ಬೆಂಗಳೂರು: ಕೆಲ ಜೀಮೈಲ್ ಖಾತೆಗಳನ್ನು ಗೂಗಲ್ ಡಿಸೆಂಬರ್ 1, 2023 ರಿಂದ ಮುಚ್ಚುತ್ತಿದೆ. ಡಿಸೆಂಬರ್ 1, 2023 ರಿಂದ ನಿಷ್ಕ್ರಿಯ ಖಾತೆ ನೀತಿಯನ್ನು ಜಾರಿಗೊಳಿಸುವುದಾಗಿ ಗೂಗಲ್ ಘೋಷಿಸಿದೆ. ನೀವು ಜೀಮೈಲ್ ಬಳಕೆದಾರರಾಗಿದ್ದರೆ ಮತ್ತು ಕಳೆದ 2 ವರ್ಷಗಳಿಂದ ನಿಮ್ಮ ಜೀಮೈಲ್ ಖಾತೆಯನ್ನು ಬಳಸದಿದ್ದರೆ, ಅಂತಹ ಎಲ್ಲಾ ಜೀಮೇಲ್ ಖಾತೆಗಳನ್ನು ಈ ನೀತಿಯ ಅಡಿ ಮುಚ್ಚಲಾಗುತ್ತದೆ. ಅಲ್ಲದೆ, ಜೀಮೇಲ್, ಫೋಟೋಗಳು ಮತ್ತು ಡ್ರೈವ್ ಡಾಕ್ಯುಮೆಂಟ್‌ಗಳನ್ನು ದೀರ್ಘಕಾಲದವರೆಗೆ ಬಳಸದಿದ್ದರೆ, ಅವುಗಳನ್ನು ಮುಚ್ಚಲಾಗುವುದು ಎಂದು ಗೂಗಲ್ ಹೇಳಿದೆ. (Technology News In Kannada )


COMMERCIAL BREAK
SCROLL TO CONTINUE READING

ಯಾವ ಜೀಮೇಲ್ ಖಾತೆಗಳು ಸ್ಥಗಿತಗೊಳ್ಳಲಿವೆ?
ನೀವು ದೀರ್ಘಕಾಲದವರೆಗೆ ನಿಮ್ಮ ಗೂಗಲ್ ಖಾತೆಗೆ ಲಾಗ್ ಇನ್ ಮಾಡದಿದ್ದರೆ, ನಿಮ್ಮ ಖಾತೆಯನ್ನು ಮುಚ್ಚಬಹುದು. ನೀವು ನಿರಂತರವಾಗಿ ಜೀಮೇಲ್ ಬಳಸುತ್ತಿದ್ದರೆ. ಅಂದರೆ, ನೀವು ಜೀಮೇಲ್ ನ ಸಕ್ರಿಯ ಬಳಕೆದಾರರಾಗಿದ್ದರೆ, ನೀವು ಚಿಂತಿಸಬೇಕಾಗಿಲ್ಲ. ಅಂತಹ ವ್ಯಕ್ತಿಯ ಜಿಮೇಲ್ ಖಾತೆಯನ್ನು ಅಳಿಸಲಾಗುವುದಿಲ್ಲ.


ಇದನ್ನೂ ಓದಿ-ಏರ್ಟೆಲ್ ನಿಂದ 3 ತಿಂಗಳ ಬಂಬಾಟ್ ಪ್ರೀಪೈಡ್ ಪ್ಲಾನ್ ಬಿಡುಗಡೆ, ಉಚಿತ ನೆಟ್ ಫ್ಲಿಕ್ಸ್ ಜೊತೆಗೆ ಹಲವು ಲಾಭಗಳು ಲಭ್ಯ!


ಈ ನೀತಿಯ ಅಡಿ ಯಾವ ಉತ್ಪನ್ನಗಳನ್ನು ಸೇರಿಸಲಾಗಿದೆ
ವಿಶೇಷವೆಂದರೆ ಶಾಲೆ ಅಥವಾ ವ್ಯಾಪಾರ ಜಗತ್ತಿನ ಗೂಗಲ್ ಮತ್ತು ಜೀಮೇಲ್ ಖಾತೆಗಳನ್ನು ಗೂಗಲ್ ನ ಹೊಸ ನೀತಿಯಲ್ಲಿ ಸೇರಿಸಲಾಗಿಲ್ಲ. ಜೀಮೇಲ್, ಡ್ರೈವ್, ಡಾಕ್ಸ್, ಮೀಟ್, ಕ್ಯಾಲೆಂಡರ್ ಮತ್ತು ಫೋಟೋಗಳಂತಹ ಗೂಗಲ್ ಒಡೆತನದ ಉತ್ಪನ್ನಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಯೂಟ್ಯೂಬ್ ಮತ್ತು ಬ್ಲಾಗರ್ ಅನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಗೂಗಲ್ ಹೇಳಿದೆ.


ಇದನ್ನೂ ಓದಿ-ಇನ್ಸ್ಟಾಗ್ರಾಮ್ ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಸ್ಟಾನಲ್ಲಿ ಇನ್ಮುಂದೆ ನೀವು ಇದನ್ನೂ ಮಾಡಬಹುದು!


ನಿಮ್ಮ ಡೇಟಾವನ್ನು ಉಳಿಸಿ
ನೀವು ದೀರ್ಘಕಾಲದವರೆಗೆ ನಿಮ್ಮ ಜೀಮೇಲ್ ಖಾತೆಯನ್ನು ಬಳಸದಿದ್ದರೆ, ನಿಮ್ಮ ಗೂಗಲ್ ನಿಮ್ಮ ಡೇಟಾ ಅಳಿಸಿ ಹಾಕಲಿದೆ. ನಿಮ್ಮ ಜೀಮೇಲ್ ಖಾತೆಯನ್ನು ನಿಷ್ಕ್ರಿಯಗೊಳಿಸುವುದರಿಂದ ನಿಮ್ಮ ಡೇಟಾವನ್ನು ಅಳಿಸಲು ನೀವು ಬಯಸದಿದ್ದರೆ, ನೀವು ಡಿಸೆಂಬರ್ 1 ರ ಮೊದಲು ನಿಮ್ಮ ಜೀಮೇಲ್ ಡೇಟಾವನ್ನು ಉಳಿಸಬೇಕು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ