ನವದೆಹಲಿ: Zoom App Compensation - ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಜೂಮ್‌ನ ಜನಪ್ರಿಯತೆಯು ಕೋವಿಡ್ ಸಮಯದಲ್ಲಿ ಗಗನಕ್ಕೇರಿತ್ತು. ಇಂದಿಗೂ ಕೂಡ ಇದು ಅತಿ ಹೆಚ್ಚು ಬಳಸಲಾಗುವ ವೀಡಿಯೊ ಕಾನ್ಫರೆನ್ಸಿಂಗ್ ಸಾಧನಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್ ಮೂಲಕ, ಬಳಕೆದಾರರು ಕಂಪನಿಯಿಂದ $ 25 ನಷ್ಟು ಪರಿಹಾರವನ್ನು (Compensation To Zoom Users)ಪಡೆದುಕೊಳ್ಳಬಹುದು. ಏಕೆಂದರೆ, ಜೂಮ್ ತನ್ನ ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆ ಜೊತೆಗೆ ರಾಜಿ (Zoom Security Issues) ಮಾಡಿಕೊಂಡಿದೆ. ಕಂಪನಿಯು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ. ಜೂಮ್ ಈ ಆರೋಪಗಳನ್ನು ನಿರಾಕರಿಸಿದ್ದರೂ, ಅದು ಕ್ರಮವನ್ನು ಇತ್ಯರ್ಥಗೊಳಿಸಲು ಮತ್ತು ಅದರ ಗೌಪ್ಯತೆ ಮತ್ತು ಭದ್ರತಾ ನೀತಿಗಳನ್ನು ಸುಧಾರಿಸಲು $85 ಮಿಲಿಯನ್ ಪಾವತಿಸಲು ಒಪ್ಪಿಕೊಂಡಿದೆ. US ಬಳಕೆದಾರರು ಮಾತ್ರ ಹಕ್ಕು ಸಲ್ಲಿಸಲು ಅರ್ಹರಾಗಿರುತ್ತಾರೆ ಎಂಬುದನ್ನು ಗಮನಿಸುವುದು ಇಲ್ಲಿ ಮುಖ್ಯವಾಗಿದೆ.


COMMERCIAL BREAK
SCROLL TO CONTINUE READING

ಹಣ ಪಾವತಿಸಿದ ಚಂದಾದಾರರು $25 ಪಡೆಯಬಹುದು
ವೈಯಕ್ತಿಕ ಮಾಹಿತಿಯನ್ನು ಹಾಳುಮಾಡಿರುವ ಬಳಕೆದಾರರಿಗೆ ಪರಿಹಾರ ನೀಡಲು ಜೂಮ್ ಒಪ್ಪಿಕೊಂಡಿದೆ. ಕಂಪನಿಯು ಬಳಕೆದಾರರಿಗೆ ಕ್ಲೈಮ್ ಇತ್ಯರ್ಥವಾಗಿ $25 ವರೆಗೆ ಪಾವತಿಸಲಿದೆ. ಆದರೆ, ಎಲ್ಲಾ ಬಳಕೆದಾರರು ಕಂಪನಿಯಿಂದ ಹಣವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ನೀವು ಜೂಮ್ ಮೀಟಿಂಗ್ ಅಪ್ಲಿಕೇಶನ್‌ಗೆ ಹಣ ಪಾವತಿ ಮಾಡುವ ಚಂದಾದಾರರಾಗಿದ್ದರೆ ಮತ್ತು ಮಾರ್ಚ್ 2016 ಮತ್ತು ಜುಲೈ 2021 ರ ನಡುವೆ ಅಪ್ಲಿಕೇಶನ್‌ಗೆ ಹಣ ಪಾವತಿಸಿದ್ದರೆ, ನೀವು $25 ಕ್ಕೆ ಕ್ಲೈಮ್ ಅನ್ನು ಸಲ್ಲಿಸಬಹುದು ಅಥವಾ ನೀವು ಪಾವತಿಸಿದ ಮೊತ್ತದ ಶೇ.15 ರಷ್ಟನ್ನು ಮರಳಿ ಪಡೆಯಬಹುದು.


ಡೌನ್‌ಲೋಡ್ ಮಾಡುವವರು 15 ಡಾಲರ್‌ಗಳನ್ನು ಪಡೆಯಲಿದ್ದಾರೆ
ಮಾರ್ಚ್ 30, 2016 ಮತ್ತು ಜುಲೈ 30, 2021 ರ ನಡುವೆ ಜೂಮ್ ಮೀಟಿಂಗ್ ಅಪ್ಲಿಕೇಶನ್ ಗೆ (Zoom Meetings Class Action) ಹೆಸರು ನೋಂದಾಯಿಸಿದ, ಬಳಸಿದ, ತೆರೆದ ಅಥವಾ ಡೌನ್‌ಲೋಡ್ ಮಾಡಿದವರು ಕ್ಲೈಮ್ ಸೆಟಲ್‌ಮೆಂಟ್ ಮೊತ್ತಕ್ಕೆ ಅರ್ಹರಾಗಿರುತ್ತಾರೆ. ಆದರೆ, ಅವರು $25 ಕ್ಕೆ ಹಕ್ಕು ಸಲ್ಲಿಸಲು ಸಾಧ್ಯವಿಲ್ಲ, ಅವರು ಕೇವಲ $15 ಅನ್ನು ಮಾತ್ರ ಪಡೆಯಬಹುದು.


ಇದನ್ನೂ ಓದಿ-Reliance Jio: ಅಗ್ಗದ ದರದಲ್ಲಿ ಪ್ರತಿದಿನ 1GB ಡೇಟಾ ಜೊತೆಗೆ ಜಿಯೋ ನೀಡುತ್ತಿದೆ ಹಲವು ಪ್ರಯೋಜನ


ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಮಾರ್ಚ್ 5, 2022 ರ ಮೊದಲು ಕಳುಹಿಸಿ
ನಗದು ಪಾವತಿಯನ್ನು ಸ್ವೀಕರಿಸಲು ನೀವು ಕ್ಲೈಮ್ ಮಾಡಬೇಕು. ಕ್ಲೈಮ್ ಮಾಡಲು, ನೀವು ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಬೇಕು. ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ www.ZoomMeetingsClassAction.com ಅಥವಾ ಮೇಲ್ ಮೂಲಕ ಸಲ್ಲಿಸಬಹುದು. ಇದರ ಗಡುವು ಮಾರ್ಚ್ 5, 2022 ಆಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ಆದ್ದರಿಂದ ಕಂಪನಿಯಿಂದ ಹಣವನ್ನು ಪಡೆಯಲು ನೀವು ಹೇಳಿದ ದಿನಾಂಕದ ಮೊದಲು ಕ್ಲೈಮ್ ಅನ್ನು ಸಲ್ಲಿಸಬೇಕು.


ಇದನ್ನೂ ಓದಿ-Solar Rooftop Yojana: ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, 20 ವರ್ಷ ಉಚಿತ ವಿದ್ಯುತ್ ಪಡೆಯಿರಿ


Vice ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಜೂಮ್ ವಿರುದ್ಧ ಮೊಕದ್ದಮೆ ಹೂಡಿರುವ ಗುಂಪು ಜೂಮ್ ಬಳಕೆದಾರರಿಗೆ ಕ್ಲೈಮ್ ಮತ್ತು ಅವರು ಹಣವನ್ನು ಹೇಗೆ ಸ್ವೀಕರಿಸಬಹುದು ಎಂಬುದರ ಕುರಿತು ಇಮೇಲ್‌ಗಳನ್ನು ಕಳುಹಿಸಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-Flipkart: 22 ಸಾವಿರ ರೂ. ಮೌಲ್ಯದ Realme Smart TV ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 1500 ರೂ.ಗೆ ಖರೀದಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ