ಕಬಡ್ಡಿ ಆಡುತ್ತಲೇ ಪ್ರಾಣ ಕಿತ್ತುಕೊಂಡ ಜವರಾಯ: ಕಣ್ಣೀರು ತರಿಸುತ್ತೆ ಈ ವಿಡಿಯೋ
22ರ ಹರೆಯದ ವಿದ್ಯಾರ್ಥಿಯೊಬ್ಬ ಭಾನುವಾರ ರಾತ್ರಿ ಪನ್ರುತಿ ಸಮೀಪದ ಮನಡಿಕುಪ್ಪಂನಲ್ಲಿ ಕಬಡ್ಡಿ ಆಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತ ವಿಮಲ್‌ರಾಜ್ ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್‌ಸಿ ಪ್ರಾಣಿಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮರಣ ಎಂಬುದು ಹೇಳದೇ ಬರುವಂತಹದ್ದು. ಅದು ಬಂದಾಗ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ಮಾತಿದೆ. ಈ ಮಾತು ನಿಜಾಂಶ ಕೂಡ. ಆಟ ಆಡುವಾಗ, ನೃತ್ಯ ಮಾಡುವಾಗ ಅಥವಾ ಏನಾದರೂ ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾಗ ಜವರಾಯ ಎಲ್ಲಿರುತ್ತಾನೋ ಏನೋ ಎಂಬಂತೆ ಸದ್ದಿಲ್ಲದೆ ಬಂದು ಪ್ರಾಣ ಕಿತ್ತುಕೊಂಡು ಹೋಗುತ್ತಾನೆ. ಇದಕ್ಕೆ ಪುರಾವೆ ಎಂಬಂತೆ ಅದೆಷ್ಟೋ ವಿಡಿಯೋಗಳು ವೈರಲ್ ಆಗಿವೆ. ಇದೀಗ ಇಂತಹದ್ದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇದನ್ನೂ ಓದಿ: ಈ 5 ವಸ್ತುಗಳನ್ನು ತಪ್ಪಿಯೂ ಉಡುಗೊರೆಯಾಗಿ ನೀಡಬೇಡಿ
22ರ ಹರೆಯದ ವಿದ್ಯಾರ್ಥಿಯೊಬ್ಬ ಭಾನುವಾರ ರಾತ್ರಿ ಪನ್ರುತಿ ಸಮೀಪದ ಮನಡಿಕುಪ್ಪಂನಲ್ಲಿ ಕಬಡ್ಡಿ ಆಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತ ವಿಮಲ್‌ರಾಜ್ ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್‌ಸಿ ಪ್ರಾಣಿಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕಡಂಪುಲಿಯೂರು ಸಮೀಪದ ಪುರಂಗಿಣಿ ಗ್ರಾಮದವರಾದ ವಿಮಲ್‌ರಾಜ್, ಮನ್ನಾಡಿಕುಪ್ಪಂನಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುರಟ್ಟು ಕಾಳೈ ತಂಡದ ಪರ ಆಡುತ್ತಿದ್ದರು. ಎದುರಾಳಿ ತಂಡದಿಂದ ತಪ್ಪಿಸಿಕೊಂಡು ಗೆರೆ ಮುಟ್ಟಬೇಕು ಎನ್ನುವಷ್ಟರಲ್ಲಿ ವಿಫಲಗೊಂಡು ಅಲ್ಲೇ ಕೆಳಗೆ ಬೀಳುತ್ತಾರೆ. ಅಲ್ಲಿಂದ ಎದ್ದು, ತನ್ನ ಕೋರ್ಟ್‌ಗೆ ಬರಬೇಕು ಎಂದು ಏಳುವಾಗ ಅಲ್ಲೇ ಕುಸಿದು ಬೀಳುತ್ತಾರೆ. ಸ್ಥಳದಲ್ಲೇ ಇದ್ದ ರೆಫ್ರಿ, ಆಟಗಾರರು ಆತನ ಬಳಿಗೆ ಬಂದು ವಿಚಾರಿಸಿದರೂ ಪ್ರಯೋಜನವಾಗುವುದಿಲ್ಲ.
ಇದನ್ನೂ ಓದಿ: Zee ಎಂಡಿ ಮತ್ತು CEO ಪುನಿತ್ ಗೋಯೆಂಕಾ ಅವರಿಗೆ 'ಗೇಮ್ ಚೇಂಜರ್ ಆಫ್ ದಿ ಇಯರ್' ಪ್ರಶಸ್ತಿ!
ತಕ್ಷಣ ಆತನನ್ನು ಅಲ್ಲಿನ ಪನ್ರುತಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಕಡಂಪುಲಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.