bride smokes cigarette: ಇಂಟರ್‌ನೆಟ್‌ ಜಮಾನದಲ್ಲಿ ವಾವ್‌ ಎನಿಸುವಂತಹ ವಿಡಿಯೋಗಳಿಗೆ ಯಾವುದೇ ಕೊರತೆ ಇಲ್ಲ.. ಇತ್ತೀಚೆಗಷ್ಟೇ ವಧು ರೀಲು ಸಲುವಾಗಿ ಸಿಗರೇಟ್ ಸೇದುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾಳೆ.. ಸ್ಟೈಲ್ ಆಗಿ ಸಿಗರೇಟ್ ಸೇದುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ ಮದುವೆ ಸೀರೆಯಲ್ಲಿ ಹಿಂದಿ ಹಾಡಿಗೆ ರೀಲ್ ಮಾಡಿ ಧೂಮಪಾನ ಮಾಡಿದ್ದಾರೆ. ಆಕೆ ನಗುತ್ತಲೇ ಸಿಗರೇಟ್ ಸೇದುವ ರೀತಿ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.



ಇದನ್ನೂ ಓದಿ-ಒಂದು ಸಂಚಿಕೆಗೆ 1 ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈಕೆಗೆʼ ಇಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಅನ್ನ ತಿನ್ನುವ ಪರಿಸ್ಥತಿ..!


ಭಾರತದಲ್ಲಿ ಸಾಮಾನ್ಯವಾಗಿ ಹುಡುಗಿಯರು ಸಿಗರೇಟ್ ನಿಂದ ದೂರವಿರುತ್ತಾರೆ. ಬಹುತೇಕ ಧೂಮಪಾನ ಮತ್ತು ಮದ್ಯಪಾನ ಮಾಡುವುದೇ ಇಲ್ಲ.. ಅದರಲ್ಲೂ ಅತ್ಯಂತ ಮಂಗಳಕರ ವಿವಾಹ ಸಮಾರಂಭದಲ್ಲಿ, ಯಾವುದೇ  ಭಾರತೀಯ ಮಹಿಳೆ ತುಂಬಾ ಸಾಂಪ್ರದಾಯಿಕ ಮತ್ತು ಕ್ರಮಬದ್ಧವಾಗಿ ಇರುತ್ತಾಳೆ.. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ವಧು ಧೂಮಪಾನ ಮಾಡಿದ್ದಕ್ಕೆ ಎಲ್ಲರಿಂದಲೂ ಟೀಕೆ ವ್ಯಕ್ತವಾಗುತ್ತಿದೆ.


ಈ ವೀಡಿಯೊವನ್ನು ಇನ್‌ಸ್ಟಾ ಖಾತೆಯಲ್ಲಿ 'ಸೀಮಾ ಮೀನಾ (@seemameena2835)' ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ 4000 ವೀವ್ಸ್‌ ಮತ್ತು ನೂರಾರು ಲೈಕ್‌ಗಳನ್ನು ಪಡೆದುಕೊಂಡಿದೆ.. ವಧು ತನ್ನ ಅತ್ತೆಯ ಮನೆಯಲ್ಲಿ ಸಿಗರೇಟ್ ಸೇದಿದ್ದು, ಕೊಠಡಿಯೊಂದರಲ್ಲಿ ಬಾಗಿಲು ಹಾಕಿಕೊಂಡು ಈ ಕೆಟ್ಟ ಕೆಲಸ ಮಾಡಿದ್ದಾಳೆ. ಪತಿ ಬಾಗಿಲು ಬಡಿದಾಗ, ಅವಳು ತಕ್ಷಣ ಸಿಗರೇಟನ್ನು ಪಕ್ಕಕ್ಕೆ ಇರಿಸಿ ಬಾಗಿಲು ತೆರೆಯಲು ಓಡಿದ್ದಾಳೆ.. ಈ ವಿಡಿಯೋವನ್ನು ಶೇರ್ ಮಾಡಿ ಏನು ಪ್ರಯೋಜನ ಎಂದು ಹಲವು ನೆಟಿಜನ್‌ಗಳು ಆಕೆಗೆ ಛೀಮಾರಿ ಹಾಕುತ್ತಿದ್ದಾರೆ.


ಇನ್ನು ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಮತ್ತು ವೀಕ್ಷಣೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ ಎಂದು ನೆಟ್ಟಿಗರು ಕೋಪಗೊಂಡು ಕಾಮೆಂಟ್‌ ಮಾಡುತ್ತಿದ್ದಾರೆ.. 


ಇದನ್ನೂ ಓದಿ-ಸ್ಟಾರ್‌ ನಟರಿಗಿಂತ ಹೆಚ್ಚು ಆಸ್ತಿ ಗಳಿಸಿರುವ ʻಇವರುʼ ಖ್ಯಾತ ಹಾಸ್ಯನಟನ ಮಗ..!ಯಾರು ಗೊತ್ತಾ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.