Realme: ಈ ಫೋನಿನಲ್ಲಿ ಕೇವಲ 5% ಬ್ಯಾಟರಿಯಲ್ಲೂ 2 ಗಂಟೆಗಳ ಕಾಲ ಯೂಟ್ಯೂಬ್ ನೋಡಬಹುದಂತೆ!
Realme ತನ್ನ ಮುಂದಿನ ಫೋನ್ Realme C21Y ಅನ್ನು ಈ ವಾರವೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಫೋನ್ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
ನವದೆಹಲಿ: ರಿಯಲ್‌ಮಿ ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. Realme ಕಳೆದ ವರ್ಷ ವಿಯೆಟ್ನಾಂನಲ್ಲಿ Realme C21Y ಅನ್ನು ಬಿಡುಗಡೆ ಮಾಡಿತು. ಈಗ ಈ ಫೋನ್ ಭಾರತದಲ್ಲಿ ಆಗಸ್ಟ್ 23 ರಂದು ಮಧ್ಯಾಹ್ನ 12:30 ಕ್ಕೆ ಬಿಡುಗಡೆಯಾಗಲಿದೆ. ಈ ಫೋನ್ ಯಾವ ವೈಶಿಷ್ಟ್ಯಗಳನ್ನು ತರುತ್ತದೆ ಎಂದು ತಿಳಿಯೋಣ ...
ಕ್ಯಾಮೆರಾ:
Realme C21Y ಫೋನಿನಲ್ಲಿ 13 ಎಂಪಿ ಎಐ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, ಇದರಲ್ಲಿ 2 ಎಂಪಿ ಬಿ & ಡಬ್ಲ್ಯೂ ಲೆನ್ಸ್ ಮುಖ್ಯ ಸೆನ್ಸರ್ ಮತ್ತು 2 ಎಂಪಿ ಮ್ಯಾಕ್ರೋ ಶೂಟರ್ ಇದೆ ಎಂದು ತಿಳಿದು ಬಂದಿದೆ. ಇದರ ಮುಂಭಾಗದ ಕ್ಯಾಮರಾ ನೀರಿನ ಹನಿಯ ಆಕಾರದಲ್ಲಿದೆ ಮತ್ತು ಇದು 5MP ಆಗಿದೆ. ಈ ಫೋನ್ ಸ್ಲೋ ಮೋಷನ್ ಮೋಡ್, ಸೂಪರ್ ನೈಟ್ ಸ್ಕೇಪ್ ಮೋಡ್, ಪೋರ್ಟ್ರೇಟ್ ಮೋಡ್, 1080 ಪಿ ವೀಡಿಯೋ ರೆಕಾರ್ಡಿಂಗ್, ಎಐ ಬ್ಯೂಟಿ ಇತ್ಯಾದಿ ಹಲವಾರು ಮೋಡ್‌ಗಳೊಂದಿಗೆ ಬರುತ್ತದೆ.
ಇದನ್ನೂ ಓದಿ- OPPO Smartphone: ಭಾರೀ ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ ಒಪ್ಪೋ ಸ್ಮಾರ್ಟ್ಫೋನ್, Jio ಬಳಕೆದಾರರಿಗೆ ಸಿಗಲಿದೆ ಈ ಆಫರ್
ಬಲವಾದ ಬ್ಯಾಟರಿಯ ಕೆಲವು ವೈಶಿಷ್ಟ್ಯಗಳು:
5,000mAh ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್‌ಫೋನ್ (Smartphone) ಸೂಪರ್ ಪವರ್ ಸೇವಿಂಗ್ ಮೋಡ್‌ನೊಂದಿಗೆ ಬರುತ್ತದೆ. ಈ ಮೋಡ್‌ನ ಸಹಾಯದಿಂದ, ನೀವು 2.33 ದಿನಗಳ ಸ್ಟ್ಯಾಂಡ್‌ಬೈ ಸಮಯ, 2.37 ಗಂಟೆಗಳ ಕರೆ ಮತ್ತು 5% ಬ್ಯಾಟರಿಯಲ್ಲೂ ಸಹ 1.45 ಗಂಟೆಗಳ ಕಾಲ ಯೂಟ್ಯೂಬ್ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಈ ಫೋನಿನಲ್ಲಿನ ಇನ್ನಿತಿರ ವೈಶಿಷ್ಟ್ಯಗಳು:
Realme C21Y ಫೋನ್‌ನ ಹಿಂಭಾಗವು ಜ್ಯಾಮಿತೀಯ ಕಲಾ ವಿನ್ಯಾಸ ಹಾಗೂ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿರುತ್ತದೆ. 6.5-ಇಂಚಿನ IPS LCD ಡಿಸ್ಪ್ಲೇ ಮತ್ತು 1600x720 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಈ ಫೋನ್‌ಗೆ ಆಕ್ಟಾ-ಕೋರ್ ಯೂನಿಸಾಕ್ T610 SoC ಪ್ರೊಸೆಸರ್ ಇದೆ. ಭಾರತದಲ್ಲಿ, ಈ ಫೋನ್ 3/4GB RAM ಮತ್ತು 32/54GB ಸಂಗ್ರಹ ಆಯ್ಕೆಯೊಂದಿಗೆ ಬರುವ ಸಾಧ್ಯತೆಯಿದೆ. 4 ಜಿ ವೈಶಿಷ್ಟ್ಯಗಳನ್ನು ಬೆಂಬಲಿಸುವ ರಿಯಲ್‌ಮಿ ಸಿ 21 ವೈ ನಲ್ಲಿ ಗ್ರಾಹಕರು ಡ್ಯುಯಲ್ ಸಿಮ್, ಬ್ಲೂಟೂತ್ 5.0, ವೈಫೈ, 3.5 ಎಂಎಂ ಜ್ಯಾಕ್ ಮತ್ತು ಮೈಕ್ರೊ-ಯುಎಸ್‌ಬಿ ಪೋರ್ಟ್ ಅನ್ನು ಕನೆಕ್ಟಿವಿಟಿಗಾಗಿ ಪಡೆಯುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ- ಅಕ್ಟೋಬರ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್ OnePlus 9 RT ಬಿಡುಗಡೆ
ರಿಯಲ್‌ಮಿ ಸಿ 21 ವೈ ಬೆಲೆ ಎಷ್ಟು?
ವಿಯೆಟ್ನಾಂನಲ್ಲಿ, ಈ ಫೋನ್ ಅನ್ನು 3,490,000 VND ಗೆ ಮಾರಾಟ ಮಾಡಲಾಗುತ್ತಿದೆ, ಆದ್ದರಿಂದ ಅದರ ಪ್ರಕಾರ ಭಾರತದಲ್ಲಿ ಇದರ ಬೆಲೆ ಸುಮಾರು 11,300 ರೂ. ಎಂದು ಅಂದಾಜಿಸಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಕಂಪನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದರೂ, ಇದು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ