ಮದುವೆಯ ದಿನದಂದು ಮೇಕ್ಅಪ್‌ ಮಾಡಿಕೊಳ್ಳಲು ವಧು ಕೆಲ ಗಂಟೆಗಳ ಮುಂಚೆಯೇ ಬ್ಯೂಟಿ ಪಾರ್ಲರ್‌ಗೆ ತೆರಳುತ್ತಾರೆ. ಅಲ್ಲಿ ಬ್ಯೂಷಿಶಿಯನ್‌ಗಳು ಮೇಕಪ್‌ ಮಾಡುವಾಗ ಗಂಟೆಗಟ್ಟಲೆ ಕುಳಿತುಕೊಳ್ಳಬೇಕು. ಇದೇ ರೀತಿ ವಧುವೊಬ್ಬಳು ಪಾರ್ಲರ್‌ಗೆ ತೆರಳಿದ್ದು, ಮೇಕಪ್‌ ಮಾಡುತ್ತಿರುವಾಗ ಗಡದ್‌ ಆಗಿ ನಿದ್ದೆ ಮಾಡಿದ್ದಾಳೆ. ಈ ತಮಾಷೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ವಧುವಿಗೆ ಮೇಕಪ್ ಮಾಡುತ್ತಿರುವಾಗಲೇ ಆಕೆ ಚೆನ್ನಾಗಿ ನಿದ್ದೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಬ್ಯೂಟಿಶಿಯನ್‌ ಸನ್ನೆಯ ಮೂಲಕ ʼವಧು ಚೆನ್ನಾಗಿ ನಿದ್ದೆ ಮಾಡುತ್ತಿದ್ದಾಳೆʼ ಎಂದು ಹೇಳಿದ್ದಾರೆ.  


ಇದನ್ನು ಓದಿ: Top 5 Bollywood Star Fees : ಬಾಲಿವುಡ್ ಈ ಸ್ಟಾರ್ ನಟರು ಪಡೆಯುವ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ! 


ಎಷ್ಟೋ ದಿನಗಳಿಂದ ಮದುಮಗಳು ಸರಿಯಾಗಿ ನಿದ್ದೆ ಮಾಡದೆ ಬ್ಯೂಟಿ ಪಾರ್ಲರ್‌ನಲ್ಲಿ ರೆಸ್ಟ್ ಮಾಡಿದ್ದಾಳೆ. ಇನ್ನು ಮೇಕಪ್ ಮಾಡುತ್ತಿದ್ದಾಗ ನಿದ್ದೆಗೆ ಜಾರಿದ ವಧುವಿನ ವಿಡಿಯೋವನ್ನು ಪಕ್ಕದಲ್ಲೇ ಇದ್ದ ಮಹಿಳೆಯೊಬ್ಬರು ತನ್ನ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. 


ವಧು ಬ್ಯೂಟಿ ಪಾರ್ಲರ್‌ಗೆ ಹೋದಾಗ ತುಂಬಾ ಸುಸ್ತಾಗಿದ್ದಳು ಎನಿಸುತ್ತದೆ. ಮದುವೆಯ ಸಂದರ್ಭದಲ್ಲಿ ನಡೆಯವ ಗದ್ದಲಗಳನ್ನು ಎಲ್ಲಾ ತೊರೆದು ಸಮಾಧಾನವಾಗಿ ಪಾರ್ಲರ್‌ನಲ್ಲಿ ವಧು ಮಲಗಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ. 


ಇದನ್ನು ಓದಿ: Arecanut Price Today: ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ..?


ತೀಶಾ ಮೇಕ್ಓವರ್ಸ್ ಹೆಸರಿನ ಖಾತೆಯಲ್ಲಿ ಈ ವೀಡಿಯೊ ಶೇರ್‌ಆಗಿದೆ. ಈ ವೀಡಿಯೋವನ್ನು ಹಂಚಿಕೊಂಡ ಅವರು, 'ನಾನು ಮದುಮಗಳಿಗೆ ಮೇಕ್ಅಪ್ ಮಾಡುವಾಗ ಹೀಗೆಯೇ ಅವರು ವಿಶ್ರಾಂತಿ ಪಡೆಯುತ್ತಾರೆ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.