Funny videos : ರಸ್ತೆಯಲ್ಲಿ ಯಾರಾದರೂ ಈ ರೀತಿಯ ವಿಚಿತ್ರವಾದ ಮತ್ತು ಅಪಾಯಕಾರಿ ಕೆಲಸಗಳನ್ನು ಮಾಡುತ್ತಿದ್ದರೆ ವೀಡಿಯೊ ಮಾಡಲು ಮರೆಯಬೇಡಿ. ಹೀಗೆ ಮಾಡುವುದರಿಂದ ಎರಡು ಕೆಲಸಗಳು ಆಗುತ್ತವೆ. ಒಂದು ತಪ್ಪು ಮಾಡಿದ ಚಾಲಕನಿಗೆ ಶಿಕ್ಷೆ, ಇನ್ನೊಂದು, ನೆಟ್ಟಿಗರಿಗೆ ಮನರಂಜನೆ.. 


COMMERCIAL BREAK
SCROLL TO CONTINUE READING

ಈ ರೀತಿ ಜಾಣತನ ತೋರಿಸಲು ಹೋದ ದಡ್ಡರ ಕೆಲಸಗಳನನ್ನು ನೋಡಿದ ತಕ್ಷಣ ಜನರು ತಕ್ಷಣ ತಮ್ಮ ಸೆಲ್ ಫೋನ್ ತೆಗೆದು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇತ್ತೀಚೆಗಷ್ಟೇ ಅಂತಹ ವಿಡಿಯೋವೊಂದು ಸದ್ದು ಮಾಡುತ್ತಿದೆ. ಮಾರುತಿ 800 ಕಾರಿನ ಮೇಲೆ ಲಾರಿಗಟ್ಟಲೇ ಡ್ರಮ್‌ ಏರಿಕೊಂಡು ದೃಶ್ಯವನ್ನು ಕಾಣಬಹುದು.. ಚಾಲಕನ ಐಡಿಯಾ ಒಳ್ಳೆಯ ರೀತಿ ಕಂಡರೂ ಸಹ.. ಇದು ಅಪಾಯಕಾರಿ..


ಇದನ್ನೂ ಓದಿ:ಮದುವೆಯಾದವರಿಗೆ ಈ ಡೇಂಜರಸ್ ರೋಗ ಬರುವ ಸಾಧ್ಯತೆ ತುಂಬಾ ಕಡಿಮೆ! ಸರಿಯಾದ ವಯಸ್ಸಿಗೆ ಮದುವೆಯಾಗಿ, ಜಬರ್ದಸ್ತಾಗಿರಿ! 


ವೈರಲ್ ಆಗಿರುವ ವೀಡಿಯೊದಲ್ಲಿ, ಮಾರುತಿ 800 ಕಾರಿನ ಛಾವಣಿಯ ಮೇಲೆ ಎರಡು ಡಜನ್ ಅಂದರೆ 24 ಡ್ರಮ್‌ಗಳನ್ನು ತುಂಬಿದ್ದಾನೆ. ಈ ರೀತಿ ಮಾಡುವುದು ಸಂಚಾರ ನಿಯಮಗಳಿಗೆ ವಿರುದ್ಧವಾಗಿದೆ. ಆ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಚಲನ್ ಜತೆಗೆ ಕಠಿಣ ಶಿಕ್ಷೆಯೂ ಆಗುತ್ತದೆ. ಆದರೆ, ಇಲ್ಲಿ ಈ ಕಾರು ಚಲಾಯಿಸುತ್ತಿದ್ದ ಚಾಲಕ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇಷ್ಟು ಚಿಕ್ಕ ಕಾರಿನ ಮೇಲೆ ನಿರಾತಂಕವಾಗಿ ಡ್ರಮ್‌ಗಳನ್ನು ತುಂಬುತ್ತಿದ್ದಾನೆ.



ವೀಡಿಯೊದಲ್ಲಿ ಕಾರಿನ ಸಂಖ್ಯೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕಾರು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ ಎಂದು ತಿಳಿಯುತ್ತದೆ. ಕಾರಿನ ಸಂಖ್ಯೆ MH 20 X 5343.. ವಾಹನದ ಮೇಲ್ಛಾವಣಿಯ ಮೇಲೆ ಉದ್ದ ಮತ್ತು ಅಗಲವಾದ ಕಬ್ಬಿಣದ ಕ್ಯಾರಿಯರ್ ಸ್ಟ್ಯಾಂಡ್ಗಳನ್ನು ಜೋಡಿಸಲಾಗಿದೆ. 1 ಅಥವಾ 2 ಬದಲಿಗೆ 24 ಡ್ರಮ್‌ಗಳನ್ನು ಅದರ ಮೇಲೆ ಲೋಡ್ ಮಾಡಲಾಗಿದೆ.


ಇದನ್ನೂ ಓದಿ:ಕೋಟಿಗಟ್ಟಲೆ ಆಸ್ತಿ ಹೊಂದಿರುವ ನೀತಾ ಅಂಬಾನಿ ಧರಿಸುವ ಈ ಕೈಗಡಿಯಾರದ ಬೆಲೆ ಎಷ್ಟು ಗೊತ್ತಾ..?  


ಈ ರೀಲ್ ಅನ್ನು Instagram ನಲ್ಲಿ @morya_sound_official_4714 ಅವರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಮತ್ತು ಲೈಕ್‌ಗಳು ಬಂದಿವೆ. ಜನರು ಈ ರೀತಿ ಅಪಾಯಕಾರಿ ಕೆಲಸಗಳನ್ನು ಮಾಡುವುದು ಇತರರ ಪ್ರಾಣಕ್ಕೆ ಕುತ್ತು ತರುತ್ತದೆ ಅಂತ ಕೆಲ ನೆಟ್ಟಿಗರು ಕಿಡಿಕಾರಿದರೆ ಇನ್ನೂ ಕೆಲಸವು ಸೂಪರ್‌ ಐಡಿಯಾ ಅಂತ ಹೊಗಳುತ್ತಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ