ವೈರಲ್ ವಿಡಿಯೋ: ರೈಲ್ವೆ ಸಚಿವಾಲಯದಿಂದ ರೈಲ್ವೆ ವ್ಯವಸ್ಥೆಯಲ್ಲಿ ನಿರಂತರವಾಗಿ ಹೊಸ ಹೊಸ ಸುಧಾರಣೆಗಳನ್ನು ಮಾಡಲಾಗುತ್ತಿದೆ. ರೈಲ್ವೇ ನಿಲ್ದಾಣದಲ್ಲಿ ಅತ್ಯಾಧುನಿಕವಾಗಿ ಕ್ರಾಸಿಂಗ್ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ.  ಆದರೆ ಇದರ ಹೊರತಾಗಿಯೂ, ಜನರು ರೈಲ್ವೆ ಹಳಿಗಳ ಬಳಿ ತಮ್ಮ ಪ್ರಾಣದ ವಿಷಯದಲ್ಲಿ ಚೆಲ್ಲಾಟ ಆಡುವುದನ್ನು ಮಾತ್ರ ಬಿಡುವುದಿಲ್ಲ. ಇದೀಗ ಇಂತಹದ್ದೇ ಒಂದು ವಿಡಿಯೋ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಭಯಾನಕವಾದ ವೈರಲ್ ವಿಡಿಯೋದಲ್ಲಿ ರೈಲ್ವೆ ಗೇಟ್ ಮುಚ್ಚಿದ ನಂತರ ಒಂದು ಟ್ರ್ಯಾಕ್ ನಲ್ಲಿ ರೈಲು ಹಾದು ಹೋಗುತ್ತಿದೆ.  ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ತನ್ನ ಬೈಕ್‌ನೊಂದಿಗೆ ರೈಲ್ವೆ ಕ್ರಾಸಿಂಗ್ ಅನ್ನು ದಾಟಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆಗಲೇ ಅಲ್ಲಿಂದ ಇನ್ನೊಂದು ಹಳಿಯಲ್ಲಿ ರೈಲು ಬರುವುದನ್ನು ವ್ಯಕ್ತಿ ಗಮನಿಸುತ್ತಾನೆ. ತಕ್ಷಣ ಹಿಂದೆ ಸರಿಯಲು ಯತ್ನಿಸಿದಾಗ ವ್ಯಕ್ತಿಯ ಬೈಕ್ ಹಳಿಗಳ ನಡುವೆ ಸಿಲುಕಿಕೊಳ್ಳುತ್ತದೆ. ಅದನ್ನು ಹೊರತರಲು ಪ್ರಯತ್ನಿಸುತ್ತಿರುವಾಗ, ಹಳಿಯಲ್ಲಿ ವೇಗವಾಗಿ ಬರುತ್ತಿರುವ ರೈಲನ್ನು ನೋಡುತ್ತಾನೆ. ಮುಂದೆ ಏನಾಯ್ತು ನೀವೇ ನೋಡಿ...


Viral Video : ಬಾಲಕಿ ಮಾಡಿದಂತೆಯೇ ಆಕೆಯನ್ನು ಮಿಮಿಕ್‌ ಮಾಡುವ ಆನೆ


ವಿಡಿಯೋದಲ್ಲಿ ಗಮನಿಸಿದಂತೆ, ಇದಾದ ಬಳಿಕ ಆ ವ್ಯಕ್ತಿ ಬೈಕ್ ಅನ್ನು ಅಲ್ಲೇ ಬಿಟ್ಟು ಅಲ್ಲಿಂದ ತೆರಳಿ ಪ್ರಾಣ ಉಳಿಸಿಕೊಂಡಿದ್ದಾರೆ. ರೈಲು ಬೈಕ್ ಮೇಲೆಯೇ ಹಾದು ಹೋಗುತ್ತದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಭಾರೀ ಅನಾಹುತ ತಪ್ಪಿದೆ. 


ಇದನ್ನೂ ಓದಿ- Viral Video: ಹಾಲಿನಲ್ಲಿ ಮಗಳ ಪಾದ ತೊಳೆದು ಕುಡಿದ ಪೋಷಕರು..!


ಈ ವೈರಲ್ ವೀಡಿಯೊ ಆಗಸ್ಟ್ 26ರಂದು ಇಟಾವಾದಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರೈಲ್ವೆ ಇಲಾಖೆಯಿಂದ ಯಾವುದೇ ಪ್ರಕರಣ ದಾಖಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.