Cobra VS Mongoose: ಹಾವು ಮುಂಗುಸಿಯ ನಡುವೆ ಭೀಕರ ಕಾಳಗ, ಗೆದ್ದಿದ್ದು ಯಾರು? ವಿಡಿಯೋ ನೋಡಿ
Who Will Be The Winner: ಪ್ರಾಣಿಗಳ ನಡುವಿನ ಕಾದಾಟದ ಹಲವು ವಿಡಿಯೋಗಳು ಅಂತರ್ಜಾಲದಲ್ಲಿ ನಿತ್ಯ ವೈರಲ್ ಆಗುತ್ತಿರುವುದನ್ನು ನಾವು ನೋಡುತ್ತೇವೆ. ಆದರೆ, ಬಹುತೇಕ ವಿಡಿಯೋಗಳಲ್ಲಿ ಕಾದಾಟ ಏಕಪಕ್ಷೀಯವಾಗಿರುತ್ತದೆ. ಹಾವು-ಮುಂಗುಸಿಯ ವಿಷಯದಲ್ಲಿ ಇದು ಸ್ವಲ್ಪ ಭಿನ್ನವಾಗಿರುತ್ತದೆ. ಇದೇ ಕಾರಣದಿಂದ ಹಾವು ಮುಂಗುಸಿಯ ನಡುವಿನ ಕಾದಾಟದ ವಿಡಿಯೋಗಳಿಗೆ ಭಾರಿ ವೀಕ್ಷಣೆಗಳು ಸಿಗುತ್ತವೆ
Trending Video On Instagram: ಪ್ರಾಣಿಗಳ ನಡುವಿನ ಕಾದಾಟದ ಹಲವು ವಿಡಿಯೋಗಳು ಅಂತರ್ಜಾಲದಲ್ಲಿ ನಿತ್ಯ ವೈರಲ್ ಆಗುತ್ತಿರುವುದನ್ನು ನಾವು ನೋಡುತ್ತೇವೆ. ಆದರೆ, ಬಹುತೇಕ ವಿಡಿಯೋಗಳಲ್ಲಿ ಕಾದಾಟ ಏಕಪಕ್ಷೀಯವಾಗಿರುತ್ತದೆ. ಹಾವು-ಮುಂಗುಸಿಯ ವಿಷಯದಲ್ಲಿ ಇದು ಸ್ವಲ್ಪ ಭಿನ್ನವಾಗಿರುತ್ತದೆ. ಇದೇ ಕಾರಣದಿಂದ ಹಾವು ಮುಂಗುಸಿಯ ನಡುವಿನ ಕಾದಾಟದ ವಿಡಿಯೋಗಳಿಗೆ ಭಾರಿ ವೀಕ್ಷಣೆಗಳು ಸಿಗುತ್ತವೆ. ಏಕೆಂದರೆ ಈ ಹೋರಾಟದಲ್ಲಿ ಕೊನೆಯ ಕ್ಷಣದವರೆಗೆ ಯಾರು ಗೆಲ್ಲುತ್ತಾರೆ ಎಂಬ ಸಸ್ಪೆನ್ಸ್ ಇರುತ್ತದೆ. ಇವೆರಡೂ ಪ್ರಾಣಿಗಳು ಪರಸ್ಪರರ ಗುರಿ ತಪ್ಪಿಸಿ ದಾಳಿ ಇಡುತ್ತವೆ. ಇತ್ತೀಚಿನ ದಿನಗಳಲ್ಲಿ ಕೋಬ್ರಾ-ಮುಂಗುಸಿಯ ಫೈಟ್ ವೊಂದು ಭಾರಿ ವೈರಲ್ ಆಗುತ್ತಿದೆ.
ಕೋಬ್ರಾ ಹಾಗೂ ಮುಂಗುಸಿಯ ನಡುವೆ ಫೈಟ್
ಈ ವಿಡಿಯೋದಲ್ಲಿ ಮುಂಗುಸಿಯ ಪ್ರಾಣ ತೆಗೆಯಲು ಅದರ ಮೇಲೆ ದಾಳಿ ಮಾಡುವ ಕಾಳಿಂಗ ಸರ್ಪದ ಗುರಿಯಿಂದ ತಪ್ಪಿಸಿಕೊಳ್ಳುವ ಮುಂಗುಸಿ ಹಾವಿನ ಕುತ್ತಿಗೆಗೆ ವಿಪರೀತ ದಾಳಿ ನಡೆಸುತ್ತದೆ. ಈ ಕಾದಾಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕೊನೆಯವರೆಗೂ ಯಾರೂ ಹೇಳಲು ಸಾಧ್ಯವಿಲ್ಲ. ಈ ವೈರಲ್ ವಿಡಿಯೋವನ್ನು ನೀವೂ ಮೊದಲು ನೋಡಿ.
ಇದನ್ನೂ ಓದಿ-Viral Video : ಮದುವೆ ಮಂಟಪದಲ್ಲಿ ವರನನ್ನು ಕಂಡ ಕೂಡಲೇ ಗಳ ಗಳನೆ ಅತ್ತ ವಧು
ಪರಸ್ಪರ ಕಾದಾಡಿ ಎರಡು ನೆಲಕ್ಕುರುಳುತ್ತವೆ
ಈ ಕಾದಾಟದಲ್ಲಿ ಯಾರೂ ಕೂಡ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ. ಕಿಂಗ್ ಕೋಬ್ರಾ, ಮುಂಗುಸಿಯನ್ನು ಹಲವು ಬಾರಿ ಹೆಡೆ ಎತ್ತಿ ಹೊಡೆಯುವುದನ್ನು ನೀವು ಗಮನಿಸಬಹುದು. ಆದರೆ, ಮುಯ್ಯಿಗೆ ಮುಯ್ಯಿ ಎಂಬಂತೆ ಮುಂಗುಸಿಯು ಕೂಡ ಹಿಂಜರಿಯುತ್ತಿಲ್ಲ. ಹಾವು ಎಷ್ಟು ವೇಗದಲ್ಲಿ ದಾಳಿ ನಡೆಸುತ್ತಿದೆಯೋ, ಅದೇ ವೇಗದಲ್ಲಿ ಮುಂಗುಸಿ ಕೂಡ ದಾಳಿ ನಡೆಸುತ್ತಿದೆ. ಈ ವಿಡಿಯೋ ಕೊನೆಯಲ್ಲಿ ಹಾವೂ ಮತ್ತು ಮುಂಗುಸಿ ಎರಡೂ ಕೂಡ ಸಾವಿಗೆ ಶರಣಾಗುವುದನ್ನು ನೀವು ನೋಡಬಹುದು.
ಇದನ್ನೂ ಓದಿ-Viral Video : ಸ್ಪೋರ್ಟ್ಸ್ ಬೈಕ್ ಮೇಲೆ ದೈತ್ಯ ಹೆಬ್ಬಾವಿನ ಸವಾರಿ ..!
ವೈರಲ್ ಆದ ವಿಡಿಯೋ
ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಇನ್ಸ್ಟಾಗ್ರಾಮ್ ಮೇಲೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 1 ಲಕ್ಷಕ್ಕೂ ಅಧಿಕ ಬಾರಿಗೆ ಈ ವಿಡಿಯೋ ವೀಕ್ಷಣೆಗೆ ಒಳಗಾಗಿದೆ. ಅಷ್ಟೇ ಅಲ್ಲ ಐದು ಸಾವಿರಕ್ಕೂ ಅಧಿಕ ಜನರು ಈ ಕಾದಾಟಕ್ಕೆ ಲೈಕ್ ಹೇಳಿದ್ದಾರೆ. ಕಾಮೆಂಟ್ ಸೆಕ್ಷನ್ ನಲ್ಲಿಯೂ ಕೂಡ ವಿವಿಧ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.