Viral Video: ಹಸು ತನ್ನ ಯಜಮಾನನ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನಡೆಸಿಕೊಳ್ಳುತ್ತಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಗೋವಿನ ಮಾತೆಯ ಮನಸ್ಸನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಅನೇಕ ಜನರು ತಮ್ಮ ಮನೆಯಲ್ಲಿ ನಾಯಿ, ಬೆಕ್ಕು, ಮೇಕೆ ಮತ್ತು ಹಸುಗಳನ್ನು ಸಾಕುತ್ತಾರೆ. ಜನರು ಈ ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಾರೆ. ಪಶುಗಳು ಕೂಡ ತಮ್ಮ ಮಾಲೀಕರಿಗೆ ಸಮಾನವಾಗಿ ನಿಯತ್ತಾಗಿ ಇರುತ್ತವೆ. ಮನೆಯ ಸದಸಯರು ಖುಷಿಯಾಗಿದ್ದರೆ ಅವರೊಂದಿಗೆ ಕುಚೇಷ್ಟೆ ಮಾಡುತ್ತಾ ಅವು ಕೂಡ ಖುಷಿಯಾಗಿ ಇರುತ್ತವೆ. ಮನೆಯ ಸದಸ್ಯರು ಬೇಸರವಾಗಿದ್ದರು, ಅವರ ನೋವಿಗೆ ಸ್ಪಂದಿಸುತ್ತಾ ಪಶುಗಳು ಕೂಡ ಕಣ್ಣೀರು ಹಾಕುತ್ತವೆ. ಅದರಲ್ಲೂ ಹಸುಗಳಿಗೆ ಇರುವ ನಿಷ್ಠೆಯನ್ನು ಪುಣ್ಯ ಕೋಟಿಯ ಕಥೆಯ ಮೂಲಕ ನೀವು ಕೇಳಿಯೇ ಇರುತ್ತೀರಿ. ಆದರೆ, ಇಲ್ಲಿ ಇಂತಹ ಘಟನೆ ವೈರಲ್ ಆಗಿರುವುದು ತೀರಾ ಅಪರೂಪ.


ನೀವು ಹಿಂದೆಂದೂ ನೋಡಿರದ ಹಾಗೂ ಕೇಳಿರದ ಹಸುವಿನ ವಿಧೇಯತೆಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಣದಲ್ಲಿ ಇದೀಗ ವೈರಲ್‌ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ, ಹಸುವಿನ ಹತ್ತಿರ ಮಗು ಮಲಗಿರುವುದನ್ನು ಕಾಣಬಹುದು. ನೆಲದ ಮೇಲೆ ಮಲಗಿದ್ದ ಮಗು ದಿಢೀರನೆ ಅಳಲು ಆರಂಭಿಸುತ್ತದೆ.  ಅದನ್ನು ನೋಡಿದ ಹಸುವಿಗೆ ಸಹಿಸಲಾಗಲಿಲ್ಲ, ಮಗು ಮಲಗಿದ್ದ ಕಂಬಳಿ ಸಮೇತ ಮಗುವನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತದೆ.  ಅಷ್ಟರಲ್ಲಿ ಮಗುವಿನ ತಾಯಿ ಮಗುವನ್ನು ತನ್ನ ಕಡೆಗೆ ಎಳೆದುಕೊಳ್ಳುತ್ತಾಳೆ. ಆದರೆ, ಮತ್ತೆ ಹಸು ತನ್ನ ಕಡೆಗೆ ಮಗುವನ್ನು ಎಳೆದುಕೊಂಡು, ನಾಲಿಗೆಯಿಂದ ಸವರುತ್ತಾ, ಅಳುತ್ತಿದ್ದ ಮಗುವನ್ನು ಮುದ್ದಿಸುತ್ತದೆ. 


ಸದ್ಯ ಈ ವಿಡಿಯೋ, ಸಿಕ್ಕಾಪಟ್ಟೆ ವೈರಲ್‌ ಅಗುತ್ತಿದ್ದು, ಲೈಫ್ ಈಸ್ ಬ್ಯೂಟಿಫುಲ್ ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊ 13 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 16 ಸೆಕೆಂಡ್‌ಗಳ ಈ ವಿಡಿಯೋಗೆ ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಹಸುವಿನ ಪ್ರೀತಿಯನ್ನು ಕೊಂಡಾಡಿದರೆ, ಇನ್ನೂ ಕೆಲವರು, ಹಸುವಿನಿಂದಲೇ ಮಗುವಿಗೆ ಅಪಾಯವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.