Viral Video: ಬಾಯಿ ಚಪ್ಪರಿಸಿ ಗೋಬಿ ಮಂಚೂರಿ ತಿನ್ನುವ ಮೊದಲು ಈ ವಿಡಿಯೋ ನೋಡಿ
Viral Video: ಕೆಲವರು ಈ ವಿಡಿಯೋ ನೋಡಿದ ಬಳಿಕ ನಮಗೆ ವಾಕರಿಕೆ ಬರುತ್ತಿದೆ ಅಂತಾ ಹೇಳಿದ್ರೆ, ಇನ್ನೂ ಕೆಲವರು ಇನ್ಮುಂದೆ ನಾವು ಗೋಬಿ ಮಂಜೂರಿ ಸಹವಾಸಕ್ಕೆ ಹೋಗುವುದಿಲ್ಲ ಅಂತಾ ಹೇಳಿದ್ದಾರೆ.
ನವದೆಹಲಿ: ಗೋಬಿ ಮಂಚೂರಿ ಎಂದರೇ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಗೋಬಿ ಮಂಚೂರಿ ತಿನ್ನಲು ಇಷ್ಟಪಡುತ್ತಾರೆ. ಗೋಬಿ ಹೆಸರು ಕೇಳಿದ್ರೆ ಸಾಕು ಅದನ್ನು ತಿನ್ನಲೇಬೇಕು ಅಂತಾ ಯುವಕರು ಹಾತೊರೆಯುತ್ತಾರೆ. ಗೋಬಿ ಮಂಚೂರಿಯನ್ ಭಾರತದಲ್ಲಿ ಜನಪ್ರಿಯವಾಗಿರುವ ಚೀನಿ ಖಾದ್ಯವಾಗಿದೆ.
ಬರೋಬ್ಬರಿ 500 ಕೆಜಿ ಗೋಬಿ ಮಂಚೂರಿಯನ್ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಗೋಬಿ ಮಂಚೂರಿ ತಯಾರಿಸುವ ಈ ವಿಡಿಯೋವನ್ನು ನೋಡಿದ್ರೆ ನೀವು ಇನ್ನೆಂದು ಅದನ್ನು ತಿನ್ನುವ ಗೋಜಿಗೆ ಹೋಗುವುದಿಲ್ಲ. ಹೌದು, ಗೋಬಿ ಮಂಚೂರಿಯನ್ನು ಯಾವ ರೀತಿ ತಯಾರಿಸುತ್ತಾರೆ ಅನ್ನೋದರ ಬಗ್ಗೆ ಈ ವಿಡಿಯೋದಲ್ಲಿ ನೀವು ನೋಡಬಹುದು. 500 ಕೆಜಿ ಗೋಚಿ ಮಂಚೂರಿ ತಯಾರಿಸುವ ವೇಳೆ ಬಾಣಸಿಗರು ಸ್ವಚ್ಛತೆ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸಿಲ್ಲ. ಹೀಗಾಗಿ ಗೋಬಿ ತಯಾರಿಸುವ ಈ ವಿಡಿಯೋ ನೋಡಿದ್ರೆ ನಿಮಗೆ ಗ್ಯಾರಂಟಿ ವಾಕರಿಕೆ ಬರುತ್ತದೆ.
ಇದನ್ನೂ ಓದಿ: Daily GK Quiz: ಭಾರತದ ಯಾವ ರಾಜ್ಯವನ್ನು ‘ಸ್ಲೀಪಿಂಗ್ ಸ್ಟೇಟ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ?
ಗೋಬಿ ಮಂಚೂರಿ ತಯಾರಿಸು ಸೂರತ್‌ನ ಕೇಟರರ್‌ಗಳ ಸಂಪೂರ್ಣ ಪ್ರಕ್ರಿಯೆಯನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಗೋಬಿ ತಯಾರಿಸುವ ವೇಳೆ ಬಹುತೇಕರು ಕಡಿಮೆ ಬಟ್ಟೆ ಧರಿಸಿದ್ದು ಕಂಡು ಬರುತ್ತದೆ. ಎಲೆಕೋಸುಗಳನ್ನು ಕತ್ತರಿಸುವುದು, ಹಿಟ್ಟಿನೊಂದಿಗೆ ಬೆರೆಸುವುದು ಮತ್ತು ಬರಿ ಕೈಗಳಿಂದಲೇ ಅಡುಗೆ ಮಾಡುವುದನ್ನು ನೀವು ನೋಡಬಹುದು. ಶುಚಿತ್ವದ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸಿಲ್ಲ. ಹಿಟ್ಟು ಕಲಸುವಾಗ ಮತ್ತು ಗೋಬಿಯನ್ನು ಎಣ್ಣೆಯಲ್ಲಿ ಕರಿಯುವ ವೇಳೆ ಬಾಣಸಿಗರ ಮೈಮೇಲೆ ಬೆವರು ಬರುತ್ತಿರುತ್ತದೆ.
ಆದರೆ ಇದ್ಯಾವುದನ್ನು ಲೆಕ್ಕಿಸದೆ ಬಾಣಸಿಗರು ಗೋಬಿ ಮಂಚೂರಿಯನ್ನು ತಯಾರಿಸುತ್ತಾರೆ. the__bearded__foodie ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ‘If you love manchurian don’t watch this video’ ಎಂದು ಈ ವಿಡಿಯೋಗೆ Disclaimer ನೀಡಲಾಗಿದೆ. ಈ ವಿಡಿಯೋ ವೀಕ್ಷಿಸಿದ ಬಳಿಕ ಗೋಬಿ ಮಂಜೂರಿ ಪ್ರಿಯರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಮುಂದಿನ 2 ದಿನ ಈ ಭಾಗಗಳಲ್ಲಿ ಭರ್ಜರಿ ಮಳೆ! ಮಿಂಚು-ಗುಡುಗು ಸಹಿತ ಜಲಪ್ರಳಯದ ಭೀತಿ
ಕೆಲವರು ಈ ವಿಡಿಯೋ ನೋಡಿದ ಬಳಿಕ ನಮಗೆ ವಾಕರಿಕೆ ಬರುತ್ತಿದೆ ಅಂತಾ ಹೇಳಿದ್ರೆ, ಇನ್ನೂ ಕೆಲವರು ಇನ್ಮುಂದೆ ನಾವು ಗೋಬಿ ಮಂಜೂರಿ ಸಹವಾಸಕ್ಕೆ ಹೋಗುವುದಿಲ್ಲ ಅಂತಾ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟಿಜನ್‍ಗಳ ಗಮನ ಸೆಳೆಯುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.