Activa-Jupiter ಸ್ಕೂಟರ್ ಗಳಿಗೆ ಎದುರಾಗಲಿದೆ ಭಾರಿ ಪೈಪೋಟಿ, 2 ಹೊಸ ಸ್ಕೂಟರ್ ಬಿಡುಗಡೆ, ಬೆಲೆ-ವೈಶಿಷ್ಟ್ಯ ವಿವರ ಇಲ್ಲಿದೆ
Yamaha Launches Two New Scooters: ದೇಶದ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಯಮಹಾ ಈಗಾಗಲೇ ತನ್ನ ಮೋಟಾರ್‌ಸೈಕಲ್‌ಗಳನ್ನು ನವೀಕರಿಸಿದೆ ಮತ್ತು ಈಗ ಅದು ತನ್ನ ಸ್ಕೂಟರ್‌ಗಳ ನೆವೀಕರಣದತ್ತ ಮುಖ ಮಾಡಿದೆ. ಕಂಪನಿಯು ಸೋಮವಾರ ತನ್ನ 125 ಸಿಸಿ ಸ್ಕೂಟರ್‌ಗಳಲ್ಲಿ ಎರಡು ಸ್ಕೂಟರ್ ಗಳಾದ - ಫ್ಯಾಸಿನೊ ಮತ್ತು ರೇಝಡ್‌ಆರ್ ಅನ್ನು ಹೊಸ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ.
Yamaha Facsino ಮತ್ತು RayZR 2023: ದ್ವಿಚಕ್ರ ವಾಹನಗಳಿಗೆ BS6 ಪೇಜ್ 3 ನಿಯಮಾವಳಿಗಳು ಜಾರಿಗೆ ಬರುವುದರೊಂದಿಗೆ, ಈ ವಾಹನ ತಯಾರಕ ಕಂಪನಿಗಳು ನಿರಂತರವಾಗಿ ತಮ್ಮ ಉತ್ಪನ್ನಗಳನ್ನು ನವೀಕರಿಸುತ್ತಿವೆ. ಯಮಹಾ ಈಗಾಗಲೇ ತನ್ನ ಮೋಟಾರ್‌ಸೈಕಲ್‌ಗಳನ್ನು ನವೀಕರಿಸಿದೆ ಮತ್ತು ಇದೀಗ ಅದು ತನ್ನ ಸ್ಕೂಟರ್‌ಗಳ ನವೀಕರನದತ್ತ ಮುಖಮಾಡಿದೆ. ಕಂಪನಿಯು ಸೋಮವಾರ ತನ್ನ 125 ಸಿಸಿ ಸ್ಕೂಟರ್‌ಗಳಲ್ಲಿ ಎರಡು ಸ್ಕೂಟರ್ಗಳಾಗಿರುವ - ಫ್ಯಾಸಿನೊ ಮತ್ತು ರೇಝಡ್‌ಆರ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ವಿನ್ಯಾಸದ ವಿಷಯದಲ್ಲಿ, ಫ್ಯಾಸಿನೊ ನಿಯೋ-ರೆಟ್ರೊ ಸ್ಟೈಲಿಂಗ್ ಅನ್ನು ಹೊಂದಿದೆ, ಆದರೆ RayZR ಸ್ಪೋರ್ಟಿ ಲುಕ್ ಹೊಂದಿದೆ. ಈ ಎರಡೂ ಸ್ಕೂಟರ್‌ಗಳನ್ನು ಇದೀಗ ರಿಯಲ್ ಟೈಮ್ ಡ್ರೈವಿಂಗ್ ಎಮಿಷನ್ ಪ್ರಕಾರ ಸಿದ್ಧಪಡಿಸಲಾಗಿದೆ.
ಹೊಸ ಯಮಹಾ ಸ್ಕೂಟರ್‌ಗಳು
2023ರ ರೂಪಾಂತರದಲ್ಲಿ ಈ ಸ್ಕೂಟರ್‌ಗಳಿಗೆ ಹೊಸ ಬಣ್ಣಗಳ ಆಯ್ಕೆಗಳನ್ನು ನೀಡಲಾಗಿದೆ. ತಮ್ಮ 125cc ಸಿಂಗಲ್-ಸಿಲಿಂಡರ್ ಎಂಜಿನ್‌ನಲ್ಲಿರುವ ಸೌಮ್ಯ ಹೈಬ್ರಿಡ್ ವ್ಯವಸ್ಥೆಯನ್ನು ಕಡಿಮೆ ಹೊರಸೂಸುವಿಕೆಯ ಉದ್ದೇಶದಿಂದ ಕಂಪನಿಯು ಮತ್ತೆ ನವೀಕರಿಸಿದೆ. ಫ್ಯಾಸಿನೊ ಹೊಚ್ಚ ಹೊಸ ಡಾರ್ಕ್ ಮ್ಯಾಟ್ ಬ್ಲೂ ಬಣ್ಣವನ್ನು ಪಡೆದುಕೊಂಡರೆ, RayZR ಹೈಬ್ರಿಡ್ ಎರಡು ಅತ್ಯಾಕರ್ಷಕ ಹೊಸ ಬಣ್ಣಗಳನ್ನು ಪಡೆದುಕೊಂಡಿದೆ- ಮ್ಯಾಟ್ ಬ್ಲ್ಯಾಕ್ ಮತ್ತು ಲೈಟ್ ಗ್ರೇ ವರ್ಮಿಲಿಯನ್.
ಇದನ್ನೂ ಓದಿ-Coming Soon: ಎರಡಲ್ಲ ಒಟ್ಟು 4 ಹೊಸ ಕಾರು ಬಿಡುಗಡೆಗೆ ಸಿದ್ಧವಾಗಿದೆ ಈ ಭಾರತೀಯ ಕಂಪನಿ!
ವೈಶಿಷ್ಟ್ಯಗಳು
ಎರಡೂ ಸ್ಕೂಟರ್‌ಗಳು ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಫ್ರಂಟ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದ ಸಿಂಗಲ್-ಸೈಡೆಡ್ ಶಾಕ್ ಅಬ್ಸಾರ್ಬರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಇದು ಡಿಸ್ಕ್ ಬ್ರೇಕ್ ಆಯ್ಕೆಯೊಂದಿಗೆ 12-ಇಂಚಿನ ಮುಂಭಾಗದ ಅಲಾಯ್ ವೀಲ್ ಮತ್ತು ಡ್ರಮ್ ಬ್ರೇಕ್ನೊಂದಿಗೆ 10-ಇಂಚಿನ ಹಿಂಭಾಗದ ಅಲಾಯ್ ವೀಲ್ ಅನ್ನು ಹೊಂದಿದೆ.
ಇದನ್ನೂ ಓದಿ-Alert! ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನಕಲಿ ಆಲೂಗಡ್ಡೆ! ವಂಚನೆಗೆ ಗುರಿಯಾಗುವ ಮೊದಲು ಈ ಸುದ್ದಿ ಓದಿ
ಎರಡೂ ಸ್ಕೂಟರ್‌ಗಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. Fascino ಮತ್ತು RayZR ಎರಡೂ ಒಂದೇ ಆಗಿವೆ. ಸೌಮ್ಯ ಹೈಬ್ರಿಡ್ ವ್ಯವಸ್ಥೆಯೊಂದಿಗೆ, ಯಮಹಾ 60 kmpl ವರೆಗಿನ ವಿಭಾಗದ ಅತ್ಯುತ್ತಮ ಇಂಧನ ದಕ್ಷತೆ ಇದಾಗಿದೆ ಎಂದೂ ಕೂಡ ಹೇಳಿಕೊಂಡಿದೆ. ಇವು 5.2 ಲೀಟರ್ ಅಂಡರ್ ಸೀಟ್ ಫ್ಯುಯೆಲ್ ಸ್ಟೋರೇಜ್ ಪಡೆದುಕೊಂಡಿವೆ ಮತ್ತು 99 ಕೆಜಿ ತೂಗುತ್ತವೆ.
ಇದನ್ನೂ ಓದಿ-ಇನ್ಮುಂದೆ ನೌಕರಿ ಕಳೆದುಕೊಂಡರೆ ನೀವು ಚಿಂತಿಸಬೇಕಾಗಿಲ್ಲ, ಆದಷ್ಟು ಬೇಗ ಈ ಪಾಲಸಿ ನಿಮ್ಮ ಬಳಿ ಇರಲಿ!
ಬೆಲೆ ಎಷ್ಟು?
2023 ಫ್ಯಾಸಿನೊ ಬೆಲೆ 91 ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ, ಆದರೆ ಹೊಸ ರೇಝಡ್ಆರ್ ಬೆಲೆ 89 ಸಾವಿರ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಯಮಹಾ ಪವರ್‌ಟ್ರೇನ್‌ನೊಂದಿಗೆ SMG (ಸ್ಮಾರ್ಟ್ ಮೋಟಾರ್ ಜನರೇಟರ್) ಅನ್ನು ನೀಡುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.