ಸ್ಮಾರ್ಟ್ ಟಿವಿಯಾಗಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ 59,999 ರೂ. Xiaomi ನ ಕ್ರಿಸ್‌ಮಸ್ ಸೇಲ್‌ನಲ್ಲಿ ನೀವು ಇದನ್ನು ರೂ. 40,999 ಕ್ಕೆ ಮನೆಗೆ ತೆಗೆದುಕೊಂಡು ಹೋಗಬಹುದು ಮತ್ತು ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸಿದರೆ, ನಿಮಗೆ ರೂ. 4,000 ಹೆಚ್ಚು ರಿಯಾಯಿತಿ ಸಿಗುತ್ತದೆ, ಈ ಟಿವಿಯನ್ನು ರೂ 36,999 ಗೆ ಖರೀದಿಸಬಹುದು. ಇದರೊಂದಿಗೆ ನೀವು ನೋ ಕಾಸ್ಟ್ EMI ಲಾಭವನ್ನೂ ಪಡೆಯಬಹುದು.
ಇದನ್ನೂ ಓದಿ- Amazon Prime vs Disney+ Hotstar vs Netflix: ಮನರಂಜನೆಗಾಗಿ ಯಾವ ಯೋಜನೆ ಬೆಸ್ಟ್, ಇಲ್ಲಿದೆ ಮಾಹಿತಿ
ಲ್ಯಾಪ್‌ಟಾಪ್‌ಗಳಲ್ಲಿ ತ್ವರಿತ ರಿಯಾಯಿತಿ:
RedmiBook 15 e-Learning Edition: ನೀವು ಈ ಲ್ಯಾಪ್‌ಟಾಪ್ ಅನ್ನು 8GB RAM ಮತ್ತು 512GB SSD ಜೊತೆಗೆ ರೂ. 40,999 ಕ್ಕೆ ಖರೀದಿಸಬಹುದು. ಆದರೆ ಇದರ ಮೂಲ ಬೆಲೆ ರೂ. 55,999 ಆಗಿದೆ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ ನೀವು 21,600 ರೂಪಾಯಿಗಳವರೆಗೆ ಉಳಿಸಬಹುದು ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆಯ ಮೇಲೆ ನೀವು 3,500 ರೂಪಾಯಿಗಳ ರಿಯಾಯಿತಿಯನ್ನು ಸಹ ಪಡೆಯುತ್ತೀರಿ. ಈ ರೀತಿಯಾಗಿ ನೀವು ಈ ಲ್ಯಾಪ್‌ಟಾಪ್ ಅನ್ನು ಕೇವಲ 15,899 ರೂ.ಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.
RedmiBook 15 Pro: ಮಾರುಕಟ್ಟೆಯಲ್ಲಿ 512GB SSD ಹೊಂದಿರುವ ಈ ಲ್ಯಾಪ್‌ಟಾಪ್‌ನ ಬೆಲೆ ರೂ. 59,999 ಆಗಿದೆ. ಆದರೆ ಮಾರಾಟದಲ್ಲಿ ನೀವು ಇದನ್ನು ರೂ. 47,999 ಗೆ ಖರೀದಿಸಬಹುದು. Mi Exchange ಆಫರ್‌ನೊಂದಿಗೆ, ನೀವು 21,600 ರೂ.ವರೆಗೆ ಉಳಿಸಬಹುದು, ಇದು ಲ್ಯಾಪ್‌ಟಾಪ್‌ನ ಬೆಲೆಯನ್ನು 26,399 ರೂ.ಗೆ ಇಳಿಸಬಹುದು. ಅಲ್ಲದೆ, ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ರೂ. 4,500 ರ ರಿಯಾಯಿತಿಯನ್ನು ಪಡೆಯಬಹುದು ಮತ್ತು ರೂ. 21,899 ಕ್ಕೆ ಲ್ಯಾಪ್‌ಟಾಪ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.