Kishan Bilagali And Chaitra Achar Dance: ಕಿರುತೆರೆಯ ಹಲವಾರು ಡ್ಯಾನ್ಸ್‌ ಶೋ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ಕಿಶನ್ ಬಿಳಗಲಿ ಹಾಗೂ ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಆಚಾರ್ ಇಬ್ಬರ ಸಖತ್ ಸೂಪರ್ ಆಗಿರುವ ಡ್ಯಾನ್ಸ್ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಈ ಜೋಡಿ ಅನಿಮಲ್‌ ಸಿನಿಮಾದ ಪೆಹೆಲೆ ಬಿ ಮೇ ತುಮ್ಸೆ ಮಿಲಾ ಹು ಸಾಂಗ್‌ಗೆ ಬೋಲ್ಡ್‌ ಮೂಸ್‌ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದರಲ್ಲಿ ಚೈತ್ರಾ ಕೆಂಪು ಝರಿಯಂಚಿನ ಬಿಳಿ ಬಣ್ಣದ ಸೀರೆಯನ್ನು ಧೋತಿ ಸ್ಟೈಲ್‌ನಲ್ಲಿ ಉಟ್ಟಿಕೊಂಡಿದ್ದರು. ಹಾಗೆ ಆಕರ್ಷಕವಾದ ಬ್ಲೌಸ್ ಧರಿಸಿದ್ದರು. ಈ ನಟಿ ಫ್ರೀಯಾಗಿ ಕೂದಲನ್ನು ಬಿಟ್ಟಿಕೊಂಡು ಹಣೆಗೆ ಕೆಂಪು ಬಣ್ಣದ ಬಿಂದಿಯನ್ನು  ಇಟ್ಟುಕೊಂಡಿದ್ದರು. ಇದರಲ್ಲಿ ಚೈತ್ರಾ ಬಹಳ ಕ್ಲಾಸಿಕ್ ಸುಂದರಿಯಾಗಿ ಕಾಣಿಸಿದ್ದಾರೆ. ಇನ್ನೂ ಕಿಶನ್‌ ಬ್ಲ್ಯಾಕ್ ಪ್ಯಾಂಟ್ ಹಾಗೂ ವೈಟ್ ಶರ್ಟ್ ಹಾಕಿಕೊಂಡಿದ್ದರು. 


ಇದನ್ನೂ ಓದಿ: "ಆಹಾ.. ಆ ಮೂಗು, ತುಟಿ, ಕಣ್ಣು..." ಮೃಣಾಲ್ ಠಾಕೂರ್ ಅಂದ ವರ್ಣಿಸಿದ ವಿಜಯ್ ದೇವರಕೊಂಡ!! ರಶ್ಮಿಕಾ ಏನಂತಾರೆ?



ಡ್ಯಾನ್ಸರ್‌ ಕಿಶನ್‌ ಆಗಾಗ ನಟಿಯರ ಜೊತೆ ಡ್ಯಾನ್ಸ್‌ ಮಾಡಿದ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದು, ಇದೀಗ ಈತ ಕನ್ನಡ ನಟಿ ಚೈತ್ರಾ ಜೆ ಆಚಾರ್‌ ಜೊತೆಗೆ ಮಾಡಿರುವ ಡ್ಯಾನ್ಸ್ ವಿಡಿಯೋವನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರ ಸಖತ್ ಬೋಲ್ಡ್ ವಿಶೇಷ ಡ್ಯಾನ್ಸ್‌ ವಿಡಿಯೋಗೆ ಎಂಬ್ಬತ್ತೊಂದು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಹಾಗೂ ಕಮೆಂಟ್‌ಗಳ ಮಳೆ ಸುರಿದಿದೆ. 


ಕಿಶನ್-ಚೈತ್ರಾ ಡ್ಯಾನ್ಸ್‌ ನೋಡಿದ ನೆಟ್ಟಿಗರು ನೀವು ಒರಿಜಿನಲ್​ಗಿಂತ ಚೆನ್ನಾಗಿ ಮಾಡಿದ್ದೀರಿ ಎಂದು ಹೊಗಳಿದ್ದಾರೆ. ಇಬ್ಬರೂ ತುಂಬಾ ರೊಮ್ಯಾಂಟಿಕ್ ಆಗಿ ಕಾಣಿಸಿದ್ದು ಡ್ಯಾನ್ಸ್ ಮೂವ್ಸ್​​ಗಳು ಕೂಡಾ ಆಕರ್ಷಕವಾಗಿದ್ದವು ಎಂದು ಮತ್ತೊಬ್ಬರು ಕಾಮೆಂಟ್‌ ಹಾಕಿದ್ದಾರೆ. ಇನ್ನೊಬ್ಬರು ಇಬ್ಬರ ಪರ್ಫಾಮೆನ್ಸ್ ಚೆನ್ನಾಗಿದೆ ಎಂದಿದ್ದಾರೆ ಎಂದಿದ್ದಾರೆ. ಹಾಗೆಯೇ ಕಮೆಂಟಿಗರು ಟ್ರೆಡಿಷನಲ್ ಹಾಗೂ ಮಾಡರ್ನ್ ಆಗಿರುವ ಚೈತ್ರಾ ಅವರ ಡ್ರೆಸ್ಸಿಂಗ್ ಆಕರ್ಷಕವಾಗಿದೆ. ಫಾರ್ಮಲ್ ಡ್ರೆಸ್ ಡಿಫರೆಂಟ್ ಆಗಿ ಧರಿಸಿದ್ದು ಚೆನ್ನಾಗಿದೆ ಎಂದು ಬರೆದಿದ್ದಾರೆ.


ಇದನ್ನೂ ಓದಿ: Yuva Rajkumar: ಯುವ ರಾಜಕುಮಾರನಿಗೆ ಪಟ್ಟಾಭಿಷೇಕ: ಬಿರುದುಗಾಗಿ ಸೋಶಿಯಲ್‌ ಮಿಡಿಯಾಲ್ಲಿ ಚರ್ಚೆ!


ಇನ್ನೂ ಕೆಲವರು ಕಿಶನ್‌- ಚೈತ್ರಾ ಡ್ಯಾನ್ಸ್‌ ವಿಡಿಯೋ ನೋಡಿ, ಕಮೆಂಟ್‌ ವಿಭಾಗದಲ್ಲಿ ಈ ತರಾ ಹಿಂಸೆ ಕೊಟ್ರೆ, ಯಾರ್ ಬದಕ್ತಾರ್ ಕಿಶನ್ ಬ್ರೋ ಅಂತ ಹಾಸ್ಯವಾಡಿದ್ದಾರೆ. ಮತ್ತೊಬ್ಬರು ನಟಿ ಚೈತ್ರಾನಾ ಆಲಿಯಾ ಭಟ್‌ಗೆ ಹೋಲಿಸಿದ್ದಾರೆ ಹಾಗೂ ಕಿಶನ್‌ನ ಕ್ರೇಜಿಸ್ಟಾರ್‌ ರವಿಚಂದ್ರನ್‌ಗೆ ಹೋಲಿಕೆ ಮಾಡಿದ್ದಾರೆ. ಇನ್ನೊಬ್ಬರು ಇಬ್ಬರು ಕನ್ನಡದವರಾಗಿ ಇಬ್ಬರಿಗೂ ಡ್ಯಾನ್ಸ್‌ ಮಾಡಲು ಕನ್ನಡ ಹಾಡು ಸಿಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.