ನವದೆಹಲಿ: ಯುಟ್ಯೂಬ್ ತನ್ನ ಬಳಕೆದಾರರಿಗಾಗಿ 'ಮೋಸ್ಟ್ ರಿಪ್ಲೇಡ್' ವೈಶಿಷ್ಟ್ಯವನ್ನು ಹೊರತಂದಿದೆ. ಮೊದಲು ಇದು ಯುಟ್ಯೂಬ್ ಪ್ರೀಮಿಯಂ' ಚಂದಾದಾರರಿಗೆ ಮಾತ್ರ ಲಭ್ಯವಿತ್ತು, ಆದರೆ ಈಗ ಎಲ್ಲರೂ ಇದನ್ನು ಬಳಸಬಹುದು. ಈ ವೈಶಿಷ್ಟ್ಯವನ್ನು ವೆಬ್ ಮತ್ತು ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಏನಿದು 'ಮೋಸ್ಟ್ ರಿಪ್ಲೇಡ್' ವೈಶಿಷ್ಟ್ಯ? 
ಯುಟ್ಯೂಬ್ ನ 'ಮೋಸ್ಟ್ ರಿಪ್ಲೇಡ್' ವೈಶಿಷ್ಟ್ಯವು ವೀಕ್ಷಕರಿಗೆ ವೀಡಿಯೊದ ಹೆಚ್ಚು ವೀಕ್ಷಿಸಿದ ಭಾಗವನ್ನು ತಿಳಿದುಕೊಳ್ಳಲು ಅನುಮತಿಸುತ್ತದೆ. ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಬಳಕೆದಾರರು ವೀಡಿಯೊದ ಪ್ರಮುಖ ಭಾಗವನ್ನು ನೋಡಲು ಸಂಪೂರ್ಣ ವೀಡಿಯೊವನ್ನು ವೀಕ್ಷಿಸುವ ಅಗತ್ಯವಿಲ್ಲ. ಅವರು ಸಮಯವನ್ನು ವ್ಯರ್ಥ ಮಾಡದೆ ನೇರವಾಗಿ ವೀಡಿಯೊದ ಮುಖ್ಯ ಭಾಗಕ್ಕೆ ಬದಲಾಯಿಸಬಹುದು. 


ಈ ವೈಶಿಷ್ಟ್ಯವು ದೀರ್ಘಾವಧಿಯ ವೀಡಿಯೊಗಳಿಗೆ ಅಥವಾ ಟೈಮ್‌ಸ್ಟ್ಯಾಂಪ್‌ಗಳು ಅಥವಾ ಅಧ್ಯಾಯಗಳನ್ನು ಬಳಸಿಕೊಂಡು ವಿಭಾಗಗಳಾಗಿ ವಿಭಜಿಸದಿರುವವರಿಗೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ. ಬಳಕೆದಾರರಿಗೆ ಯಾವುದೇ ಯುಟ್ಯೂಬ್ ವೀಡಿಯೊದ ಮೂಲಕ ಅತ್ಯಂತ ಆಸಕ್ತಿದಾಯಕ ಭಾಗಗಳನ್ನು ಹುಡುಕಲು ಅನುವು ಮಾಡಿಕೊಡುತ್ತದೆ.


ಇದನ್ನೂ ಓದಿ- WhatsApp Trick: ಈಗ ಟ್ರೈನ್ ರಿಯಲ್ ಟೈಮ್ ಅಪ್‌ಡೇಟ್ ಅನ್ನು ವಾಟ್ಸಾಪ್ ಮೂಲಕವೂ ತಿಳಿಯಬಹುದು


ಯುಟ್ಯೂಬ್ ನ 'ಮೋಸ್ಟ್ ರಿಪ್ಲೇಡ್' ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ?
ಯುಟ್ಯೂಬ್ ನಲ್ಲಿ 'ಮೋಸ್ಟ್ ರಿಪ್ಲೇಡ್' ವೈಶಿಷ್ಟ್ಯದ ಅಡಿಯಲ್ಲಿ  ವೀಡಿಯೊದ ಅವಧಿಯ ಮೇಲೆ ಗ್ರಾಫ್ ಕಾಣಿಸುತ್ತದೆ, ವೀಕ್ಷಕರು ಹೆಚ್ಚು ವೀಕ್ಷಿಸಿರುವ ವೀಡಿಯೊದ ಭಾಗಗಳಲ್ಲಿ ಈ ಗ್ರಾಫ್ ಹೆಚ್ಚಾಗಿರುತ್ತದೆ. ಈ ವೈಶಿಷ್ಟ್ಯದ ಸಹಾಯದಿಂದ, ವಿಷಯ ರಚನೆಕಾರರು ಮತ್ತು ವ್ಲಾಗರ್‌ಗಳು ತಮ್ಮ ವೀಡಿಯೊದ ಯಾವ ಭಾಗವನ್ನು ಜನರು ಹೆಚ್ಚು ಇಷ್ಟಪಟ್ಟಿದ್ದಾರೆ ಎಂಬುದನ್ನು ತಿಳಿಯುತ್ತಾರೆ. ಇದಲ್ಲದೇ, ತರಾತುರಿಯಲ್ಲಿ ವೀಡಿಯೊಗಳನ್ನು ವೀಕ್ಷಿಸಲು ಅಥವಾ ವೀಡಿಯೊದ ಮುಖ್ಯ ಭಾಗವನ್ನು ವೀಕ್ಷಿಸಲು ಇಷ್ಟಪಡುವ ಬಳಕೆದಾರರಿಗೆ ಈ ವೈಶಿಷ್ಟ್ಯವು ಉತ್ತಮ ಎಂದು ಸಾಬೀತುಪಡಿಸುತ್ತದೆ.


ನಾವು ಮೊದಲೇ ಹೇಳಿದಂತೆ ಈ ವೈಶಿಷ್ಟ್ಯವು ಮೊದಲು ಯುಟ್ಯೂಬ್ ಪ್ರೀಮಿಯಂ ಚಂದಾದಾರರು ಮಾತ್ರ ಪ್ರವೇಶಿಸಬಹುದಾದ ಪ್ರಯೋಗವಾಗಿತ್ತು. ಈ ವೈಶಿಷ್ಟ್ಯವನ್ನು ಮೊದಲು ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಲಾಯಿತು. ಆದಾಗ್ಯೂ, ಆ ಸಮಯದಲ್ಲಿ ಈ ವೈಶಿಷ್ಟ್ಯವನ್ನು ಕೆಲವು ಬಳಕೆದಾರರಿಗೆ ಪರೀಕ್ಷೆಗಾಗಿ ಮಾತ್ರ ಹೊರತರಲಾಯಿತು. ಪರೀಕ್ಷೆಯ ನಂತರ, ಇದು ಪ್ರೀಮಿಯಂ ಚಂದಾದಾರರಿಗೆ ಲಭ್ಯವಾಯಿತು. ಆದರೆ ಇದು ಈಗ ಬ್ರೌಸರ್ ಅಥವಾ ಕಂಪನಿಯ ಅಧಿಕೃತ ಐಒಎಸ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಂದ ಯುಟ್ಯೂಬ್ ಅನ್ನು ಬಳಸುವ ಎಲ್ಲರಿಗೂ ಲಭ್ಯವಿದೆ. 


ಇದನ್ನೂ ಓದಿ- ನಿಮ್ಮ ಕರೆಯನ್ನು ಯಾರಾದರೂ ರೆಕಾರ್ಡ್ ಮಾಡುತ್ತಿದ್ದಾರೆಯೇ ಎನ್ನುವುದನ್ನು ಸುಲಭಾವಾಗಿ ಕಂಡುಕೊಳ್ಳಿ


ಇತ್ತೀಚೆಗೆ ಯುಟ್ಯೂಬ್ ಚಾನಲ್‌ನ ಪಾವತಿಸಿದ ಚಂದಾದಾರಿಕೆಯನ್ನು ಉಡುಗೊರೆಯಾಗಿ ನೀಡುವ ವೈಶಿಷ್ಟ್ಯವನ್ನು ಹೊರತಂದಿದೆ. ಪ್ರಸ್ತುತ, ಈ ವೈಶಿಷ್ಟ್ಯವು ಬೀಟಾ ಹಂತದಲ್ಲಿದೆ. ಈ ವೈಶಿಷ್ಟ್ಯದ ಸಹಾಯದಿಂದ, ಸ್ಟ್ರೀಮರ್‌ಗಳ ಚಾನಲ್ ಚಂದಾದಾರಿಕೆಯು ಹೆಚ್ಚಾಗುತ್ತದೆ ಎನ್ನಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.