Traffic jam on Karnataka-Tamil Nadu border: ಕಬ್ಬು ತುಂಬಿದ್ದ ಲಾರಿಯೊಂದನ್ನು ಅಡ್ಡ ಹಾಕಿ ಆನೆಯೊಂದು ಕಬ್ಬು ಕಿತ್ತು ತಿಂದಿರುವ  ಘಟನೆ ಚಾಮರಾಜನಗರ ಗಡಿಭಾಗವಾದ ಆಸನೂರಿನಲ್ಲಿ ಶುಕ್ರವಾರ (ಮೇ 03, 2024) ಬೆಳಗ್ಗೆ ನಡೆದಿದೆ.


COMMERCIAL BREAK
SCROLL TO CONTINUE READING

ರಸ್ತೆ ಬದಿ ನಿಂತಿದ್ದ ಆನೆ (Elephant) ಕಬ್ಬು ತುಂಬಿದ್ದ ಲಾರಿ ಕಂಡಿದ್ದೇ ತಡ ಓಡೋಡಿ ಬಂದು ಕಬ್ಬಿಗೆ ಬಾಯಿ ಹಾಕಿದೆ. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಸಮಸ್ಯೆಯೂ ಉಂಟಾಗಿದೆ. ಆನೆ ಅಡ್ಡ ಹಾಕುತ್ತಿದ್ದಂತೆ ಲಾರಿ ನಿಲ್ಲಿಸಿದ ಚಾಲಕ ಬಳಿಕ ಸ್ವಲ್ಪ ಸಮಯದ ನಂತರ ಲಾರಿ ಚಲಾಯಿಸಿದ್ದಾನೆ. 


ಇದನ್ನೂ ಓದಿ- BMTC: 'ಚೇಂಜ್ ಇಲ್ಲ' ಎಂದು 5 ರೂ. ಹಿಂದಿರುಗಿಸದ ಬಿಎಂಟಿಸಿ ಕಂಡಕ್ಟರ್, ಮುಂದೆ ಆಗಿದ್ದೇನು?


ಇನ್ನು, ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಈ ಆನೆ ದಾಂಧಲೆ ಸಾಮಾನ್ಯವಾಗಿದ್ದು, ಬಸ್ ನಲ್ಲಿದ್ದ ವ್ಯಕ್ತಿಯೊಬ್ಬರು ವೀಡಿಯೋವನ್ನು ಸೆರೆ ಹಿಡಿದಿದ್ದಾರೆ. 


ಇದನ್ನೂ ಓದಿ- Viral Video: ಏಕಾಏಕಿ ಹಾರಿದ ಕೋಲೆ ಬಸವ, ಟ್ರಕ್‌ನಡಿ ಬಿದ್ದ ಸ್ಕೂಟರ್‌ ಸವಾರ!


ಕರ್ನಾಟಕ-ತಮಿಳುನಾಡು ಗಡಿಯಲ್ಲಿ 3 ತಾಸು ಟ್ರಾಫಿಕ್ ಜಾಮ್! 
ಪ್ರತ್ಯೇಕ ಘಟನೆಯಲ್ಲಿ ಇದಕ್ಕೂ ಮೊದಲು ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಸುಮಾರು 2 ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ (Traffic Jam) ಆಗಿತ್ತು. ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಸುಮಾರು 3 ತಾಸು ಟ್ರಾಫಿಕ್ ಜಾಮ್ ಆಗಿತ್ತು ಎಂದು ವರದಿಯಾಗಿದೆ. 


ವಾಸ್ತವವಾಗಿ, ಅತಿಭಾರ ಹೊತ್ತ ವಾಹನಗಳಿಗೆ ತಮಿಳುನಾಡು ಅರಣ್ಯ ಇಲಾಖೆಯ ದಂಡ ಪ್ರಯೋಗ ಮಾಡಲಾಗುತ್ತಿದೆ.  ಈ ಹಿನ್ನಲೆಯಲ್ಲಿ,  ಚಾಮರಾಜನಗರದ ಗಡಿಯಲ್ಲಿರುವ ಅಸನೂರಲ್ಲಿ ವಾಹನಗಳನ್ನು ತಡೆದು ಸರಕುಗಳ ತೂಕ ಪರೀಕ್ಷಿಸಿ ಅನುಮತಿ ನೀಡಲಾಗುತ್ತಿದೆ.   ಇದರಿಂದಾಗಿ,  ಬಸ್, ಕಾರು, ಬೈಕ್ ಸವಾರರು  ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುವಂತಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.