YouTube Diwali Offer: ಈ ದೀಪಾವಳಿಯಲ್ಲಿ ಯೂಟ್ಯೂಬ್ ನೀಡುತ್ತಿದೆ ಬಂಪರ್ ಆಫರ್, ಕೇವಲ 10 ರೂ.ಗೆ ಸಿಗಲಿದೆ ಈ ಸೌಲಭ್ಯ
YouTube Diwali Gift: ದೀಪಾವಳಿಯ ಆಗಮನದೊಂದಿಗೆ, ಉಡುಗೊರೆಗಳು ಮತ್ತು ಕೊಡುಗೆಗಳ ಸುರಿಮಳೆಯು ಪ್ರಾರಂಭವಾಗಿದೆ. ಪ್ರತಿಯೊಂದು ಕಂಪನಿಗಳು ಹೊಸ ಹೊಸ ಆಫರ್ಗಳನ್ನು ನೀಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಯೂಟ್ಯೂಬ್ ತನ್ನ ಬಳಕೆದಾರರಿಗೆ ಉತ್ತಮ ರಿಯಾಯಿತಿಯಲ್ಲಿ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತಿದೆ.
ಯೂಟ್ಯೂಬ್ ಪ್ರೀಮಿಯಂ ಖಾತೆ: ಪ್ರಸ್ತುತ ಡಿಜಿಟಲ್ ಯುಗದಲ್ಲಿ ಎಲ್ಲವೂ ಬೆರಳ ತುದಿಯಲ್ಲಿಯೇ ಲಭ್ಯವಿದೆ. ನಮಗೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೆ ಗೂಗಲ್, ಯೂಟ್ಯೂಬ್‌ನಿಂದ ಅದನ್ನು ಸುಲಭವಾಗಿ ಪಡೆಯುತ್ತೇವೆ. ಯೂಟ್ಯೂಬ್‌ನಲ್ಲಿ ಮನರಂಜನೆಯ ದೊಡ್ಡ ಸಮಸ್ಯೆ ಎಂದರೆ ಮಧ್ಯದಲ್ಲಿ ಬರುವ ಜಾಹೀರಾತುಗಳು. ಜಾಹೀರಾತನ್ನು ತೆಗೆದುಹಾಕಬೇಕಾದರೆ ಪ್ರೀಮಿಯಂ ಚಂದಾದಾರಿಕೆಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಯೂಟ್ಯೂಬ್ ತನ್ನ ಬಳಕೆದಾರರಿಗೆ ಭರ್ಜರಿ ಕೊಡುಗೆಯನ್ನು ನೀಡಿದೆ. ಇದರ ಮೂಲಕ ನೀವು ಕೇವಲ 10 ರೂ.ಗಳಲ್ಲಿ ಮೂರು ತಿಂಗಳವರೆಗೆ ಜಾಹೀರಾತು ಮುಕ್ತ ವೀಡಿಯೊ ಸ್ಟ್ರೀಮಿಂಗ್ ಅನ್ನು ಆನಂದಿಸಬಹುದು.
ಈ ಆಫರ್ ಯಾರಿಗೆ ಲಭ್ಯವಾಗಲಿದೆ?
ಯೂಟ್ಯೂಬ್ ಪ್ರೀಮಿಯಂ ಖಾತೆ ಚಂದಾದಾರಿಕೆಯಲ್ಲಿ ಭಾರಿ ರಿಯಾಯಿತಿಯ ಕೊಡುಗೆಯನ್ನು ಭಾರತೀಯರಿಗೆ ಮಾತ್ರ ಪರಿಚಯಿಸಿದೆ. ಅಂತಹ ಯೂಟ್ಯೂಬ್ ಪ್ರೀಮಿಯಂಗೆ ಚಂದಾದಾರರಾಗಲು, ತಿಂಗಳಿಗೆ 129 ರೂ. ಪಾವತಿಸಬೇಕಾಗುತ್ತದೆ. ಇದರ ಪ್ರಕಾರ ನೋಡಿದರೆ ಮೂರು ತಿಂಗಳಲ್ಲಿ ಒಟ್ಟು 393 ರೂ.ಗಳು ಖರ್ಚಾಗುತ್ತವೆ. ಆದರೆ ಯೂಟ್ಯೂಬ್ ನ ಈ ಆಫರ್ ಮೂಲಕ ನೀವು ಕೇವಲ 10 ರೂಪಾಯಿಗಳಲ್ಲಿ ಈ ಸೌಲಭ್ಯದ ಲಾಭ ಪಡೆಯಬಹುದು.
ಲಾಭವನ್ನು ಹೇಗೆ ಪಡೆಯುವುದು?
ನಿಮ್ಮ ಯೂಟ್ಯೂಬ್ ಖಾತೆಗೆ ಹೋಗುವ ಮೂಲಕ, ನೀವು ಪ್ರೀಮಿಯಂ ಪಡೆಯಿರಿ ಎಂಬ ಆಯ್ಕೆಗೆ ಹೋಗಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಪಾವತಿಸುವ ಮೂಲಕ ನೀವು ಈ ಹೊಸ ಕೊಡುಗೆಯನ್ನು ಆನಂದಿಸಬಹುದು.
ಇದನ್ನೂ ಓದಿ- Tallest Tree: ಕೊನೆಗೂ ಸಿಕ್ತು ವಿಶ್ವದ ಅತ್ಯಂತ ಎತ್ತರದ ಗಿಡ! ವಯಸ್ಸು ಕೇಳಿ ನೀವೂ ದಂಗಾಗುವಿರಿ
ಕೊಡುಗೆಯ ಪ್ರಯೋಜನಗಳೇನು?
* ಅಕ್ಟೋಬರ್-ನವೆಂಬರ್ ತಿಂಗಳು ಹಬ್ಬಗಳ ಸೀಸನ್. ಅಂತಹ ಸಮಯದಲ್ಲಿ, ಯೂಟ್ಯೂಬ್‌ಗೆ ಅಗ್ಗದ ಚಂದಾದಾರಿಕೆಯನ್ನು ತೆಗೆದುಕೊಳ್ಳುವ ಮೂಲಕ ಜಾಹೀರಾತು ಮುಕ್ತ ಮನರಂಜನೆಯನ್ನು ಆನಂದಿಸಬಹುದು. ಇದರೊಂದಿಗೆ ನೀವು ಹಬ್ಬಗಳ ಮೋಜನ್ನು ದ್ವಿಗುಣಗೊಳಿಸಬಹುದು.
* ನೀವು ಯೂಟ್ಯೂಬ್‌ನ ಜಾಹೀರಾತು ಮುಕ್ತ ವೀಡಿಯೊಗಳನ್ನು ಸೇವ್ ಕೂಡ ಮಾಡಬಹುದು.
* ನೀವು ಡೆಸ್ಕ್‌ಟಾಪ್‌ನಲ್ಲಿ ಈ ಜಾಹೀರಾತು ಮುಕ್ತ ಸೇವೆಯ ಲಾಭವನ್ನು ಪಡೆಯಬಹುದು, ಅಂದರೆ ಹಬ್ಬಗಳ ಸಮಯದಲ್ಲಿ, ನೀವು ಯೂಟ್ಯೂಬ್‌ನಲ್ಲಿ ಇಡೀ ಕುಟುಂಬದೊಂದಿಗೆ ಕುಳಿತು ಜಾಹಿರಾತು ಮುಕ್ತ ವಿಡಿಯೋಗಳನ್ನು ಆನಂದಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.