Cat Snake fighting Video : ತಾಯಿಯೇ ಹಾಗೆ, ಅದು ಮನುಷ್ಯರಾಗಲಿ ಪ್ರಾಣಿಯಾಗಲೀ ಪಕ್ಷಿಯಾಗಲಿ. ತನ್ನ ಮಕ್ಕಳಿಗೆ ಆಪತ್ತು ಎದುರಾಗುತ್ತದೆ ಎಂದು ಗೊತ್ತಾದಾಗ ಬೆಟ್ಟದಂತೆ ಅಡ್ಡ ಬಂದು ಬಿಡುತ್ತಾಳೆ. ತಾಯಿಯನ್ನು ದಾಟಿಯೇ ಆ ಆಪತ್ತು ಮರಿಗಳತ್ತ ಹೋಗಬೇಕು. ಆದರೆ ಆ ಅಪಾಯವನ್ನು ಅಲ್ಲಿಂದಲೇ ದೂರ ಸರಿಸುವ ಸಲುವಾಗಿ ತಾಯಿ ಆಕಾಶ ಭೂಮಿ ಒಂದು ಮಾಡಿ ಬಿಡುತ್ತಾಳೆ. 


COMMERCIAL BREAK
SCROLL TO CONTINUE READING

ಅದೆಷ್ಟೇ ಶಾಂತ ಪ್ರಾಣಿ-ಪಕ್ಷಿ ಆಗಲಿ ಒಂದು ಬಾರಿ ಅದರ ಮರಿಗಳ ತಂಟೆಗೆ ಹೋಗಿ ನೋಡಿ, ಆ ಶಾಂತ ಸ್ವರೂಪಿ  ಉಗ್ರ ರೂಪ ತಾಳಿ ಬಿಡುತ್ತದೆ. ಅಂಥದ್ದೇ ವಿದಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಇಲ್ಲಿ ಬೆಕ್ಕು ತನ್ನ ಮರಿಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ಇದಕ್ಕಾಗಿ ದೈತ್ಯ ಹೆಬ್ಬಾವನ್ನೇ ಎದುರು ಹಾಕಿಕೊಂಡಿದೆ. 


ಇದನ್ನೂ ಓದಿ : Monkey Funny Video: ಮಂಗನ ಕೈಗೆ ಮೊಬೈಲ್‌ ಸಿಕ್ರೆ ಏನಾಗುತ್ತೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ!


ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತಾಯಿ ಬೆಕ್ಕು ತನ್ನ  ಮರಿಗಳೊಂದಿಗೆ ಕಲ ಕಳೆಯುತ್ತಿರುವುದನ್ನು ಗಮನಿಸಬಹುದು. ಆಗ ಅಲ್ಲಿಗೆ ಹೆಬ್ಬಾವೊಂದು ಬರುತ್ತದೆ. ಮರಿಗಳನ್ನು ಸುಲಭವಾಗಿ ಹೊಟ್ಟೆಗೆ ಇಳಿಸಿಕೊಳ್ಳಬಹುದು ಎನ್ನುವ ಇರಾದೆ ಆ ಹಾವಿನದ್ದು. ಆದರೆ ತಾಯಿ ಬೆಕ್ಕು ಬಿಡಬೇಕಲ್ಲ. ಅದೆಷ್ಟು ವೇಗವಾಗಿ ಹೆಬ್ಬಾವಿನ ಮೇಲೆ ದಾಳಿಯಿಟ್ಟು ಬಿಡುತ್ತದೆ ಎಂದರೆ ಊಹಿಸುವುದು ಕೂಡಾ ಕಷ್ಟ. 


ಇಲ್ಲಿದೆ ಹಾವು ಬೆಕ್ಕಿನ ಕಾದಾಟದ ವಿಡಿಯೋ : 


 


Viral Video: 31 ಮೊಟ್ಟೆಗಳ ಆಮ್ಲೆಟ್, ತಿಂದು 1 ಲಕ್ಷ ಬಹುಮಾನ ತೆಗೆದುಕೊಂಡು ಮನೆಗೆ ಹೋಗಿ, ವೈರಲ್ ಆಗುತ್ತಿದೆ ಚಾಲೆಂಜ್!


ತಾಯಿ ಬೆಕ್ಕು ಹಾವಿನ ಜೊತೆ ಕಾದಾಟಕ್ಕೆ ನಿಂತ ತಕ್ಷಣ ಮರಿ ಬೆಕ್ಕುಗಳು ಅಲ್ಲಿಂದ ಜಾಗ ಖಾಲಿ ಮಾಡಿ ಬಿಡುತ್ತವೆ. ತಾಯಿಯ ದಾಳಿಯಿಂದ ಗಾಯಗೊಂಡ ಹಾವು ಕೂಡಾ ಬಂದ ದಾರಿಗೆ ಸುಂಕ ಇಲ್ಲ ಎಂದು ಅಲ್ಲಿಂದ ಹೊರತು ಬಿಡುತ್ತದೆ.   


ಈ ವಿಡಿಯೋವನ್ನು Massimo @Rainmaker1973 ಎನ್ನುವ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ವೀಕ್ಷಿಸಿದವರು ತಾಯಿ ಬೆಕ್ಕಿನ ಧೈರ್ಯವನ್ನು ಕೊಂಡಾಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T


Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.