ನವದೆಹಲಿ: YouTube, Gmail Down: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಯೂಟ್ಯೂಬ್ (Youtube) ಮತ್ತು ಜಿಮೇಲ್ (Gmail) ಸ್ಥಗಿತಗೊಂಡಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡ ನಂತರ ಯೂಟ್ಯೂಬ್, ಜಿಮೇಲ್ ಸೇವೆಗಳನ್ನು ಇದೀಗ ಜಾಗತಿಕವಾಗಿ ಮರುಸ್ಥಾಪಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ, ಬಳಕೆದಾರರು ಯೂಟ್ಯೂಬ್, ಯೂಟ್ಯೂಬ್ ಟಿವಿ ಮತ್ತು ಯೂಟ್ಯೂಬ್ ಸಂಗೀತವನ್ನು ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ . ಇದಲ್ಲದೆ, Gmail ಬಳಕೆದಾರರು ಸಹ ಲಾಗ್ ಇನ್ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಯುಟ್ಯೂಬ್ ಕೂಡ ತಾಂತ್ರಿಕ ನ್ಯೂನಟೆಗಳಿಂದಾಗಿ ವಿಡಿಯೋ ಪ್ಲಾಟ್ ಫಾರ್ಮ್ ಡೌನ್ ಆಗಿತ್ತು ಎಂದು ದೃಢಪಡಿಸಿದೆ. ಜನಪ್ರೀಯ ವಿಡಿಯೋ ಪ್ಲಾಟ್ ಫಾರ್ಮ್ ಡೌನ್ ಆಗುತ್ತಲೇ ಸಾಮಾಜಿಕ ಮಾಧ್ಯಮಗಳಲ್ಲಿ #YouTubeDown ಟ್ರೆಂಡ್ ಆರಂಭಿಸಿದೆ. 


COMMERCIAL BREAK
SCROLL TO CONTINUE READING

YouTube ಹೇಳಿದ್ದೇನು?
ಈ ಕುರಿತು YouTube ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸಾಮಾಜಿಕ ವಿಡಿಯೋ ತಾಣ, "ಸಾಕಷ್ಟು ಪ್ರಮಾಣದಲ್ಲಿ ಜನರು ಯುಟ್ಯೂಬ್ ಬಳಕೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ನಮ್ಮ ತಂಡ ಸದಸ್ಯರು ಜಾಗರೂಕರಾಗಿದ್ದು, ಸಮಸ್ಯೆ ನಿವಾರಣೆಗೆ ಕಾರ್ಯತತ್ಪರರಾಗಿದ್ದಾರೆ. ಹೆಚ್ಚಿನ ವರದಿ ನಮ್ಮ ಬಳಿ ಬಂದಾಗ ಕೂಡಲೇ ನಾವು ನಿಮ್ಮ ಮುಂದೆ ಮತ್ತೆ ಹಾಜರಾಗಲಿದ್ದೇವೆ" ಎಂದಿತ್ತು.


Googleನ ಯಾವ ಯಾವ ಸೇವೆಗಳು ಪ್ರಭಾವಿತಗೊಂಡಿವೆ?
ಈ ಕುರಿತು ಪಟ್ಟಿ ಬಿಡುಗಡೆ ಮಾಡಿರುವ ಗೂಗಲ್ ಈ ಕ್ರ್ಯಾಶ್ ನಿಂದ ಯಾವ ಯಾವ ಸೇವೆಗಳ ಮೇಲೆ ಪ್ರಭಾವ ಉಂಟಾಗಿದೆ ಎಂಬುದನ್ನು ತಿಳಿಸಿದೆ. ಇದರಲ್ಲಿ Gmail, Google Drive, Google Docs, Google Chat, Googal Meet, Google Voice ಗಳಂತಹ ಸೇವೆಗಳು ಶಾಮೀಲಾಗಿವೆ. 


ಇದಲ್ಲದೆ Google Calender, Google Sheets, Google Slides, Google Groups, Classic Hangouts, Currents, Google Forms, Google Cloud Search, Google Copy ಹಾಗೂ Google Task ಸೇವೆಗಳೂ ಕೂಡ ಪ್ರಭಾವಿತಗೊಂಡಿವೆ. ಜೊತೆಗೆ ಅಡ್ಮಿನ್ ಕನ್ಸೋಲ್, ಗೂಗಲ್ ಅನಲಿಟಿಕ್ಸ್, ಆಪ್ ಮೇಕರ್, ಗೂಗಲ್ ಮ್ಯಾಪ್ಸ, ಬ್ಲಾಗರ್, ಗೂಗಲ್ ಸಿಂಕ್ ಫಾರ್ ಮೊಬೈಲ್ ಹಾಗೂ ಕ್ಲಾಸ್ ರೂಂ ಮೇಲೂ ಕೂಡ ಈ ಕ್ರ್ಯಾಶ್ ನಿಂದ ಪ್ರಭಾವ ಉಂಟಾಗಿದೆ.


ಬಳಕೆದಾರರಿಗೆ ಉತ್ತರ ನೀಡಿದ ಜಿಮೇಲ್
ಜಿಮೇಲ್ ಡೌನ್ ಆದ ಕುರಿತು ದೂರು ಬಂದ ಬಳಿಕ ಟ್ವಿಟ್ಟರ್ ಮೇಲೆ ಬಳಕೆದಾರರನ್ನು ಪ್ರಶ್ನಿಸಿದ ಜಿಮೇಲ್ "ನೀವು ಅಧಿಕ ಮಾಹಿತಿ ನೀಡಬಹುದೇ? ನಿಮ್ಮ ಜಿಮೇಲ್ ಖಾತೆಯಲ್ಲಿ ಏನಾಗುತ್ತಿದೆ ಎಂಬುದನ್ನು ವಿವರಿಸುವಿರಾ? ಮತ್ತು ನೀವು ನಿಮ್ಮ ಜಿಮೇಲ್ ಅನ್ನು ಹೇಗೆ ತೆರೆಯುತ್ತಿರುವಿರಿ (ಅಂಡ್ರಾಯಿಡ್, ಐಓಎಸ್ ಅಥವಾ ಬ್ರೌಸರ್ ಮೇಲೆ)? ನಾವು ನಿಮಗೆ ಸಹಾಯ ಮಾಡಲು ಸಂಪೂರ್ಣ ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದೆ


YouTube ವಿಡಿಯೋ ಗ್ಯಾಲರಿಯಲ್ಲಿ ಸೇವ್ ಮಾಡಬೇಕೆ? ಇಲ್ಲಿದೆ ಸಿಂಪಲ್ ಟ್ರಿಕ್