Bride Groom Video : ಇತ್ತೀಚಿನ ದಿನಗಲ್ಲಿ ವಧು ಮತ್ತು ವರರು ಮದುವೆಯ ಮುಂಚೆಯೇ ಪ್ರಿ-ವೆಡ್ಡಿಂಗ್ ಶೂಟ್ ಮಾಡುವ ಖಯಾಲಿ ಶುರುವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇಂದು ಕೂಡ ಅಂತಹ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ. 


COMMERCIAL BREAK
SCROLL TO CONTINUE READING

ವಿಡಿಯೋದಲ್ಲಿ ಹುಡುಗ-ಹುಡುಗಿ ಪ್ರೀ ವೆಡ್ಡಿಂಗ್ ಶೂಟ್ ಗೆ ಬಂದಿದ್ದಾರೆ. ವರ ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿ ನಿಂತರೆ, ವದು ಆ ಕಾಲು ಹಿಡಿದು ಡಾನ್ಸ್ ಮಾಡಿದ್ದಾಳೆ.


ಇದನ್ನೂ ಓದಿ : Viral Video : ಬೈಕ್ ಚಕ್ರದಲ್ಲಿ ಸಿಲುಕಿ ಪರದಾಡಿದ ಕೋತಿ : Video ನೋಡಿ


ವಧು - ವರನ ಫೋಟೋ ಶೂಟ್ ಸ್ಟಂಟ್


ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ದೇವಸ್ಥಾನದಲ್ಲಿ ವಧು-ವರರು ಕ್ಯಾಮರಾ ಮುಂದೆ ಪೋಸ್ ಕೊಡುತ್ತಿರವುದನ್ನ ನೀವು ನೋಡಬಹುದು. ವರನು ತಲೆಯ ಕೆಳಗೆ ಮಾಡಿ ಕಾಲು ಮೇಲೆ ಮಾಡಿ ಪೋಸ್ ನೀಡಿದರೆ, ವಧು ಅವನ ಕಾಲು ಹಿಡಿದು ಡಾನ್ಸ್ ಮಾಡುತ್ತಾಳೆ. ಈ ಗ್ರ್ಯಾಂಡ್ ಫೋಟೋಶೂಟ್‌ನಲ್ಲಿ ಅವರಿಬ್ಬರಂತೆ ಸಂಬಂಧಿಕರು ಕೂಡ ಚೆನ್ನಾಗಿ ಡಾನ್ಸ್ ಮಾಡಿದ್ದಾರೆ. ಒಟ್ಟಿನಲ್ಲಿ ಇಬ್ಬರ ಈ ವಿಡಿಯೋ ಜನರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ. 


ವಧು - ವರನ ವಿಡಿಯೋವನ್ನು ಇಲ್ಲಿ ನೋಡಿ


ಇಬ್ಬರೂ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಕಾಣಿಸಿಕೊಂಡಿರುವುದನ್ನು ಕಾಣಬಹುದು. ಇದನ್ನು @HasnaZarooriHai ಎಂಬುವವರು ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನೋಡುಗರು ಕಾಮೆಂಟ್ ಗಳಸೂರಿ ಮಳೆ ಸುರಿಸಿದ್ದಾರೆ. ಕೆಲವು ಸೆಕೆಂಡುಗಳ ಈ ವಿಡಿಯೋ ಇದುವರೆಗೆ 5 ಲಕ್ಷ, 84 ಸಾವಿರ ಜನರು ನೋಡಿದ್ದಾರೆ.


Viral Video : ಇಳಿವಯಸ್ಸಲ್ಲೂ ಭರ್ಜರಿ ಸ್ಟೆಪ್ಸ್‌ ಹಾಕಿದ ಅಜ್ಜಿ, ಏನ್‌ ಎನರ್ಜಿ ಗುರು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.