ಆರ್ಡರ್ ಕ್ಯಾನ್ಸಲ್ ಮಾಡಿದಕ್ಕೆ ಕೋಪ: ಮೆಕ್ ಡೊನಾಲ್ಡ್ಸ್ಗೆ ನುಗ್ಗಿ ತಾನೇ ಕುಕ್ ಮಾಡಿದ ಯುವತಿ
ಹಸಿವಾದಾಗ ನೀವು, ನೀವಾಗಿರಲ್ಲ ಎಂಬ ಮಾತಿನಂತೆ ಇಲ್ಲೊಬ್ಬ ಯುವತಿ ಹಸಿವಿನಿಂದ ಏನು ಮಾಡಿದ್ದಾಳೆ ಎಂದು ನೀವೇ ನೋಡಿ. ಯುವತಿಯೊಬ್ಬಳು ಮೆಕ್‌ಡೊನಾಲ್ಡ್ಸ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ಆ ಆಹಾರ ಆಕೆಗೆ ಸಿಕ್ಕಿಲ್ಲ.
ಹಸಿವಾದ ಸಂದರ್ಭದಲ್ಲಿ ನೀವು ಆಪ್‌ಗಳ ಮೂಲಕ ಫುಡ್ ಆರ್ಡರ್ ಮಾಡುತ್ತೀರಿ. ಇಲ್ಲವೇ ರೆಸ್ಟೋರೆಂಟ್, ಹೋಟೇಲ್‌ಗಳಿಗೆ ಹೋಗಿ ಖರೀದಿ ಮಾಡುತ್ತೀರಿ. ಇನ್ನು ಹೆಚ್ಚು ಅಭಿವೃದ್ಧಿ ಹೊಂದಿದ ಪಟ್ಟಣಗಳಲ್ಲಿ ಕಾರಿನಲ್ಲಿ ತೆರಳಿ ಆಹಾರವನ್ನು ಕಿಟಕಿ ಮೂಲಕ ಆರ್ಡರ್ ಮಾಡುತ್ತೇವೆ. ಇದನ್ನು ಡ್ರೈವ್-ಥ್ರೂ ಎಂದು ಕರೆಯುತ್ತೇವೆ.
ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಇಂತಹ ಸೌಲಭ್ಯಗಳನ್ನು ಒದಗಿಸುತ್ತವೆ. ಡ್ರೈವ್-ಥ್ರೂ ಮೂಲಕ ನಮಗೆ ಆಹಾರವನ್ನು ಒದಗಿಸುವ ಕಂಪನಿಗಳಲ್ಲಿ ಮೆಕ್‌ಡೊನಾಲ್ಡ್ಸ್ ಕೂಡ ಒಂದಾಗಿದೆ. ಕಾರಿನಲ್ಲಿ ಕುಳಿತು ನಿಮ್ಮ ಆಹಾರವನ್ನು ಆರ್ಡರ್ ಮಾಡಿ ಮತ್ತು ಕಿಟಕಿಯ ಮೂಲಕ ಕೆಲವೇ ನಿಮಿಷಗಳಲ್ಲಿ ನೀವು ಅದನ್ನು ಪಡೆಯಬಹುದು. ಇದೀಗ ಈ ಡ್ರೈವ್ ಥ್ರೂ ಮೂಲಕ ಆರ್ಡರ್ ಮಾಡಿದ ಆಹಾರ ಸಿಕ್ಕಿಲ್ಲ ಎಂದು ಸೆಂಟರ್‌ನೊಳಗೆ ನುಗ್ಗಿದ ಯುವತಿಯೊಬ್ಬಳು ತಾನೇ ಸ್ವತಃ ಕುಕ್ ಮಾಡಿಕೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರುತ್ತದೆ ಈ ಒಂದು ತರಕಾರಿ
ಹಸಿವಾದಾಗ ನೀವು, ನೀವಾಗಿರಲ್ಲ ಎಂಬ ಮಾತಿನಂತೆ ಇಲ್ಲೊಬ್ಬ ಯುವತಿ ಹಸಿವಿನಿಂದ ಏನು ಮಾಡಿದ್ದಾಳೆ ಎಂದು ನೀವೇ ನೋಡಿ. ಯುವತಿಯೊಬ್ಬಳು ಮೆಕ್‌ಡೊನಾಲ್ಡ್ಸ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ಆ ಆಹಾರ ಆಕೆಗೆ ಸಿಕ್ಕಿಲ್ಲ. ಇದರಿಂದ ಕೋಪಗೊಂಡ ಯುವತಿ ಕಿಟಕಿಯ ಮೂಲಕ ನುಗ್ಗಿ ಅಲ್ಲಿದ್ದ ಇತರ ಸಿಬ್ಬಂದಿಯ ಸಹಾಯದಿಂದ ಆಹಾರ ತಯಾರಿಸಿದ್ದಾಳೆ. ಈ ಘಟನೆ ಫಾಸ್ಟ್‌ಫುಡ್‌ನ ಡ್ರೈವ್-ಥ್ರೂ ಔಟ್‌ಲೆಟ್‌ನಲ್ಲಿ ನಡೆದಿದೆ.
ವೈರಲ್ ಕ್ಲಿಪ್‌ನಲ್ಲಿ, ಮಹಿಳೆ ಕಿಟಕಿಯಿಂದ ಕಿಚನ್ ಕಡೆಗೆ ನುಗ್ಗುತ್ತಿರುವುದನ್ನು ಕಾಣಬಹುದು. ವೀಡಿಯೊವನ್ನು ಮೊದಲು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಬಳಿಕ ಇದು ಇತರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಮಹಿಳೆ ಫಾಸ್ಟ್ ಫುಡ್ ರೆಸ್ಟೋರೆಂಟ್‌ನ ಸಿಬ್ಬಂದಿಯ ಬಳಿಗೆ ಹೋಗಿ, ಅಲ್ಲಿ ತಾನೇ ಟೇಕ್‌ಅವೇ ಆರ್ಡರ್ ಸಿದ್ಧಪಡಿಸುತ್ತಿರುವುದು ಕಾಣಬಹುದು.
ನೈರ್ಮಲ್ಯದ ದೃಷ್ಟಿಯಿಂದ ಮೆಕ್ ಡೊನಾಲ್ಡ್ಸ್ ಶಾಪ್‌ನವರು ಆ ಸಂದರ್ಭದಲ್ಲಿ ಆರ್ಡರ್‌ಗಳನ್ನು ಸ್ವೀಕರಿಸಿರಲಿಲ್ಲ. ಇದಕ್ಕೆ ಕೋಪಗೊಂಡ ಯುವತಿ ಸೆಂಟರ್‌ನ ಒಳನುಗ್ಗಿ, ಸ್ವತಃ ತಾನೇ ಅಡುಗೆ ಮಾಡಿದ್ದಾಳೆ.
ಇದನ್ನೂ ಓದಿ: Flipkart Electronics Sale : ಕೇವಲ ₹750 ರೊ.ಳಗೆ ಖರೀದಿಸಿ ಈ ಟಾಪ್ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು!
ವಿಡಿಯೋದಲ್ಲಿ ಏನಿದೆ:
ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿರುವ ಈ ಯುವತಿಯು ಮೆಕ್‌ಡೊನಾಲ್ಡ್‌ನ ಉದ್ಯೋಗಿಗೆ ಡ್ರೈವ್ ಥ್ರೂ ಮೂಲಕ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ನೈರ್ಮಲ್ಯ ಮತ್ತು ಕೈಗವಸುಗಳ ಕೊರತೆಯಿಂದಾಗಿ ಆಹಾರವನ್ನು ತಯಾರಿಸಲು ಆಗುತ್ತಿಲ್ಲ ಎಂದು ಸಿಬ್ಬಂದಿ ಆಕೆಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವತಿ, ಎತ್ತರದ ಹಿಮ್ಮಡಿಯ ಬೂಟುಗಳನ್ನು ಧರಿಸಿಕೊಂಡು, ಡ್ರೈವ್-ಥ್ರೂ ಕಿಟಕಿಯ ಮೂಲಕ ಒಳನುಗ್ಗುತ್ತಾಳೆ. ಬಳಿಕ ತನಗೆ ಬೇಕಾದ ಆಹಾರವನ್ನು ತಯಾರಿಸುತ್ತಾಳೆ.
ವಿಡಿಯೋ ನೋಡಿ:
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.