ನವದೆಹಲಿ : ನೀವು ಅಪರಿಚಿತ ವ್ಯಕ್ತಿಗೆ ವಾಟ್ಸಾಪ್‌ನಲ್ಲಿ (Whatsapp) ಸಂದೇಶ ಕಳುಹಿಸಬೇಕಾದರೆ ಆ ನಂಬರ್ ಅನ್ನು ನಿಮ್ಮ ಪೋನ್ ನಲ್ಲಿ ಸೇವ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಕೇವಲ ಒಂದು ಮೆಸೇಜ್ ಕಳುಹಿಸುವುದಕ್ಕೋಸ್ಕರ ನಂಬರ್ ಅನ್ನು ಸೇವ್ ಮಾಡುವುದು ಬೇಡವಾಗಿರುತ್ತದೆ. ಅದಕ್ಕಾಗಿಯೇ ಇಂದು ನಾವೊಂದು ಸುಲಭ ಟ್ರಿಕ್ ಅನ್ನು ಹೇಳುತ್ತೇವೆ. ಇದರ ಮೂಲಕ, ಫೋನ್‌ನಲ್ಲಿ ನಂಬರ್ ಅನ್ನು ವ್ ಮಾಡದೆಯೇ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವುದು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ಫೋನ್ ನಲ್ಲಿ  ನಂಬರ್ ಸೇವ್ ಮಾಡದೆ, ಮೆಸೇಜ್ ಕಳುಹಿಸಲು ಈ ಹಂತಗಳನ್ನು ಅನುಸರಿಸಿ : 


1. ಮೊದಲಿಗೆ ಮೊಬೈಲ್ ಬ್ರೌಸರ್ ಅಥವಾ ಡೆಸ್ಕ್ ಟಾಪ್ ನಲ್ಲಿ ವೆಬ್ ಬ್ರೌಸರ್ ಒಪನ್ ಮಾಡಬೇಕು
2. ನಂತರ https://api.whatsapp.com/send?phone=XXXXXXXXXXX. ಲಿಂಕ್ ಅನ್ನು ನಮೂದಿಸಬೇಕು. ಈ ಲಿಂಕ್‌ನಲ್ಲಿ X ಎಂದು ಬರೆದಿರುವ ಜಾಗದಲ್ಲಿ ಕಂಟ್ರಿ ಕೋಡ್‌ನೊಂದಿಗೆ ಫೋನ್  ನಂಬರ್ ಅನ್ನು ಹಾಕಬೇಕಾಗುತ್ತದೆ. 


ಇದನ್ನೂ ಓದಿ : Realme ಯಲ್ಲಿ 10 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಫೋನ್ ಗಳು, ಲಾಂಗ್ ಬ್ಯಾಟರಿ, ಉತ್ತಮ ಕ್ಯಾಮೆರಾ!


3. ಈ ನಂಬರ್ ಯಾವ ನಂಬರ್ ಅನ್ನು ಸೇವ್ ಮಾಡದೆ, ವಾಟ್ಸಾಪ್ ಸಂದೇಶ (Whatsapp message) ಕಳುಹಿಸಬೇಕೋ ಆ ವ್ಯಕ್ತಿಯದ್ದಾಗಿರಬೇಕು. 
4. ನೀವು ನಂಬರ್ ಹಾಕಿದಾಗ, ಕೆಳ  ಒಂದು ಮೆಸೇಜ್ ಕಾಣಿಸುತ್ತದೆ. ಅಂದರೆ Message +911234567890 on WhatsApp  ಎಂದು ಕಾಣಿಸುತ್ತದೆ. ಇದರ ಕೆಳಗೆ ಶೇರ್ ಮಾಡಬೇಕಾದರೆ  ಟ್ಯಾಪ್ ಮಾಡಿ ಎಂದು ಬರೆದಿರುವುದು ಕಾಣಿಸುತ್ತದೆ. ಓಪನ್ ವಾಟ್ಸಾಪ್ ಡೆಸ್ಕ್ ಟಾಪ್‌ನಲ್ಲಿ ಟ್ಯಾಪ್ ಮಾಡಬೇಕಾದ ಪಾಪ್-ಅಪ್ ಕೂಡ ಕಾಣಿಸಿಕೊಳ್ಳುತ್ತದೆ.
5. ಈಗ Looks like you don't have WhatsApp installed! DOWNLOAD or use WhatsApp Web  ಎಂಬ ಮೆಸೇಜ್ ಬರುತ್ತದೆ. ಹಾಗಾಗಿ, ಮೊದಲು ವಾಟ್ಸಾಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅಥವಾ WhatsApp ವೆಬ್‌ನಿಂದ ಆಕ್ಸಸ್ ಮಾಡಿಕೊಳ್ಳಬೇಕು.
6. ಇಷ್ಟಾದ ನಂತರ ಸೇವ್ ಮಾಡದಿರುವ ನಂಬರ್ ಗೆ ಮೆಸೇಜ್ ಕಳುಹಿಸುವುದು ಸಾಧ್ಯವಾಗುತ್ತದೆ. 


5 ಡಿವೈಸ್ ಗಳಲ್ಲಿ ಏಕಕಾಲದಲ್ಲಿ ಕಾರ್ಯನಿರ್ವಹಿಸಲಿದೆ ವಾಟ್ಸಾಪ್ :
ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಪ್ರಸ್ತುತ WhatsApp Multi-Device ವೈಶಿಷ್ಟ್ಯದ ಮೇಲೆ ಕೆಲಸ ಮಾಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಫೀಚರ್ ನ (Whatsapp features) ಲಾಭವನ್ನು ಬಳಕೆದಾರರು ಪಡೆಯಬಹುದು ಎನ್ನಲಾಗಿದೆ. ಈ ವೈಶಿಷ್ಟ್ಯ ಬಳಕೆದಾರರ ಬಳಕೆಗೆ ಸಿಕ್ಕಿದರೆ , ಏಕಕಾಲದಲ್ಲಿ 5 ಡಿವೈಸ್ ಒಂದೇ ಸಂಖ್ಯೆಯಿಂದ ವಾಟ್ಸಾಪ್ ಅನ್ನು ಚಲಾಯಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ : ಏರ್ಟೆಲ್ ನ 79 ರೂ. ಪ್ಲಾನ್ ಗೆ ಟಕ್ಕರ್ ನೀಡುತ್ತಿದೆ Jio All In One Plan


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.