ನವದೆಹಲಿ: ಬಾಬಾ ವೆಂಗಾ ಅವರು ನುಡಿದ  ವರ್ಷ 2024 ರ ಭವಿಷ್ಯ ಮತ್ತೊಮ್ಮೆ ಭಾರಿ ಹೆಡ್ ಲೈನ್ ಗಿಟ್ಟಿಸುತ್ತಿವೆ. 9/11 ದಾಳಿ ಸೇರಿದಂತೆ ಬಾಬಾ ವೆಂಗಾ ಇದುವರೆಗೆ ನುಡಿದ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬಿಟ್ಟಾಗಿವೆ. ಬಾಬಾ ವೆಂಗಾ ಅವರು ಉತ್ತರ ಮೆಸಿಡೋನಿಯಾದ ಸ್ಟ್ರುಮಿಕಾದಲ್ಲಿ 31 ಜನವರಿ 1911 ರಂದು ಜನಿಸಿದ್ದರು. ಆಕೆ ಕೇವಲ 12 ನೇ ವಯಸ್ಸಿನಲ್ಲಿ ಕಣ್ಣು ಕಳೆದುಕೊಂಡಳು. ಇದಾದ ಬಳಿಕ ಬಾಬಾ ವೆಂಗಾಗೆ ಭವಿಷ್ಯದಲ್ಲಿ ನಡೆಯುವ ಘಟನೆಗಳು ಕಾಣುವ ಸಾಮರ್ಥ್ಯ ಬಂತು ಎನ್ನಲಾಗುತ್ತದೆ. ಹೀಗಿರುವಾಗ ವರ್ಷ 2024ರ ಕುರಿತು ಬಾಬಾ ವೆಂಗಾ ನುಡಿದ ಭವಿಷ್ಯಗಳು ಇದೀಗ ಮತ್ತೊಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿವೆ. (Viral News In Kannada)


COMMERCIAL BREAK
SCROLL TO CONTINUE READING

ಜಾಗತಿಕ ಆರ್ಥಿಕತೆಯ ಮೇಲೆ ಬಿಕ್ಕಟ್ಟು
ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2024 ರಲ್ಲಿ ದೊಡ್ಡ ಜಾಗತಿಕ ಬಿಕ್ಕಟ್ಟು ಉದ್ಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಲ್ಲಿ ಸಾಲದ ಪ್ರಮಾಣ ಹೆಚ್ಚಾಗಲಿದೆ. ಭೂಮಿಗೆ ಸಂಬಂಧಿಸಿದಂತೆ ಉದ್ವಿಗ್ನತೆಯೂ ಉಂಟಾಗಲಿದ್ದು, ಇದು ಜಾಗತಿಕ ಆರ್ಥಿಕತೆಯನ್ನೇ ಅಲುಗಾಡಿಸಲಿದೆ ಎನ್ನಲಾಗಿದೆ.


ನೈಸರ್ಗಿಕ ವಿಪತ್ತುಗಳ ಭಯ
ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಭೂಮಿಯ ಕಕ್ಷೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಸಾಮಾನ್ಯವಾಗಿ ದೀರ್ಘಕಾಲದವರೆಗೆ ಸಂಭವಿಸುತ್ತದೆ. ಆದರೆ, ಶೀಘ್ರದಲ್ಲೇ ಈ ಬದಲಾವಣೆ ಕಂಡುಬಂದರೆ ಭೀಕರ ಪ್ರಕೃತಿ ವಿಕೋಪ ಸಂಭವಿಸಬಹುದು.


ಸೈಬರ್ ದಾಳಿಯ ಸಾಧ್ಯತೆ 
ಬಾಬಾ ವೆಂಗಾ ಪ್ರಕಾರ, 2024 ರಲ್ಲಿ ಸೈಬರ್ ದಾಳಿ ಸಂಭವಿಸಬಹುದು. ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆಸಬಹುದು ಮತ್ತು ಇದರಿಂದಾಗಿ ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯ ಎದುರಾಗಲಿದೆ ಎನ್ನಲಾಗಿದೆ. 


ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು
ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2024 ವರ್ಷವು ವೈದ್ಯಕೀಯ ಕ್ಷೇತ್ರಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ವೈದ್ಯಕೀಯ ಕ್ಷೇತ್ರ ಕ್ಯಾನ್ಸರ್ ಮತ್ತು ಆಲ್ಝೈಮರ್ನಂತಹ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳನ್ನು ಕಂಡುಹಿಡಿಯಬಹುದು ಎನ್ನಲಾಗಿದೆ.


ಇದನ್ನೂ ಓದಿ-ನೀವು ಎಂದಾದರೂ 'ಪಾರ್ಲೆ ಜಿ ಆಲೂ ಪಕೋಡಾ' ತಿಂಡಿದ್ದೀರಾ? ಮಹಿಳೆ ರೆಸೆಪಿ ಹಂಚಿಕೊಳ್ಳುತ್ತಲೇ ವಿಡಿಯೋ ಸಕತ್ ವೈರಲ್...!


ಪುಟಿನ್ ಮೇಲೆ ದಾಳಿಯ ಭಯ
ಬಾಬಾ ವೆಂಗಾ ಪ್ರಕಾರ, 2024 ರ ವರ್ಷವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅಪಾಯಕಾರಿ ಸಾಬೀತಾಗಬಹುದು ಎನ್ನಲಾಗಿದೆ. ಅವರ ಸ್ವಂತ ದೇಶದ ವ್ಯಕ್ತಿಯೊಬ್ಬರು ಅವರ ಮೇಲೆ ದಾಳಿ ನಡೆಯಬಹುದು ಎನ್ನಲಾಗಿದೆ.


ಇದನ್ನೂ ಓದಿ-ಅಷ್ಟಕ್ಕೂ Rashmika Deepfake Video ನಲ್ಲಿರುವ ಬೋಲ್ಡ್ ಬಾಲೆ ಯಾರು?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರನ್ನು ಸಂಪರ್ಕಿಸಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ