Viral Video: Cottonmouth ಈ ಹೆಸರು ಬಹುತೇಕ ಯಾರು ಕೇಳಿರಲಿಕ್ಕಿಲ್ಲ. ಕಾಟನ್ ಮೌತ್ ವಿಶ್ವದ ಅತ್ಯಂತ ಭಯನಾಕ ಹಾವಿನ ಜಾತಿಗಳಲ್ಲಿ ಒಂದಾಗಿದೆ. ಇವು ಆಗ್ನೇಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಹಾವುಗಳಾಗಿವೆ. ಬಾಯಿಯ ಒಳಭಾಗದಲ್ಲಿ ಬಿಳಿ ಬಣ್ಣದಿಂದಾಗಿ ಅವುಗಳನ್ನು ಕಾಟನ್ ಮೌತ್ ಎಂದು ಕರೆಯಲಾಗುತ್ತದೆ. ಕಾಟನ್‌ಮೌತ್‌ಗಳು ಬೆದರಿಕೆ ಬಂದಾಗ ಮಾತ್ರ ಬಾಯಿ ತೆರೆಯುತ್ತವೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..


ಕಾಟನ್‌ಮೌತ್‌ಗಳು ಉಭಯ ಜೀವಿಗಳು. ನೆಲದ ಮೇಲೆ ಓಡಬಹುದು ಮತ್ತು ನೀರಿನಲ್ಲಿ ಈಜಬಹುದು. ನೀರಿನಲ್ಲಿ ಹೆಚ್ಚು ಸಮಯ ಕಳೆಯುವ ಏಕೈಕ ವಿಷಕಾರಿ ಹಾವು ಇದಾಗಿದೆ. ಕಾಟನ್‌ಮೌತ್‌ಗಳು ಅನೇಕ ಸ್ಥಳೀಯ ಹೆಸರುಗಳನ್ನು ಹೊಂದಿವೆ. ಕಪ್ಪು ಮೊಕಾಸಿನ್‌ಗಳು, ಗ್ಯಾಪರ್‌ಗಳು, ಮ್ಯಾಂಗ್ರೋವ್ ರ್ಯಾಟಲ್ಸ್, ಸ್ನ್ಯಾಪ್ ಜಾವ್ಸ್, ಸ್ಟಬ್-ಟೈಲ್ ಹಾವುಗಳು, ವಾಟರ್ ಮಂಬಾಸ್ ಮತ್ತು ವಾಟರ್ ಪೈಲಟ್‌ಗಳು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅವು ಮನುಷ್ಯರನ್ನು ಕಚ್ಚುವುದು ಅಪರೂಪ. ಅವುಗಳಿಗೆ ಕೆರಳಿಸಿದಾಗ ಮಾತ್ರ ಕಚ್ಚುತ್ತವೆ.


Viral Video : ಅಡುಗೆಮನೆಯಲ್ಲಿ ಹೆಬ್ಬಾವುಗಳ ಸರಸ! ವಿಡಿಯೋ ವೈರಲ್‌


ಕಾಟನ್ ಮೌತ್ ಹಾವು ಜೀವಂತ ರಾಟಲ್ ಸ್ನೇಕ್ ಅನ್ನು ಸುಲಭವಾಗಿ ನುಂಗುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯೂಟ್ಯೂಬ್ ಚಾನೆಲ್ 'ojatro' ಕಾಟನ್ ಮೌತ್ ಮತ್ತೊಂದು ಹಾವನ್ನು ನುಂಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದೆ. ವಾಸ್ತವವಾಗಿ ಈ ವಿಡಿಯೋ 2012ರದ್ದು ಆದರೆ ಇದೀಗ ಮತ್ತೆ ವೈರಲ್ ಆಗುತ್ತಿದೆ. ಈ ವಿಡಿಯೋ 42,289,009 ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋವನ್ನು ವೀಕ್ಷಿಸಿದ ಅನೇಕರು ಆಶ್ಚರ್ಯ ಪಡುತ್ತಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.