Push ups guinnes world records : ಪುಷ್-ಅಪ್ಸ್‌ ಅತ್ಯಂತ ಕಷ್ಟಕರವಾದ ವ್ಯಾಯಾಮಗಳಲ್ಲಿ ಒಂದು. ಡೈಲಿ ಜಿಮ್‌ಗೆ ಹೋಗುವವರು ಸಹ ಪುಷ್-ಅಪ್‌ ಮಾಡಲು ಹರಸಾಹಸ ಪಡ್ತಾರೆ. ಅಂತಹುದರಲ್ಲಿ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಒಂದು ಗಂಟೆಯಲ್ಲಿ ಅತಿ ಹೆಚ್ಚು ಪುಷ್-ಅಪ್‌ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‌ ಲ್ಯೂಕಾಸ್ ಹೆಲ್ಮ್ಕೆ ಈ ಸಾಧನೆ ಮಾಡಿದ ವ್ಯಕ್ತಿ.


COMMERCIAL BREAK
SCROLL TO CONTINUE READING

ಹೌದು.. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ಪ್ರಕಾರ, 33 ವರ್ಷ ವಯಸ್ಸಿನ ಲ್ಯೂಕಾಸ್ ಒಂದು ಗಂಟೆಯೊಳಗೆ 3,206 ಪುಷ್-ಅಪ್‌ಗಳನ್ನು ಮಾಡಿದ್ದಾರೆ. ಅದು ಪ್ರತಿ ನಿಮಿಷಕ್ಕೆ ಸರಾಸರಿ 53 ಕ್ಕಿಂತ ಹೆಚ್ಚು. ಲ್ಯೂಕಾಸ್ ತನ್ನ ಒಂದು ವರ್ಷದ ಮಗನಿಗೆ 'ಸ್ಫೂರ್ತಿಯನ್ನು ಒದಗಿಸಲು' ಈ ದಾಖಲೆಯನ್ನು ಪ್ರಯತ್ನಿಸಿದರಂತೆ ಅಲ್ಲದೆ,  ತಮ್ಮ ಮಗನಿಗೆ ಅಸಾಧ್ಯವಾದುದು ಯಾವುದನ್ನೂ ತೋರಿಸುವುದಿಲ್ಲ ಎಂದು ತೋರಿಸಿಕೊಡಲು ಎರಡು ಮೂರು ವರ್ಷಗಳ ಕಾಲ ತರಬೇತಿ ಪಡೆದು ಇದೀಗ ದಾಖಲೆ ಮಾಡಿದ್ದಾರೆ.


Viral News: 'ಇದು ಎಂಥಾ ಲೋಕವಯ್ಯ...!' ಬೊಂಬೆ ಜೊತೆ ವಿವಾಹ ಮಾಡಿಕೊಂಡು ಗರ್ಭಿಣಿಯಾದ ಮಹಿಳೆ!


ಇದಕ್ಕೂ ಮೊದಲು, ಏಪ್ರಿಲ್ 2022ರಲ್ಲಿ ಆಸ್ಟ್ರೇಲಿಯಾದ ಡೇನಿಯಲ್ ಸ್ಕಾಲಿ 3,182 ಪುಶ್-ಅಪ್‌ ಮಾಡುವ ಮೂಲಕ ದಾಖಲೆ ಬರೆದಿದ್ದರು. ಈಗ ಲ್ಯೂಕಾಸ್ ಡೇನಿಯಲ್‌ ದಾಖಲೆ ಬ್ರೇಕ್‌ ಮಾಡಿದ್ದಾರೆ. ಪ್ರತಿ 30 ಸೆಕೆಂಡಿಗೆ ಸರಾಸರಿ 26.7 ಪುಷ್-ಅಪ್‌ಗಳನ್ನು ತೆಗೆಯುವ ಲ್ಯೂಕಾಸ್‌ ದಾಖಲೆಗಾಗಿ ಪುಶ್ ಅಪ್‌ ಮಾಡುವಾಗ ಕೇವಲ 34 (1%) ಪುಷ್‌ ಅಪ್‌ಗಳು ಮಾತ್ರ ಫೇಲ್‌ ಆಗಿದ್ದವು. ಸದ್ಯ ಈ ವ್ಯಕ್ತಿ ಪ್ರತಿ ವರ್ಷ ತನ್ನದೇ ದಾಖಲೆಯನ್ನು ಮುರಿಯಲು ಯೋಜಿಸುತ್ತಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.