ಮದುವೆಯಾದ 2 ತಿಂಗಳಲ್ಲೇ ಅಂಬಾನಿ ಸೊಸೆ ರಾಧಿಕಾ ಗರ್ಭಿಣಿ..!? ವಿಡಿಯೋ ವೈರಲ್
Radhika Merchant pregnant : ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಸೊಸೆ.. ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಸದ್ಯ ಒಂದು ವಿಡಿಯೋ ಸಹ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.. ಅಸಲಿಗೆ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
Anant Ambani's wife Radhika : ಬಿಲಿಯನೇರ್, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇತ್ತೀಚೆಗೆ ತಮ್ಮ ಕಿರಿಯ ಪುತ್ರ ಅನಂತ್ ಅವರ ವಿವಾಹವನ್ನು ಅದ್ಧೂರಿಯಾಗಿ ನಡೆಸಿಕೊಟ್ಟರು. ಜುಲೈ 12 ರಂದು ಮುಂಬೈನ ಜಿಯೋ ಕನ್ವೇನ್ಷನ್ ಹಾಲ್‌ನಲ್ಲಿ ಅನಂತ್ ರಾಧಿಕಾ ಮರ್ಚೆಂಟ್ ವಿವಾಹ ನೆರವೇರಿತು. ಈ ಮದುವೆಗೆ ಸಮಾಜದ ಬಹುತೇಕ ಗಣ್ಯರು, ನಟ-ನಟಿಯರು, ನಮ್ಮ ದೇಶವಷ್ಟೇ ಅಲ್ಲ, ವಿದೇಶಗಳಿಂದಲೂ ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ಇದೇ ವೇಳೆ ಮುಖೇಶ್ ಅಂಬಾನಿ ಕುಟುಂಬ ಅಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ಗಣೇಶ್ ಆಚರಣೆ ನಡೆಸಿತು. ವಿನಾಯಕ ಚತುರ್ಥಿಗೆ ಬಾಲಿವುಡ್‌ನ ಹಲವು ಮಂದಿ ಆಗಮಿಸಿದ್ದರು. ಈ ಮಧ್ಯ ಅನಂತ್ ಪತ್ನಿ ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಈ ಒಂದು ಘಟನೆ ಸಾಕು ಅನುಷ್ಕಾ ಕೊಹ್ಲಿ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಅನ್ನೋದಕ್ಕೆ..! ಗ್ರೇಟ್ ಅತ್ತಿಗೆ..
ಅನಂತ್ ಅಂಬಾನಿಯನ್ನು ಮದುವೆಯಾದ ನಂತರ ರಾಧಿಕಾ ಮರ್ಚೆಂಟ್‌ಗೆ ಇದು ಮೊದಲ ವಿನಾಯಕ ಚತುರ್ಥಿ. ಇಡೀ ಕುಟುಂಬ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. ಈ ವೇಳೆ ತೆಗೆದ ವಿಡಿಯೋ ಒಂದರಲ್ಲಿ ರಾಧಿಕಾ ಮರ್ಚಂಟ್ ತಮ್ಮ ಹೊಟ್ಟೆಯ ಮೇಲೆ ಕೈಯಿಟ್ಟು ಹೀಲ್ಸ್ ಬದಲಿಗೆ ದಪ್ಪನೆಯ ಶೂ ಧರಿಸಿದ್ದು ಕಂಡು ಬಂತು..
ಮೇಲಾಗಿ.. ಈ ವಿಡಿಯೋದಲ್ಲಿ ನೀತಾ ಅಂಬಾನಿ ತನ್ನ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಬೀಳದಂತೆ ಕೈ ಹಿಡಿದಿದ್ದಾರೆ... ಇದನ್ನು ನೋಡಿದವರೆಲ್ಲಾ ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂದು ಫಿಕ್ಸ್ ಆಗಿದ್ದಾರೆ. ಇನ್ನೇನು.. ಎಲ್ಲರೂ ಅಂಬಾನಿ ಕುಟುಂಬಕ್ಕೆ ಶುಭ ಹಾರೈಕೆ ಮಾಡುತ್ತಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.