Social Media Viral: ಮದುವೆಗಳಲ್ಲಿ ಕೆಲವೊಂದು ನೆನಪುಗಳು ಆಗಾಗ ಕ್ಯಾಮರಾದಲ್ಲಿ ಸೆರೆಯಾಗಿ ಕಣ್ಣು ತೇವಗೊಳಿಸುತ್ತವೆ. ಇಲ್ಲವೇ ಬಲವಂತವಾಗಿ ನಗಿಸಿ ಬಿಡುತ್ತವೆ. ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗನ ಕೃತ್ಯ ನೋಡಿ ಮದುವೆಗೆ ಬಂದಿದ್ದ ಅತಿಥಿಗಳೆಲ್ಲ ಬೆಚ್ಚಿ ಬಿದ್ದಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಬ್ರೇಕಪ್ ಬೇಡ ಅಂತ ಶಾಲಾ ಬಾಲಕಿ ಕಾಲು ಹಿಡ್ಕೊಂಡು ಗೋಗರೆದ ಬಾಲಕ… ಮುಂದೇನಾಯ್ತು?


ಈ ವೀಡಿಯೋದಲ್ಲಿ ವಧು-ವರರು ವೇದಿಕೆಯ ಮೇಲೆ ಹಾಕಲಾದ ಕುರ್ಚಿಯ ಮೇಲೆ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. ಆಗ ಒಬ್ಬ ಹುಡುಗ ಬಂದು ವಧುವಿನ ಮುಂದೆ ವರನನ್ನು ಎಬ್ಬಿಸಿ ಆಕೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ತಮಾಷೆಯ ವಿಡಿಯೋವನ್ನು ನೀವೂ ನೋಡಲೇಬೇಕು.


ನಿಜವಾಗಿ ಈ ವಿಡಿಯೋದಲ್ಲಿ ಒಬ್ಬ ಹುಡುಗ ಬಂದು ವಧು-ವರರ ಕೈ ಹಿಡಿದು ವರನನ್ನು ಕುರ್ಚಿಯಿಂದ ಮೇಲಕ್ಕೆತ್ತುತ್ತಾನೆ. ವರನು ಕುರ್ಚಿಯನ್ನು ತೊರೆದ ತಕ್ಷಣ, ಹುಡುಗನು ವಧುವಿನ ಪಕ್ಕದಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಅವಕಾಶವನ್ನು ಬಳಸಿಕೊಳ್ಳುತ್ತಾನೆ. ಈ ವೀಡಿಯೋ ನೋಡಿದ ತುಂಬಾ ಜನ ವಿಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಅನೇಕರಿಗೆ ನಗು ತಡೆಯಲು ಸಾಧ್ಯವಾಗುತ್ತಿಲ್ಲ. 


ಇದನ್ನೂ ಓದಿ:  Viral Video: ಮೈಮೇಲೆ ರೈಲು ಹರಿದರೂ ಬದುಕುಳಿದ ಭೂಪ: ಮೈಜುಂ ಎನ್ನುವಂತಿದೆ ವಿಡಿಯೋ


ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಸಾವಿರಾರು ಮಂದಿ (ಸೋಶಿಯಲ್ ಮೀಡಿಯಾ ಬಳಕೆದಾರರು) ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ಕೆಲವರು ನಗುತ್ತಿರುವುದು ಕಂಡುಬಂದರೆ ಕೆಲವರು ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾರೆ.



 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.