ಭಾನುವಾರ (ಅಕ್ಟೋಬರ್ 09) ರಂದು ರಾತ್ರಿ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ, ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನವನ್ನು ( ಮೊಪೆಡ್)  ನಿಲ್ಲಿಸಿ ಔಷಧಿ ಕೊಳ್ಳಲು ಮೆಡಿಕಲ್ ಶಾಪಿಗೆ ಹೋಗುತ್ತಾನೆ. ಆದರೆ, ಈ ಸಂದರ್ಭದಲ್ಲಿ ಆತ ಮೊಪೆಡ್ ನಲ್ಲಿಯೇ ಕೀ ಬಿಟ್ಟು ಹೋಗಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಕಳ್ಳ ಮಾಲೀಕನ ಎದುರೇ ಬೈಕ್ ಸ್ಟಾರ್ಟ್ ಮಾಡಿ ಅಲ್ಲಿಂದ ಹೊರಟೇ ಬಿಡುತ್ತಾನೆ.