flying Snake Video: ಸಾಮಾನ್ಯವಾಗಿ ನಾವು ಹಾವುಗಳ ಚಲನೆಯನ್ನು ನೋಡಿರುತ್ತೀವಿ, ಎಲ್ಲಾ ಹಾವುಗಳು ನೆಲದ ಮೇಲೆ ತೆವಳುತ್ತಾ, ಅಷ್ಟೆ ಏಕೆ ನೀರಿನಲ್ಲಿ ಈಜುತ್ತಿರುವ ದೃಶ್ಯವನ್ನು ಕೂಡ ನೀವು ನೋಡಿರಬಹುದು ಆದರೆ ಇಲ್ಲೊಂದು ಹಾವು ಹಾರುತ್ತಾ ಹೋಗಿದೆ. ಈ ರೀತಿಯ ಹಾವು ಕಂಡು ಆ ಪ್ರಾಂತ್ಯದ ಜನ ಬೆಚ್ಚಿಬಿದ್ದಿದ್ದಾರೆ.


COMMERCIAL BREAK
SCROLL TO CONTINUE READING

ಹಾವುಗಳು ವೇಗವಾಗಿ ಸಾಗುವ ಕೀಟಗಳಲ್ಲಿ ಒಂದು, ಕೆಲವು ಹಾವುಗಳು ಮರಗಳನ್ನು ಮತ್ತು ಎತ್ತರದ ಗೋಡೆಗಳನ್ನು ಸಹ ಸುಲಭವಾಗಿ ಏರುತ್ತವೆ. ಆದರೆ, ಕೆಲವು ಹಾವುಗಳು ಗಾಳಿಯಲ್ಲಿ ಹಾರಾಡುವುದನ್ನು ನಾವು ಆಗಾಗ ಸುದ್ದಿಯಲ್ಲಿ ಕೇಳುತ್ತೇವೆ. ಅಂತಹ ಹಾರುವ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


ಹಾವು ಹಾರುತ್ತಿರುವ ವಿಡಿಯೋ ನೋಡಿದ ಜನರು ಭಯಭೀತರಾಗಿ ಓಡುತ್ತಿದ್ದಾರೆ. ಈ ಆಘಾತಕಾರಿ ವಿಡಿಯೋ ಪಂಜಾಬ್‌ನದ್ದು ಎಂದು ತಿಳಿದುಬಂದಿದೆ. ಪಂಜಾಬ್‌ನ ಜಲಾಲಾಬಾದ್ ಜಿಲ್ಲೆಯ ಸಲೂನ್‌ನ ಹೊರಗೆ ಕುಳಿತಿದ್ದ ಸ್ನೇಹಿತರ ಗುಂಪೊಂದು ಹರಟೆ ಹೊಡೆಯುತ್ತಾ ಕುಳಿತಿದ್ದರು. ಇದಕ್ಕಿದ್ದಂತೆ ಹಾವೊಂದು ಅವರ ತಲೆಯ ಮೇಲೆ ಹಾರಿ ಹೋಯಿತು. ಅನಿರೀಕ್ಷಿತ ಘಟನೆಯಿಂದ ಅಲ್ಲಿದ್ದವರೆಲ್ಲ ಬೆಚ್ಚಿಬಿದ್ದರು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


ಜಲಾಲಾಬಾದ್ ಜಿಲ್ಲೆಯ ಬಗ್ಗೇ ಮೋಡ್ ಬಳಿ ಇರುವ ಬ್ರೋಸ್ ಹೇರ್ ಸಲೂನ್‌ ಎಂಬಲ್ಲಿ ಈ ಘಟನೆ ನಡೆದಿದೆ. ಜೂನ್ 1 ರಂದು ಚುನಾವಣೆ ಇರುವುದರಿಂದ ಅಂಗಡಿಯಲ್ಲಿ ಹೆಚ್ಚಿನ ಕೆಲಸ ಇಲ್ಲದ ಕಾರಣ ಸಲೂನ್ ಮಾಲೀಕ ಚರಣ್‌ಪ್ರೀತ್ ಸಿಂಗ್ ಮತ್ತು ಸಲೂನ್‌ನ ಇತರ ಇಬ್ಬರು ಉದ್ಯೋಗಿಗಳು ಅಂಗಡಿಯ ಹೊರಗೆ ಕುಳಿತು ಏನೋ ಮಾತನಾಡುತ್ತಿದ್ದಾರೆ. ಏತನ್ಮಧ್ಯೆ, ಅವರು ತಮ್ಮ ಮೇಲೆ ಹಾರುತ್ತಿರುವ ಉದ್ದನೆಯ ಆಕಾರವನ್ನು ಗಮನಿಸಿದರು.  ತಲೆ ಮೇಲೆತ್ತಿ ನೋಡಿದರೆ, ಹಾವು ಹಾರುತ್ತಾ ಹೋಗುತ್ತಿರುವ ದೃಶ್ಯ ಕಂಡುಬಂತು.


ಇದನ್ನೂ ಓದಿ: ಕಾಮನ ಬಿಲ್ಲನ್ನು ಹೋಲುವಂತಿದೆ ಈ ಹಾವು! ಸ್ವರ್ಗದಿಂದ ಧರೆಗಿಳಿದಂತಿದೆ ಧೈತ್ಯ ಹೆಬ್ಬಾವು


ಹಾರುತ್ತಾ ಹೋದ ಹಾವನ್ನು ಕಂಡ ಯುವಕರು ಬೆಚ್ಚಿಬಿದ್ದಿದ್ದು ಪ್ರಾಣ ಉಳಿಸಿಕೊಳ್ಳಲು ಚೆಲ್ಲಾ ಪಿಲ್ಲಿಯಾಗಿ ಓಡಲು ಶುರುಮಾಡಿದ್ದರು, ಅತ್ತ ಹಾರುತ್ತಾ ಹೊರಟ ಹಾವು ಸಲೂನ್‌ನ ಕಿಟಕಿ ಗಾಜಿಗೆ ತಾಗಿ ಕೆಳಬಿತ್ತು ಎಂದಿದ್ದಾರೆ ಸ್ಥಳದಲ್ಲಿ ದೃಶ್ಯಕ್ಕೆ ಸಾಕ್ಷಿಯಾದ ಯುವಕರು. ಎಲ್ಲರೂ ಕಷ್ಟಪಟ್ಟು ಪ್ರಾಣ ಉಳಿಸಿಕೊಂಡು ಹೇಗೋ ಹಾವಿನಿಂದ ಪಾರಾಗಿ ತಮ್ಮ ತಮ್ಮ ಮನೆಗಳಿಗೆ ಮರಳಿದ್ದೇವೆ ಎಂದು ಸಲೂನ್ ಮಾಲೀಕರು ತಿಳಿಸಿದ್ದಾರೆ. ಈ ದೃಶ್ಯಗಳು ಸಲೂನ್‌ನ ಹೊರಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.