ನವದೆಹಲಿ: ತಿರುವನಂತಪುರಂ-ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ ಒಂದು ಕಂಪಾರ್ಟ್‌ಮೆಂಟ್‌ನಲ್ಲಿ ಏಕಾಏಕಿ ಹಾವುಕಾಣಿಸಿಕೊಂಡು ಪ್ರಯಾಣಿಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು, ತಕ್ಷಣ ಹಾವನ್ನು ಹುಡುಕಲು ಕೇರಳದ ಕೋಝಿಕ್ಕೋಡ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರೈಲನ್ನು ನಿಲುಗಡೆ ಮಾಡಲಾಗಿತ್ತು, ಆದರೆ ಸರೀಸೃಪ ಪತ್ತೆಯಾಗಲಿಲ್ಲ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಬುಧವಾರ ರಾತ್ರಿ ರೈಲಿನ ಎಸ್ 5 ಕಂಪಾರ್ಟ್‌ಮೆಂಟ್‌ನ ಕೆಳಗಿನ ಬರ್ತ್‌ನ ಕೆಳಗಿರುವ ಲಗೇಜ್‌ನ ನಡುವೆ ಹಾವು ಕಾಣಿಸಿಕೊಂಡಿದೆ, ಇದರ ಬಗ್ಗೆ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಸುದ್ದಿ ಹರಡುತ್ತಿದ್ದಂತೆ ತಕ್ಷಣ ಈ ವಿಚಾರವನ್ನು ಕೋಝಿಕ್ಕೋಡ್ ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳಿಗೆ ತಿಳಿಸಲಾಗಿದೆ, ಅವರು ಹಾವನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯ ತಜ್ಞರನ್ನು ವ್ಯವಸ್ಥೆ ಮಾಡಿದ್ದಾರೆ.


ಇದನ್ನೂ ಓದಿ: Siddaramaiah : ಸಿದ್ದರಾಮಯ್ಯ 'ಅಮೃತ ಮಹೋತ್ಸವ' : 50 ಎಕರೆ ಜಾಗದಲ್ಲಿ ಬೃಹತ್ ವೇದಿಕೆ! 


ರಾತ್ರಿ 10:15 ರ ಸುಮಾರಿಗೆ ಕೋಝಿಕ್ಕೋಡ್ ನಿಲ್ದಾಣದಲ್ಲಿ ಹಾವು ಕಂಡ ತಕ್ಷಣ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ರೈಲಿನಿಂದ ಕೆಳಗಿಳಿಸಲಾಯಿತು ಮತ್ತು ಇಬ್ಬರು ಹಾವು ಹಿಡಿಯುವವರಿಂದ ಸಂಪೂರ್ಣ ಹುಡುಕಾಟ ನಡೆಸಲಾಯಿತು,ಆದರೆ, ಹಾವನ್ನು ಹಿಡಿಯಲು ಸಾಧ್ಯವಾಗಲಿಲ್ಲ ಎಂದು ರೈಲ್ವೆ ಮೂಲಗಳು ಪಿಟಿಐಗೆ ತಿಳಿಸಿವೆ.


ಇದನ್ನೂ ಓದಿ: ರಾಜ್ಯದಲ್ಲಿ ಕರೋನಾ ಲಸಿಕೆ ಕೊರೆತೆಯಾಗದಂತೆ ಕ್ರಮ - ಸಚಿವ ಸುಧಾಕರ್


ರೈಲ್ವೆ ಮೂಲಗಳ ಪ್ರಕಾರ ಪ್ರಯಾಣಿಕರೊಬ್ಬರು ತೆಗೆದ ಫೋಟೋದಲ್ಲಿ ಕಂಡುಬರುವ ಇಲಿಯ ರಂದ್ರದಲ್ಲಿ ತಪ್ಪಿಸಿಕೊಂಡಿರಬಹುದು ಅಥವಾ ಅಡಗಿಕೊಂಡಿರಬಹುದು ಎಂದು ಹೇಳಿವೆ.ಮಧ್ಯರಾತ್ರಿಯ ವೇಳೆಗೆ ರಂಧ್ರವನ್ನು ಮುಚ್ಚಿದ ನಂತರ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು ಎಂದು ಮೂಲಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.