ಚಾಮರಾಜನಗರ: ಜಮೀನಿನಲ್ಲಿ ರೈತ ಮಲಗಿದ್ದ ವೇಳೆ ಆನೆಯೊಂದು ರೈತನ ಎದೆ ಮೇಲೆ ಕಾಲಿಟ್ಟ ಘಟನೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಲೊಕ್ಕನಹಳ್ಳಿ ಗ್ರಾಮದ ನಿವಾಸಿ ಬಸವಣ್ಣ (52 )  ಗಾಯಗೊಂಡ ರೈತ (Farmer).  ಜಮೀನಿನಲ್ಲಿ  ಬೆಳೆದಿದ್ದ ಆಲೂಗೆಡ್ಡೆ ಬೆಳೆ ಸಂರಕ್ಷಣೆ ಮಾಡಲು ಜಮೀನಿನ ಕಾವಲಿಗೆ ಈತ ತೆರಳಿದ್ದರು. ಜಮೀನಿನ ತೆವರಿನ ಮೇಲೆ ಬಸವಣ್ಣ ಮಲಗಿದ್ದ ವೇಳೆ ಕಾಡಾನೆಯೊಂದು (Kadane) ಬಲ ಭಾಗದಲ್ಲಿ ಈತನ  ಎದೆ ಮೇಲೆ ಕಾಲಿಟ್ಟಿದೆ.


ಇದನ್ನೂ ಓದಿ- Viral News: ಮ್ಯಾರೇಜ್ ಆಗುವುದನ್ನೇ ಬ್ಯುಸಿನೆಸ್‌ ಮಾಡಿಕೊಂಡಿದ್ದ ಮಹಿಳೆಗೆ ಏಡ್ಸ್..!


ಆನೆ ಎದೆ ಮೇಲೆ ಕಾಲಿಡುತ್ತಿದ್ದಂತೆ ರೈತ ಕೂಗಿ ಕೊಂಡಿದ್ದು ಈ ವೇಳೆ ಆನೆ ತನ್ನ ಮರಿ ಜೊತೆ ಕಾಲ್ಕಿತ್ತಿದೆ. ಎದೆ ಮೇಲೆ ಕಾಲಿಟ್ಟ ಪರಿಣಾಮ ರೈತ ಬಸವಣ್ಣ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.  


ಮಾಹಿತಿ ಅರಿತ ತಕ್ಷಣ ಸ್ಥಳೀಯರು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಬಸವಣ್ಣ ಅವರನ್ನು ದಾಖಲು ಮಾಡಲಾಗಿದೆ.


ಇದನ್ನೂ ಓದಿ- ಮಾವು, ಬಾಳೆಯ ರೀತಿ ಈ ತೋಟದಲ್ಲಿ ಬೆಳೆಸಲಾಗುತ್ತದೆ ರಾಶಿ ರಾಶಿ ಹಾವು ! ಇಲ್ಲಿವೆ ನೋಡಿ ಫೋಟೋ


ಆನೆ ದಾಳಿಯಿಂದ ರೈತನ ಎದೆಯ ಭಾಗ, ಬಲಗೈಗೆ ತೀವ್ರ ಗಾಯಗಳಾಗಿದೆ.  ಸದ್ಯ, ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಾಹಿತಿ ದಾಖಲಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.