GoodBye 2022: ಡಿಸೆಂಬರ್ ತಿಂಗಳು ಬಂದಾಗಿದೆ ಮತ್ತು ಹೊಸ ವರ್ಷ ಆರಂಭಕ್ಕೆ ದಿನಗಣನೆ ಶುರುವಾಗಿದೆ. 2022 ರ ಕೊನೆಯಲ್ಲಿ Google, YouTube ನ ಅತ್ಯಂತ ಜನಪ್ರಿಯ ವೀಡಿಯೊಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಯಾವ ಹಾಡುಗಳು, ಯಾವ ತಮಾಷೆಯ ವೀಡಿಯೊಗಳು ಮತ್ತು ಯಾವ ಕಂಟೆಂಟ್ ಕ್ರಿಯೇಟರ್‌ಗಳು ಟ್ರೆಂಡಿಂಗ್‌ನಲ್ಲಿವೆ ಎಂಬುದನ್ನು ಅದು ಬಹಿರಂಗಪಡಿಸಿದೆ. ಈ ಲೇಖನದಲ್ಲಿ ಯೂಟ್ಯೂಬ್‌ನಲ್ಲಿನ ಟಾಪ್-5 ಮ್ಯೂಸಿಕ್ ವೀಡಿಯೊಗಳ ಬಗ್ಗೆ ನಾವು ನಿಮಗೆ ಮಾಹ್ತಿತಿಯನ್ನು ನೀಡುತ್ತಿದ್ದೇವೆ. ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡು ಈ ಪಟ್ಟಿಯಲ್ಲಿ ಟಾಪ್ ಟ್ರೆಂಡ್‌ನಲ್ಲಿ ಮುಂದುವರೆದಿದ್ದರೆ, ಕಚ್ಚಾ ಬಾದಾಮ್ ಹಾಡೂ ಕೂಡ ಇದುವರೆಗೆ ಸದ್ದು ಮಾಡುತ್ತಿದ್ದೆ. 


COMMERCIAL BREAK
SCROLL TO CONTINUE READING

ಟಾಪ್ ನಲ್ಲಿ ಶ್ರೀವಲ್ಲಿ ಹಾಡು
ಪುಷ್ಪ ಚಿತ್ರದ ಶ್ರೀವಲ್ಲಿ ಹಾಡು ಟಾಪ್ ಟ್ರೆಂಡ್‌ನಲ್ಲಿದೆ. ಈ ವೀಡಿಯೋವನ್ನು ಇದುವರೆಗೆ ಯೂಟ್ಯೂಬ್‌ನಲ್ಲಿ 54 ಕೋಟಿ ಬಾರಿ ವೀಕ್ಷಿಸಲಾಗಿದೆ. ಈ ಹಾಡಿನ ವೀಡಿಯೊವನ್ನು 11 ತಿಂಗಳ ಹಿಂದೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ವೀಕ್ಷಣೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.


ಅರೇಬಿಕ್ ಕುತ್ತು ಜಲ್ವಾ ಮುಂದುವರೆದಿದೆ
ತಮಿಳು ಚಲನಚಿತ್ರ ಬೀಸ್ಟ್ ಈ ವರ್ಷ ಬಿಡುಗಡೆಯಾಗಿದೆ, ಈ ಚಿತ್ರದ ಅರೇಬಿಕ್ ಕುತ್ತು ಹಾಡು ಯೂಟ್ಯೂಬ್‌ನಲ್ಲಿ ಸಾಕಷ್ಟು ಜನಪ್ರೀಯತೆಯನ್ನು ಗಿಟ್ಟಿಸಿದೆ. ಈ ಹಾಡಿನ ಎರಡು ವಿಡಿಯೋಗಳನ್ನು (ಲಿರಿಕ್ ವಿಡಿಯೋ ಮತ್ತು ವಿಡಿಯೋ ಸಾಂಗ್) ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಲಿರಿಕ್ ವೀಡಿಯೋವನ್ನು 49 ಕೋಟಿ ಬಾರಿ ವೀಕ್ಷಿಸಲಾಗಿದ್ದು, ವಿಡಿಯೋ ಸಾಂಗ್ 34 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ.


ಪುಷ್ಪಾ ಚಿತ್ರದ ಈ ಹಾಡು ಕೂಡ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ
ಪುಷ್ಪಾ ಚಿತ್ರದ ಸಾಮಿ-ಸಾಮಿ ಹಾಡು ಕೂಡ ಇದುವರೆಗೆ ತನ್ನ ಟ್ರೆಂಡ್‌ ಕಾಯ್ದುಕೊಂಡಿದೆ, ಈ ವರ್ಷ ಪುಷ್ಪಾ ಚಿತ್ರದ ಎಲ್ಲಾ ಹಾಡುಗಳು ಜನರಿಗೆ ತುಂಬಾ ಇಷ್ಟವಾಗಿವೆ. ಆದರೆ, ಜನರ ಬಾಯಲ್ಲಿ ಉಳಿಯುವ ಎರಡನೇ ಹಾಡು ಇದು. ಈ ವಿಡಿಯೋ ಯೂಟ್ಯೂಬ್‌ನಲ್ಲಿ 49 ಕೋಟಿ ವೀಕ್ಷಣೆ ಪಡೆದಿದೆ.


ಇದನ್ನೂ ಓದಿ-GPay ಮೂಲಕ ಯಾವುದೇ ಮಿತಿ ಇಲ್ಲದೆ ಹಣ ಪಾವತಿಸಿ, ರೂ.50 ರಿಂದ ರೂ.100 ಕ್ಯಾಶ್ ಬ್ಯಾಕ್ ಪಡೆಯಿರಿ!


ಟಾಪ್-4 ರಲ್ಲಿ ಕಚ್ಚಾ ಬಾದಾಮ್ ಹಾಡು
ಈ ಹಾಡು ಭುವನ್ ಬಡ್ಯಾಕರ್ ಅವರನ್ನು ಒಂದೇ ರಾತ್ರಿಯಲ್ಲಿ ಸ್ಟಾರ್ ಪಟ್ಟಕ್ಕೆರಿಸಿತ್ತು. ಯೂಟ್ಯೂಬ್‌ನಲ್ಲಿ ಅವರ ಕಚ್ಚಾ ಬಾದಾಮ್ ಹಾಡು ಅಪ್‌ಲೋಡ್ ಆಗುತ್ತಿದ್ದಂತೆ, ಅದು ರಾತ್ರೋರಾತ್ರಿ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು . ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ 38 ಕೋಟಿ ಬಾರಿ ವೀಕ್ಷಿಸಲಾಗಿದೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲೂ ಈ ಹಾಡು ಸಾಕಷ್ಟು ಜನಪ್ರಿಯತೆಯನ್ನು ಗಿಟ್ಟಿಸಿದೆ.


ಇದನ್ನೂ ಓದಿ-Peahen Pregnancy: ಹೆಣ್ಣು ನವಿಲು ಗರ್ಭಧಾರಣೆಯ ಈ ಮಿಥ್ಯ ಕಥೆ ನೀವೂ ಕೇಳಿದ್ದೀರಾ?


ಟಾಪ್-5ರಲ್ಲಿ ಭೋಜ್‌ಪುರಿ ಹಾಡು 
ಖೇಸರಿಲಾಲ್ ಯಾದವ್ ಅವರ ಭೋಜ್‌ಪುರಿ ಹಾಡು ಲೇ ಲೇ ಆಯಿ ಕೋಕಾ-ಕೋಲಾ ಕೂಡ ಯೂಟ್ಯೂಬ್‌ನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿತ್ತು. ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ 31 ಕೋಟಿ ಬಾರಿ ವೀಕ್ಷಿಸಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.