ನವದೆಹಲಿ, ಏಪ್ರಿಲ್ 26 : ತಂತ್ರಜ್ಞಾನ ಮೊದಲು ಎಂಬ ವಿಧಾನವನ್ನು ಅಳವಡಿಸಿಕೊಂಡ  ZEE ಡಿಜಿಟಲ್  9 ಭಾಷೆಗಳನ್ನು ಒಳಗೊಂಡ 13 ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ ಬ್ರಾಂಡ್‌ಗಳಿಗೆ ಪ್ರೋಗ್ರೆಸ್ಸಿವ್ ವೆಬ್ ಅಪ್ಲಿಕೇಶನ್‌ಗಳನ್ನು (PWA) ಪ್ರಾರಂಭಿಸಿದ ದೇಶದ ಮೊದಲ ಮಾಧ್ಯಮ ಮತ್ತು ಮನರಂಜನಾ ಉದ್ಯಮವಾಗಿದೆ. ಇದು ದೇಶದಲ್ಲಿ ಮತ್ತು ಬಹುಶಃ ವಿಶ್ವದಾದ್ಯಂತದ ಅತಿದೊಡ್ಡ ಪಿಡಬ್ಲ್ಯೂಎ ಲಾಂಚ್ ಆಗಿದೆ. ಇದರೊಂದಿಗೆ ZEE ಡಿಜಿಟಲ್ ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳಾದ ಫೇಸ್‌ಬುಕ್, ಟ್ವಿಟರ್, ಅಲಿಬಾಬಾ, ಉಬರ್, ಲಿಂಕ್ಡ್‌ಇನ್ ಇತ್ಯಾದಿಗಳ ಲೀಗ್‌ಗೆ ಸೇರುತ್ತದೆ. ಈ ಮೂಲಕ ವೆಬ್‌ ಬಳಕೆದಾರರು ಸುಲಭವಾಗಿ ಬಳಸುವಂತೆ ಮೊಬೈಲ್‌ ಬಳಕೆದಾರರಿಗೂ ಸುಲಭವಾಗಿ ಬಳಸಬಹುದಾದ ಪಿಡಬ್ಲ್ಯೂಎ ಸೌಲಭ್ಯವನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಭಾರತದ ಉನ್ನತ ಪ್ರಸಾರ ಸುದ್ದಿ ಬ್ರಾಂಡ್‌ಗಳಾದ ZeeNews.com, Zee24Ghanta.com, ZeeHindustan.in, Zee24Kalak.in, 24Taas.com, ZeeRajastha.com, ZeeBiharJharkhand.com, ZeeUpUk.com, ಮತ್ತುZeeMpCg.comನ ವೀಕ್ಷಕರು ಈಗ ಮೊಬೈಲ್ ವೆಬ್‌ನಲ್ಲಿ ಪಿಡಬ್ಲ್ಯೂಎಯಿಂದ ಈ ಅನುಭವವನ್ನು ಪಡೆಯಬಹುದು.  ಕಳೆದ ವರ್ಷ ಮಾಸಿಕ ಸಕ್ರಿಯ ಬಳಕೆದಾರರಲ್ಲಿ ಈ ಬ್ರ್ಯಾಂಡ್‌ಗಳನ್ನು 65% ಕ್ಕಿಂತ ಹೆಚ್ಚಿಸಿರುವ ಕಂಪನಿಯು ಈ ಲಾಂಚ್ ಮೂಲಕ 200%  ಆರ್ಗನಿಕ್ ಟ್ರಾಫಿಕ್ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿದೆ.


ಹೊಸ ಮೊಬೈಲ್ ವೆಬ್ ಅಪ್ಲಿಕೇಶನ್ ಅನುಭವವು ಬಳಕೆದಾರರಿಗೆ ತಮ್ಮ ನೆಚ್ಚಿನ ಸುದ್ದಿ ಬ್ರಾಂಡ್‌ನ ಐಕಾನ್ ಅನ್ನು ತಮ್ಮ ಹೋಮ್ ಸ್ಕ್ರೀನ್‌ಗೆ ಸೇರಿಸಲು ಸಹಾಯ ಮಾಡುತ್ತದೆ ಮತ್ತು ಯಾವುದೇ ತೊಂದರೆಯಿಲ್ಲದೆ ಮುಕ್ತ ಆಫ್‌ಲೈನ್ ಬ್ರೌಸಿಂಗ್ ಆಯ್ಕೆಯೊಂದಿಗೆ ಕಡಿಮೆ ನೆಟ್‌ವರ್ಕ್ ಪ್ರದೇಶಗಳಲ್ಲಿ ತ್ವರಿತ ಮತ್ತು ಸುಗಮವಾದ ಪೇಜ್ ಲೋಡ್ ಆಗುವುದನ್ನು ಖಚಿತಪಡಿಸುತ್ತದೆ. ಅಲ್ಲದೆ ಕಡಿಮೆ ಸಂಗ್ರಹಣಾ ಸಾಮರ್ಥ್ಯ ಇರುವ ಮೊಬೈಲ್ ಸಾಧನಗಳಲ್ಲಿಯೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.


ಜೀ ಡಿಜಿಟಲ್ ಸಿಇಓ ರೋಹಿತ್ ಚಡ್ಡಾ ಅವರು, “ನಮ್ಮದು ಭಾರತದ ಅತಿದೊಡ್ಡ ಮಾಧ್ಯಮ ಸಂಸ್ಥೆಯಾಗಿರುವುದರಿಂದ, ಸಾಧ್ಯವಾದಷ್ಟು ಜನರನ್ನು ತಲುಪುವುದು ನಮ್ಮ ಗುರಿಯಾಗಿದೆ. ಪ್ರೋಗ್ರೆಸ್ಸಿವ್ ವೆಬ್ ಅಪ್ಲಿಕೇಶನ್‌ಗಳು ಅಥವಾ ಪಿಡಬ್ಲ್ಯೂಎ ಸ್ಥಳೀಯ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ನ ನಡುವೆ ಸಾಮಾನ್ಯವಾಗಿ ತಿಳಿದಿರುವಂತೆ ಯಾವುದೇ ಜಾಗವನ್ನು ತೆಗೆದುಕೊಳ್ಳದೆ ಸ್ಥಳೀಯ ಅಪ್ಲಿಕೇಶನ್‌ನ ಸುಗಮ ಮತ್ತು ತಡೆರಹಿತ ಅನುಭವದ ಲಾಭವನ್ನು ಪಡೆಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಇದು ಉತ್ತಮ ತಂತ್ರಜ್ಞಾನ. ಏಕೆಂದರೆ ಇದು ವೇಗವಾಗಿ ಲೋಡ್ ಆಗುತ್ತದೆ ಮತ್ತು ಇದಕ್ಕಾಗಿ ಫೋನ್‌ನ ಮೆಮೊರಿ ಬಳಕೆಯಾಗುವುದಿಲ್ಲ. ಉನ್ನತ ಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರದ ಸಣ್ಣ ಪಟ್ಟಣಗಳಲ್ಲಿನ ಬಳಕೆದಾರರಿಗೆ ಇದು ಮುಖ್ಯವಾಗುತ್ತದೆ. ಕಡಿಮೆ ನೆಟ್‌ವರ್ಕ್ ಸಂಪರ್ಕ ಮತ್ತು ಕಡಿಮೆ ಸಾಧನ ಸಂಗ್ರಹಣೆಯಂತಹ ಸಮಸ್ಯೆಗಳನ್ನು ನಿವಾರಿಸಲು ಪಿಡಬ್ಲ್ಯೂಎ ಸಹಾಯ ಮಾಡುತ್ತದೆ” ಎಂದು ಮಾಹಿತಿ ನೀಡಿದ್ದಾರೆ.


ಜೀ ಡಿಜಿಟಲ್‌ನ ಮೊಬೈಲ್ ಮೊದಲ ತಂತ್ರವನ್ನು ಗಮನಿಸಿದರೆ, ಅದರ ಪ್ರಮುಖ ಪ್ರಸಾರ ಬ್ರಾಂಡ್‌ಗಳಿಗೆ ಮೊಬೈಲ್ ವೆಬ್ ಅನುಭವವನ್ನು ಪಿಡಬ್ಲ್ಯೂಎ ಆಗಿ ಪರಿವರ್ತಿಸುವುದು ಮತ್ತು ಬಳಕೆದಾರರಿಗೆ ತಡೆರಹಿತ ಸುದ್ದಿ ಬಳಕೆ ಅನುಭವವನ್ನು ನೀಡುವುದು ಸಹಜ ಪ್ರಗತಿಯಾಗಿದೆ.


“ಈ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವುದರಿಂದ ನಮ್ಮ ಪೇಜಿನ ವೇಗದ ಕಾರ್ಯಕ್ಷಮತೆಯು ಈಗ ಡಿಜಿಟಲ್‌ ಉದ್ಯಮದಲ್ಲಿ ಉತ್ತಮವಾಗಿವೆ. ಪ್ರಸಾರ ಜಾಗದಲ್ಲಿರುವುದರಿಂದ, ಲೈವ್ ಟಿವಿ ಮತ್ತು ವಿಡಿಯೋ ಈ ಬ್ರ್ಯಾಂಡ್‌ಗಳಲ್ಲಿ ವೀಕ್ಷಕರ ಅತ್ಯಂತ ಜನಪ್ರಿಯ ವಿಷಯವಾಗಿದೆ. ಆದ್ದರಿಂದ, ಪ್ಲಾಟ್‌ಫಾರ್ಮ್‌ಗಳ ಹೊಸ ಪಿಡಬ್ಲ್ಯೂಎ ಆವೃತ್ತಿಯು ಬಳಕೆದಾರರು ತಮ್ಮ ನೆಚ್ಚಿನ ಸುದ್ದಿ ಚಾನೆಲ್ ಅನ್ನು ವೆಬ್‌ನಲ್ಲಿ ನೇರವಾಗಿ ವೀಕ್ಷಿಸಲು ಹೊಸ ‘ವಾಚ್’ ವಿಭಾಗದೊಂದಿಗೆ ವೀಡಿಯೊವನ್ನು ಮುಂಚೂಣಿಗೆ ತರುತ್ತದೆ. ಅಪ್ಲಿಕೇಶನ್‌ ಹಗುರವಾದ ರೂಪವಾಗಿರುವುದರಿಂದ, ವೀಡಿಯೊ ಪ್ಲೇಯರ್‌ನ ಲೋಡ್ ಸಮಯವು ಮೊದಲಿಗಿಂತ ಹೆಚ್ಚು ವೇಗವಾಗಿರುವುದರಿಂದ ಲೈವ್ ಟಿವಿ ಅನುಭವವು ಉತ್ತಮವಾಗಿರುತ್ತದೆ. ಮೊಬೈಲ್‌ನಲ್ಲಿ ನಮ್ಮ ಬಳಕೆದಾರರ ಅನುಭವವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ, ಇದು ವೆಬ್‌ನಲ್ಲಿ ಸುಮಾರು 95% ನಷ್ಟು ಬಳಕೆದಾರರನ್ನು ಹೊಂದಿದೆ” ಎಂದು ಚಡ್ಡಾ ಹೇಳಿದರು.


ಕಳೆದ ವರ್ಷ ಮೊಬೈಲ್‌ನಲ್ಲಿ ದೃಢವಾದ ಮತ್ತು ಸ್ಥಿರ ಬಳಕೆದಾರರ ನೆಲೆಯನ್ನು ನಿರ್ಮಿಸಲು ಜೀ ಡಿಜಿಟಲ್ ZEE Hindustan, ZEE Business, India.com ಮತ್ತು ZEE 24 Ghanta ಗಳಂಥ ವಿವಿಧ ಬ್ರಾಂಡ್‌ಗಳಿಗಾಗಿ ಅನೇಕ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ. ಈ ವರ್ಷದ ಆರಂಭದಲ್ಲಿ  ಬಳಕೆದಾರರಿಗೆ ಹೆಚ್ಚು ಮುದನೀಡುವಂತಹ ಅನುಭವವನ್ನು ಒದಗಿಸಲು ಇಂಡಿಯಾ.ಕಾಮ್ ತನ್ನ ಹೊಸ ಮೊಬೈಲ್ ಸೈಟ್ ಅನ್ನು ಪ್ರಾರಂಭಿಸಿತು, ಇದರ ಪರಿಣಾಮವಾಗಿ ಮಾಸಿಕ ಸಕ್ರಿಯ ಬಳಕೆದಾರರ ವಿಷಯದಲ್ಲಿ ಬ್ರ್ಯಾಂಡ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.