Snake: ಅಬ್ಬಬ್ಬಾ... ದೈತ್ಯ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ: ವಿಡಿಯೋ ನೋಡಿ
ಅದು ಸಾಮಾನ್ಯ ಹಾವಲ್ಲ. ದೈತ್ಯ ಹೆಬ್ಬಾವು. ಅಂತಹ ಅಸಾಮಾನ್ಯ ಹಾವನ್ನು ಪ್ರಾಣಭಯವಿಲ್ಲದೆ, ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿರುವ ದೃಶ್ಯ ಎಂಥವರನ್ನೂ ಭಯಭೀತಗೊಳಿಸುತ್ತದೆ.
Viral Video: ಇಂಟರ್ನೆಟ್‌ನಲ್ಲಿ ಪ್ರಾಣಿಗಳು ಜಗಳವಾಡುವುದನ್ನು ನಾವು ಆಗಾಗ್ಗೆ ನೋಡಿರುತ್ತೇವೆ. ಅಷ್ಟೇ ಅಲ್ಲದೆ, ಅನೇಕ ಸಮಯಗಳಲ್ಲಿ ಮನುಷ್ಯರ ಜೊತೆಗೆ ಸಹ ಕಾದಾಡುತ್ತವೆ. ಇನ್ನೊಂದೆಡೆ ಮಾನವರ ಜೊತೆಗೆ ಒಡನಾಟವನ್ನು ಹೊಂದಿರುವ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಂದು ವಿಡಿಯೋ ನೋಡಿದ್ರೆ ನೀವು ಬೆರಗಾಗೋದು ಗ್ಯಾರಂಟಿ.
ಇದನ್ನೂ ಓದಿ: CWG 2022 India Medal: ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಪದಕಗಳ ಮಾಲೆ: ಹೀಗಿದೆ ಸಾಧಕರ ಪಟ್ಟಿ
ಹೌದು ಹಾವುಗಳ ಜೊತೆ ಸರಸವಾಡುವುದು ಒಳ್ಳೆಯದಲ್ಲ ಎಂದು ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಹೆಗಲ ಮೇಲೆ ಹಾವನ್ನು ಹಾಕಿಕೊಂಡು ಹೋಗುತ್ತಿದ್ದಾನೆ. ಈ ವಿಡಿಯೋ ಕಂಡ ಜನರು, ಒಂದು ಕಡೆ ವ್ಯಕ್ತಿಯ ಧೈರ್ಯಕ್ಕೆ ಶಹಬ್ಬಾಶ್ ಎಂದರೆ, ಇನ್ನೊಂದೆಡೆ ಆ ಹಾವನ್ನು ಕಂಡು ಭಯಭೀತರಾಗಿದ್ದಾರೆ.
ಅದು ಸಾಮಾನ್ಯ ಹಾವಲ್ಲ. ದೈತ್ಯ ಹೆಬ್ಬಾವು. ಅಂತಹ ಅಸಾಮಾನ್ಯ ಹಾವನ್ನು ಪ್ರಾಣಭಯವಿಲ್ಲದೆ, ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿರುವ ದೃಶ್ಯ ಎಂಥವರನ್ನೂ ಭಯಭೀತಗೊಳಿಸುತ್ತದೆ.
ಆಘಾತಕಾರಿ ವಿಡಿಯೋ:
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಎಲ್ಲರೂ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿದ ನಂತರ ನೀವು ಕೂಡ ಆ ವ್ಯಕ್ತಿಯ ಧೈರ್ಯವನ್ನು ಮೆಚ್ಚದಿರಲು ಸಾಧ್ಯವಾಗುವುದಿಲ್ಲ. ಸಂಪೂರ್ಣ ವಿಷಯ ತಿಳಿಯುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಟ್ರೆಂಡಿಂಗ್ ವಿಡಿಯೋವನ್ನು ನೀವೂ ನೋಡಲೇಬೇಕು.
ಜನರು ದಿಗ್ಭ್ರಮೆ:
ವಾಸ್ತವವಾಗಿ, ಈ ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ತನ್ನ ಹೆಗಲ ಮೇಲೆ ಅಪಾಯಕಾರಿ ಹೆಬ್ಬಾವನ್ನು ಹೊತ್ತುಕೊಂಡು ಎಲ್ಲೋ ಸಾಗಿಸುತ್ತಿರುವುದನ್ನು ಕಾಣಬಹುದು. ಈ ಹಾವಿನ ಉದ್ದ ಮತ್ತು ತೂಕ ಊಹಿಸಲು ಅಸಾಧ್ಯ ಎಂಬಂತಿದೆ. ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಬೆಚ್ಚಿ ಬಿದ್ದಿದ್ದಾರೆ. ವೀಡಿಯೊವನ್ನು ನೋಡಿದ ನಂತರ ಜನರು ಚೊತ್ರ ವಿಚಿತ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ಸರ್ಕಾರದಿಂದ ಈ ʼಕೊಡುಗೆʼ ಕೇಳಿದ ಸುಪ್ರೀಂ ಕೋರ್ಟ್!
ವೀಡಿಯೊ ವೈರಲ್:
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಈ ಕೆಲವು ಸೆಕೆಂಡ್‌ಗಳ ವೀಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಇನ್ನು ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಹಲವರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.