ಸಾಮಾನ್ಯವಾಗಿ ಅತ್ತಿಗೆ-ನಾದಿನಿ ಅಂದ್ರೆ ಸಾಕು ಹಲವರ ಮನೆಯಲ್ಲಿ ಪ್ರೀತಿಗಿಂತ, ವಿರಸವೇ ಹೆಚ್ಚು....ಅತ್ತ ಗಂಡ ತನ್ನ ಮನೆಯವರನ್ನು ಬಿಟ್ಟುಕೊಡುವ ಹಾಗಿಲ್ಲ, ತನ್ನನ್ನೇ ನಂಬಿ ಬಂದ ಹೆಂಡತಿಯನ್ನು ಬಿಡುವ ಹಾಗಿಲ್ಲ. ಅದಕ್ಕಾಗಿ ಇವರಿಬ್ಬರ ನಡುವೆ ಬೆಸುಗೆ ಹಾಕಲು ಇಲ್ಲೊಂದು ಪ್ರದೇಶದಲ್ಲಿ ಜಾತ್ರೆ ಮುಖಾಂತರ ಬಂಧನದ ಬೇಡಿ ಹಾಕಲಾಗುತ್ತದೆ.  ಚಿತ್ರದುರ್ಗ ಜಿಲ್ಲೆಯ ಈ ಹಳ್ಳಿ ಇದಕ್ಕೆ ಸಾಕ್ಷಿಯಾಗಿದೆ.


COMMERCIAL BREAK
SCROLL TO CONTINUE READING

ಸಂಬಂಧಗಳನ್ನು ಗಟ್ಟಿಗೊಳಿಸುವಂಥ ಜಾತ್ರೆ:
ವಾಸ್ತವವಾಗಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ   ಚಿಕ್ಕೀರಣ್ಣನ ಮಾಳಿಗೆ ಗ್ರಾಮದ ಶ್ರೀ ಅಹೋಬಲ ನರಸಿಂಹ ಸಂಬಂಧ ಸ್ವಾಮಿಯ ಕಾರ್ತಿಕ ಪೂಜೆ ಜಾತ್ರಾ ಮಹೋತ್ಸವದಲ್ಲಿ ಅತ್ತಿಗೆ-ನಾದಿನಿಯರಿಗೆ ಡಿಚ್ಚಿ ಹೊಡೆಸುವ ಮೂಲಕ ಸಂಬಂಧ ಗಟ್ಟಿಗೊಳಿಸಲಾಗುತ್ತದೆ. ಸಂಬಂಧಗಳನ್ನು ಗಟ್ಟಿಗೊಳಿಸುವಂಥ ಈ ಜಾತ್ರೆಯಲ್ಲಿ ಈ ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅತ್ತಿಗೆ-ನಾದಿನಿಯರು ಬಂದು ಒಬ್ಬರಿಗೊಬ್ಬರು ಡಿಚ್ಚಿ ಹೊಡೆದುಕೊಳ್ಳುವ ಮೂಲಕ ಜಾತ್ರೆಗೆ ಮೆರುಗು ತರುತ್ತಾರೆ. ಈ ಜಾತ್ರೆಯು ಅತ್ತಿಗೆ ನಾದಿನಿಯರ ಬಾಂಧವ್ಯ ಬೆಸೆಯುವ ಹಬ್ಬವಾಗಿದ್ದು, ಹಬ್ಬದಲ್ಲಿ ಅತ್ತಿಗೆ ನಾದಿನಿಯರು ಮುಂದೆಲೆ ಹಿಡಿದು ಡಿಚ್ಚಿ ಹೊಡೆಯುವುದು ಈ ಗ್ರಾಮದ ಒಂದು ಪುರಾತನ ಸಂಪ್ರದಾಯ.


ಇದನ್ನೂ ಓದಿ- ನಂಜನಗೂಡು ಕ್ಷೇತ್ರವನ್ನು ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ : ಸಿಎಂ ಬೊಮ್ಮಾಯಿ


ಅತ್ತಿಗೆ-ನಾದಿನಿಯರ ನಡುವೆ ಸಂಬಂಧ ಬೆಸೆಯುವ ಈ ಜಾತ್ರೆಯಲ್ಲಿ ಒಂದು ಬದಿಯಲ್ಲಿ ಅತ್ತಿಗೆಯರು, ಇನ್ನೊಂದು ಬದಿ ನಾದಿನಿಯರು ಎದುರು- ಬದುರು ನಿಂತು ಓಡೋಡಿ ಬರುತ್ತಾ ತಮ್ಮ ಮುಂದಲೆಯಿಂದ ಡಿಚ್ಚಿ ಹೊಡೆಯುವುದು ವಿಶೇಷ. ಇದು ಹಿಂದಿನಿಂದಲ್ಲೂ ನಡೆದುಕೊಂಡು ಬಂದ ಆಚರಣೆ. ಡಿಚ್ಚಿ ಕಾರ್ಯಕ್ರಮಕ್ಕೂ ಮುಂಚೆ ಮೊದಲು ಟಗರಿನ ಕಾಳಗ ನಡೆಸಲಾಗುತ್ತದೆ. ನಂತರ ಈ ಕಾರ್ಯಕ್ರಮಕ್ಕೆ ಮನೆ- ಮಗಳನ್ನು ಗ್ರಾಮದ ಊರ ಹೆಬ್ಬಾಗಿಲಿನಿಂದ ಮೆರವಣಿಗೆಯ ಮೂಲಕ ದೇವಸ್ಥಾನದ ಆವರಣಕ್ಕೆ ಕರೆತರಲಾಗುತ್ತದೆ. ಅತ್ತಿಗೆ ನಾದಿನಿಯರು ಪರಸ್ಪರ ಕಿತ್ತಾಡಿ ಮನಸ್ತಾಪಗಳು ಉಂಟಾಗಿ ತವರು ಮನೆಗೆ ಬರುವುದಿಲ್ಲ. ಇದರಿಂದ ಸಂಬಂಧಗಳ ಮಧ್ಯ ಬಿರುಕು ಮೂಡಿ ಹಾಳಾಗುತ್ತವೆ. ಇದನ್ನು ಮನಗಂಡ ನಮ್ಮ ಪೂರ್ವಿಕರು ಅತ್ತಿಗೆ ನಾದಿನಿಯನ್ನು ದೇವಸ್ಥಾನದಲ್ಲಿ ರಾಜಿ ಮಾಡಿಸಿ ಪರಸ್ಪರ ಚೆನ್ನಾಗಿ ಇರಲೆಂಬ ಉದ್ದೇಶದಿಂದ ಮುಂದಲೆಯಿಂದ ಒಬ್ಬರಿಗೊಬ್ಬರು ಡಿಚ್ಚಿ ಹೊಡೆಸುತ್ತಾರೆ. ಇದರಿಂದ ಅತ್ತಿಗೆ-ನಾದಿನಿಯರ ಸಂಬಂಧ ಗಟ್ಟಿಯಾಗಿ ಅವರಿಬ್ಬರೂ ಅನ್ಯೋನ್ಯವಾಗಿ ಬದುಕುತ್ತಾರೆ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆ ಆಗಿದೆ.  ಕಾವೇರಿ ನದಿಯಲ್ಲಿ ಪ್ರವಾಸಿಗರ ಡೇಂಜರಸ್ ಮೋಜು- ಕಂಡಕಂಡಲ್ಲಿ ನೀರಿನಾಟ!!


ಈ ಜಾತ್ರೆಯಲ್ಲಿ ಅತ್ತಿಗೆ-ನಾದಿನಿಯರು ಮುಂದಲೆ ಹಿಡಿದುಕೊಂಡು ಡಿಚ್ಚಿ ಹೊಡೆದುಕೊಳ್ಳುವುದರಿಂದ ಇವರ ಸಂಬಂಧ ಗಟ್ಟಿಯಾಗುವುದು ಮಾತ್ರವಲ್ಲ, ಮನೆಯಲ್ಲಿ ಅತ್ತೆ ಸೊಸೆ ಶಾಂತಿ ನೆಮ್ಮದಿಯಿಂದ ಒಟ್ಟಾಗಿ ಬಾಳುತ್ತಾರೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆಯೇ ಈ ಆಚರಣೆಯನ್ನು ಈಗಲೂ ಮುಂದುವರೆಸಲಾಗುತ್ತಿದೆ.
ವಿವಾಹವಾಗಿ ರಾಜ್ಯದ ಬೇರೆ ಬೇರೆ ಕಡೆ ಎಲ್ಲೆ ನೆಲೆಸಿದ್ದರೂ ಸಹ ಗ್ರಾಮದ ಹೆಣ್ಣು ಮಕ್ಕಳು ಈ ಜಾತ್ರೆಯ ಸಂದರ್ಭದಲ್ಲಿ ಗ್ರಾಮಕ್ಕೆ ಬಂದು ಜಾತ್ರೆಯಲ್ಲಿ ಪಾಲ್ಗೊಂಡು ಡಿಚ್ಚಿ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಾರೆ. ಇಲ್ಲವಾದರೆ ಮನೆಯಲ್ಲಿ ಅಶಾಂತಿ, ತೊಂದರೆಯಾಗುತ್ತದೆ ಎಂದು ಕೂಡ ಇಲ್ಲಿನ ಜನರು ನಂಬುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.