ನವದೆಹಲಿ : ಕಳೆದ ಕೆಲವು ದಿನಗಳಿಂದ , ಗೂಗಲ್ ಕ್ಲಾಕ್ ನಲ್ಲಿ (Google clock) ಕೆಲವು ಸಮಸ್ಯೆಗಳಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಗಡಿಯಾರದಲ್ಲಿ ಸೆಟ್ ಮಾಡಿರುವ ಅಲಾರಂಗಳು  (Alaram) ನಿಗದಿತ ಸಮಯದಲ್ಲಿ ತಾವಾಗಿಯೇ ಬಂದ್ ಆಗುತ್ತವೆ ಎನ್ನುವ ದೂರುಗಳು ಕೇಳಿ ಬರುತ್ತವೆ.  ಈ ಸಮಸ್ಯೆಯ ಬಗ್ಗೆ ಗೂಗಲ್ (Google) ಕೂಡಾ ಒಪ್ಪಿಕೊಂಡಿದ್ದು, ಗೂಗಲ್ ಆಪ್ ನಲ್ಲಿನ ದೋಷವನ್ನು ಶೀಘ್ರವೇ ಸರಿಪಡಿಸುವುದಾಗಿಯೂ ಹೇಳಿದೆ. 


COMMERCIAL BREAK
SCROLL TO CONTINUE READING

ಕ್ಯಾಲೆಂಡರ್‌ ಮೂಲಕ ಅಲಾರಂ ಸೆಟ್ ಮಾಡಿ :  
ಗೂಗಲ್ ಕ್ಯಾಲೆಂಡರ್‌ನಿಂದ (Google Calander) ಕೂಡಾ ಅಲಾರಂ ಅನ್ನು ಸೆಟ್ ಮಾಡಬಹುದು. ಈ ಬಗ್ಗೆ ಇನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ಮಾಹಿತಿ ಇಲ್ಲ. ಹೌದು, Google ಕ್ಯಾಲೆಂಡರ್‌ನ ಸೆಟ್ಟಿಂಗ್‌ಗಳನ್ನು ಸರಿಯಾಗಿ ಬಳಸುವ ಮೂಲಕ ಬಳಕೆದಾರರು,  ಅಲಾರಂ (Alaram) ಹೊಂದಿಸಬಹುದು. ಈ ಸಂಪೂರ್ಣ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ. Google ಕ್ಯಾಲೆಂಡರ್‌ನಿಂದ ನೀವು ಅಲಾರಂ ಅನ್ನು ಹೇಗೆ ಹೊಂದಿಸಬಹುದು ಎಂಬುದನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ ...


ಇದನ್ನೂ ಓದಿ : Good News! ಕೇವಲ ಒಂದು ರೂಪಾಯಿಯಲ್ಲಿ ಕುಳಿತಲ್ಲೇ ಸಿಮ್ ಪೋರ್ಟ್ ಮಾಡಿಬಿಡಬಹುದು, ಸುಲಭ ಪ್ರಕ್ರಿಯೆ ಇಲ್ಲಿದೆ


ಈ ರೀತಿಯಾಗಿ ಕ್ಯಾಲೆಂಡರ್‌ನಿಂದ ಅಲಾರಂ ಅನ್ನು ಹೊಂದಿಸಬಹುದು :
- ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ (Smartphone) ಗೂಗಲ್ ಕ್ಯಾಲೆಂಡರ್ ಆಪ್ ಮೇಲೆ ಕ್ಲಿಕ್ ಮಾಡಿ.
- ನೀವು ಕೆಳಗಿನ ಬಲ ಮೂಲೆಯಲ್ಲಿ (+) ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಕ್ಲಿಕ್ ಮಾಡುತ್ತಲೇ 4 ಆಯ್ಕೆಗಳು ತೆರೆದುಕೊಳ್ಳುತ್ತವೆ. ಇಲ್ಲಿ Reminder  ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ಈಗ ನೀವು ಏನನ್ನು ಅಲಾರಂ ಯಾವ ಕಾರಣಕ್ಕೆ ಸೆಟ್ ಮಾಡುತ್ತೀರಿ ಎಂದು ಕೇಳಲಾಗುತ್ತದೆ. ನಿಮ್ಮ ಕಾರಣ ಏನೇ ಇರಲಿ ಅದನ್ನು ಇಲ್ಲಿ   ಬರೆಯಿರಿ.
- ನಂತರ  ಇಲ್ಲಿ Reminder  ಸಮಯವನ್ನು ಹೊಂದಿಸಬೇಕಾಗುತ್ತದೆ.
- ಇಲ್ಲಿ Does not repeat again'' ಆಯ್ಕೆ ಕಾಣಿಸುತ್ತದೆ. ನೀವು ಪ್ರತಿದಿನ, ಪ್ರತಿ ವಾರ  Reminder ಹೊಂದಲು ಬಯಸಿದರೆ, ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಜ್ಞಾಪನೆಯನ್ನು ಹೊಂದಿಸಬಹುದು.
- ಕೊನೆಯಲ್ಲಿ, ಬಲಭಾಗದಲ್ಲಿ ಸೇವ್ ಆಯ್ಕೆ ಕಾಣಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡಿ.


ಇದನ್ನೂ ಓದಿ : ಕಡಿಮೆ ಬೆಲೆಯ ರಿಯಲ್‌ಮಿ ಸ್ಮಾರ್ಟ್‌ಫೋನ್‌ ಬಿಡುಗಡೆ, 50MP ಕ್ಯಾಮೆರಾದೊಂದಿಗೆ ಸಿಗಲಿದೆ ಈ ಈ ವೈಶಿಷ್ಟ್ಯಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.