Viral video of tree Breathing: ಮ್ಯಾಜಿಕ್ ಮತ್ತು ನಂಬಲಾಗದ ಘಟನೆಗಳಿಗೆ ಸಾಕ್ಷಿಯಾಗಲು ಪ್ರಕೃತಿಯು ಅತ್ಯುತ್ತಮ ಸ್ಥಳವಾಗಿದೆ. ನಾವು ಸಾಮಾನ್ಯವಾಗಿ ಕಾಡಿನಲ್ಲಿ ಕೆಲವು ವಿಷಯಗಳನ್ನು ಕಾಣುತ್ತೇವೆ ಅದು ತುಂಬಾ ಅಸ್ವಾಭಾವಿಕ ಮತ್ತು ಅತಿವಾಸ್ತವಿಕವಾಗಿರುತ್ತದೆ. ಕೆಲವೊಮ್ಮೆ ಪ್ರಕೃತಿಯಲ್ಲಿ ನಡೆಯುವ ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ನೋಡಿದರೂ ಕೂಡ ಅದನ್ನು ನಂಬಲು ಸಾಧ್ಯವಾಗುವುದಿಲ್ಲ. 


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ಇಂತಹದೊಂದು ವಿಸ್ಮಯಕಾರಿ ವಿಡಿಯೋ ವೈರಲ್ ಆಗಿದ್ದು, ಇಂಟರ್ನೆಟ್ ಬಳಕೆದಾರರನ್ನು ಗೊಂದಲಕ್ಕೀಡು ಮಾಡಿದೆ.ಮರವೊಂದು ಉಸಿರಾಡುತ್ತಿರುವ ವೀಡಿಯೋ ಕೆನಡಾದ ಕ್ಯಾಲ್ಗರಿಯಿಂದ ನಡೆದಿದ್ದು, ಈ ದೃಶ್ಯವನ್ನು ವೀಕ್ಷಿಸಿದ ನಂತರ ಇಡೀ ಜಗತ್ತು ಈಗ ಗೊಂದಲಕ್ಕೊಳಗಾಗಿದೆ.


ಇದನ್ನೂ ಓದಿ: Viral video: ಎರಡು ಕಾಲುಗಳಿರುವ ಅಪರೂಪದ ಹಾವನ್ನು ಎಂದಾದರು ನೋಡಿದ್ದೀರಾ? ಇಲ್ಲ ಅಂದ್ರೆ ಈಗಲೇ ನೋಡಿ


ಗಿಡಗಳು ಮತ್ತು ಮರಗಳು ಜೈವಿಕ ಎಂದು ಶಾಲೆಗಳಲ್ಲಿ ಕಲಿತದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಆದರೆ ಈ ವೀಡಿಯೊದಲ್ಲಿ ನಾವು ಅಸಾಮಾನ್ಯವಾದುದನ್ನು ನೋಡಬಹುದು. ಓಟದ ನಂತರ ಅಥವಾ ಯಾವುದೇ ಕಠಿಣ ಕೆಲಸವನ್ನು ಮಾಡಿದ ನಂತರ ಯಾವುದೇ ಮಾನವ  ಉಸಿರಾಡುವಂತೆಯೇ ಮರವು ಕೂಡ ಉಸಿರಾಡುತ್ತಿದೆ. ಮರದ ಕಾಂಡದಲ್ಲಿ ಬಿರುಕು ಇದ್ದು, ಜೋರಾಗಿ ಉಸಿರಾಡುತ್ತಿರುವುದನ್ನು ನಾವು ಈ ವಿಡಿಯೋದಲ್ಲಿ ಕಾಣಬಹುದು. 


ಜೂನ್‌ನಲ್ಲಿ ಕ್ಯಾಲ್ಗರಿಯಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಅಪಾಯಕ್ಕೆ ಒಳಗಾಗಿದ್ದ ಮರಗಲನ್ನು ರಕ್ಷಿಸಲು ವ್ಯಕ್ತಿಯೊಬ್ಬ ಕಾಡಿಗೆ ಹೋಗಿದ್ದ, ಈ ಸಂದರ್ಭದಲ್ಲಿ ಉಸಿರಾಡುತ್ತಿದ್ದ ಮರವನ್ನು ನೋಡಿ, ವ್ಯಕ್ತಿ ಬೆಚ್ಚಿಬಿದ್ದಿದ್ದಾನೆ, ಈ ಅದ್ಭುತ ಕ್ಷಣದ ವಿಡಿಯೋವನ್ನು ವ್ಯಕಿ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾನೆ. 


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


ಈ ವೀಡಿಯೋ ಎಲ್ಲರನ್ನೂ ಅಚ್ಚರಿಗೊಳಿಸಿದ್ದು, ಈ ಹಿಂದೆ ಯಾರೂ ನೋಡಿರದ ಸಂಗತಿಯಾಗಿದೆ. ಸಿನಿಮಾ ನೋಡಿದಂತೆ ಭಾಸವಾಗುತ್ತದೆ. ಪ್ರಸ್ತುತ, ವೀಡಿಯೊವು 5.5 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದ್ದು,  9ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋಗೆ ಕಾಮೆಂಟ್‌ ಮಾಡಿದ್ದಾರೆ. ನೆಟಿಜನ್‌ಗಳು ಈ ವೀಡಿಯೊಗೆ ತಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ವಿಭಾಗದಲ್ಲಿ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಕೃತಿಯ ಈ ರಹಸ್ಯವು ಬಹಳಷ್ಟು ಇಂಟರ್ನೆಟ್ ಬಳಕೆದಾರರನ್ನು ಬೆರಗುಗೊಳಿಸಿದೆ.


ನೆಟ್‌ಫ್ಲಿಕ್ಸ್‌ನ ಜನಪ್ರಿಯ ವೆಬ್ ಸರಣಿ 'ಸ್ಟ್ರೇಂಜರ್ ಥಿಂಗ್ಸ್' ನೊಂದಿಗೆ ವೀಡಿಯೊ ಹೋಲಿಕೆಯ ಕುರಿತು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮರದ ಉಸಿರಾಟದ ಈ ವೈರಲ್ ವೀಡಿಯೊವು ಪ್ರಕೃತಿ ಉತ್ಸಾಹಿಗಳು ಮತ್ತು ವಿಜ್ಞಾನಿಗಳನ್ನು ಕನ್ಫ್ಯೂಸ್‌ ಆಗುವಂತೆ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.