ಮೂರು ತಿಂಗಳಲ್ಲಿ 2.15 ಕೋಟಿ ಸಂಗ್ರಹ
ಸವದತ್ತಿಯ ರೇಣುಕಾದೇವಿ ದೇಗುಲ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಕೋವಿಡ್ ನಿಯಂತ್ರಣ ಬಳಿಕ ಯಲ್ಲಮ್ಮನ ಗುಡ್ಡಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಮೂರು ತಿಂಗಳಲ್ಲಿ 2.15 ಕೋಟಿ ದೇಣಿಗೆ ಸಂಗ್ರಹವಾಗಿದೆ. ಎಪ್ರಿಲ್ 1 ರಿಂದ ಜೂನ್ 30ರವರೆಗೆ ದೇಣಿಗೆ ಎಣಿಕೆ ಮಾಡಲಾಯಿತು. ಎರಡನೇ ಹಂತದ ಹುಂಡಿ ಎಣಿಕೆ ವೇಳೆ 33.44 ಲಕ್ಷ ನಗದು, 5.11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 62,390 ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ.