Viral Video : ಸಾಮಾನ್ಯವಾಗಿ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ನಡೆಯುವ ಬಹು ಮುಖ್ಯ ಘಟನೆ. ಈ  ದಿನವನ್ನು ಅವಿಸ್ಮರಣೀಯವಾಗಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಈಗಂತೂ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೋ, ವಿಡಿಯೋ ಶೂಟ್ ಮಾಡಿ ಆ ನೆನಪನ್ನು ಇನ್ನೂ ಸುಂದರವಾಗಿಸುವ ಪ್ರಯತ್ನ ಮಾಡುತ್ತಾರೆ. ಮದುವೆ ದಿನವೂ ಹಾಗೆಯೇ ಅಲ್ಲಿ ನಡೆಯುವ ಸಣ್ಣ ಸಣ್ಣ ಸನ್ನಿವೇಶಗಳನ್ನು ಕೂಡಾ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತದೆ. ಯಾಕೆಂದರೆ ಅದೊಂದು  ಜೀವಮಾನದ ಸಿಹಿ ನೆನಪು.  


COMMERCIAL BREAK
SCROLL TO CONTINUE READING

ಆದರೆ ಹೀಗೆ ಪ್ರತಿ ಕ್ಷಣವೂ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಭರಾಟೆಯಲ್ಲಿ ಒಮ್ಮೊಮ್ಮೆ ಬೆಚ್ಚಿ ಬೀಳಿಸುವ ದೃಶ್ಯಗಳು ಕೂಡಾ ಸೆರೆಯಾಗಿ ಬಿಡುತ್ತವೆ. ಹೌದು, ಇದೀಗ ಎಲ್ಲೆಡೆ ಹರಿದಾಡುತ್ತಿರುವ ವಿಡಿಯೋ ಅಂಥದ್ದೇ.  ಮದುವೆ ಶಾಸ್ತ್ರದ ನಡುವೆ ನಡೆದ ಆಚಾತುರ್ಯ ಈ ವಿಡಿಯೋದಲ್ಲಿ ಬೆಳಕಿಗೆ ಬಂದಿದೆ. 


ಇದನ್ನೂ ಓದಿ : Viral Video: ಹಳ್ಳಕ್ಕೆ ಬಿದ್ದ ಬೆಕ್ಕಿನ ರಕ್ಷಣೆಗೆ ಕೋತಿಯ ಶತಪ್ರಯತ್ನ: ಮನಮುಟ್ಟುತ್ತೆ ಈ ವಿಡಿಯೋ


ಮದುವೆ ವೇಳೆ ಸಣ್ಣ ಪುಟ್ಟ ಮನಸ್ತಾಪಗಳು ಗಂಡು ಹೆಣ್ಣಿನ ಮನೆಯವರಲ್ಲಿ ಕಾಣಿಸಿಕೊಳ್ಳುವುದು ಸಹಜ. ಎಲ್ಲಾದರೂ ಒಂದು ಕಡೆ ಹುಳುಕು ಹುಡುಕುವುದು ಅಥವಾ ಕಾಣಿಸಿಕೊಳ್ಳುವುದು ಇದ್ದೇ ಇರುತ್ತದೆ. ಅಲ್ಲಿ ಸ್ವಲ್ಪ ಮಾತಿನ ಮೇಲಾಟ ನಡೆಯಬಹುದು. ಆದರೆ ಮಂಟಪದಲ್ಲಿ ಶಾಸ್ತ್ರಕ್ಕೆ ನಿಂತ ವಧು ವರರೇ ಹೊಡೆದಾಡುವ ಹಂತಕ್ಕೆ ತಲುಪಿದರೆ?  ಅಂಥದ್ದೊಂದು ವಿಚಿತ್ರ ವಿಡಿಯೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ.  ವಧು-ವರರ ಜಗಳದಿಂದ ಮದುವೆ ಮಂಟಪ ಕುಸ್ತಿ ಅಖಾಡವಾಗಿ ಮಾರ್ಪಟ್ಟಿದೆ.  


 ವರ ವಧುವಿಗೆ ಒತ್ತಾಯ ಪೂರ್ವಕವಾಗಿ ಸಿಹಿ ತಿನ್ನಿಸಲು ಪ್ರಯತ್ನಿಸಿರುವುದೇ ಈ ಜಗಳಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ತೋರುತ್ತದೆ. ತನಗೆ ಬೇಡವೆಂದರೂ ವರ ಬಾಯಿಗೆ ಸಿಹಿ ತುರುಕಲು ಬಂದಿದ್ದೇ ವಧುವಿನ ಈ ಅವತಾರಕ್ಕೆ ಕಾರಣ. ಮುಂದೆ ನಡೆದದ್ದನ್ನು ಈ ವಿಡಿಯೋದಲ್ಲಿ ನೋಡಿ .


 


ಮಗುವಿನ ರಕ್ಷಣೆಗಾಗಿ ಮೊಸಳೆ ಜೊತೆ ಹೋರಾಡಿದ ತಾಯಿ ಆನೆ..! ರೋಚಕ ವಿಡಿಯೋ...


ಈ ವೀಡಿಯೊವನ್ನು ಟ್ವಿಟರ್ ಪುಟ @gharkekalesh ಹಂಚಿಕೊಂಡಿದೆ. ಈ ವೀಡಿಯೊಗೆ ಸಾಕಷ್ಟು ವ್ಯುವ್ಸ್ ಮತ್ತು ಲೈಕ್ ಗಳು ಕೂಡಾ ಬರುತ್ತಿವೆ. 


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...