Vulgar Dance Video: Delhi Metro ದಲ್ಲಿ ಹೋಳಿ ಹಬ್ಬದ ರೀಲ್ ತಯಾರಿಸುತ್ತ ಅಶ್ಲೀಲ ನೃತ್ಯ ಪ್ರದರ್ಶಿಸಿದ ಯುವತಿಯರು, ಮುಂದೇನಾಯ್ತು ಗೊತ್ತಾ!
Delhi Metro Vulgar Dance Viral Video: ದೆಹಲಿ ಮೆಟ್ರೊನಲ್ಲಿ ನಡೆದ ಹೊಚ್ಚ ಹೊಸ ಘಟನೆಯೊಂದರಲ್ಲಿ ಇಬ್ಬರು ಯುವತಿಯರು ಅಶ್ಲೀಲವಾಗಿ ಹೋಳಿ ಹಬ್ಬದ ವಿಡಿಯೋ ತಯಾಯಿರುತ್ತಿರುವುದು ಕಂಡುಬಂದಿದೆ. (Viral News In Kannada)
Delhi Metro Viral Dance: ದೆಹಲಿ ಮೆಟ್ರೊ ಇದೀಗ ಮತ್ತೊಮ್ಮೆ ಅನಗತ್ಯ ಕಾರಣಕ್ಕಾಗಿ ಸುದ್ದಿಯಲ್ಲಿದೆ, ದೆಹಲಿ ಮೆಟ್ರೋ ಮತ್ತೊಮ್ಮೆ ಆಧುನಿಕ ಫಿಶ್ ಮಾರ್ಕೆಟ್ ಆಗಿ ಮಾರ್ಪಟ್ಟಿದೆಯೇ ಎಂಬ ಪ್ರಶ್ನೆಗಳು ಕೇಳಿಬರಲಾರಂಭಿಸಿವೆ. ಇದಕ್ಕೆ ಪುಷ್ಟಿ ನೀಡುವ ಇತ್ತೀಚಿನ ಘಟನೆಯ ವೀಡಿಯೊ ಇದೀಗ ಸಕತ್ ವೈರಲ್ ಆಗುತ್ತಿದೆ. ಇದರಲ್ಲಿ ಮೆಟ್ರೋದಲ್ಲಿ ಇಬ್ಬರು ಹುಡುಗಿಯರನ್ನು ಅಶ್ಲೀಲ ರೀತಿಯಲ್ಲಿ ಹೋಳಿ ಹಬ್ಬ (Holi 2024 Vulgar Dance Video) ಆಚರಣೆ ಮಾಡುತ್ತಿರುವುದು ಕಂಡುಬಂದಿದೆ. ದೆಹಲಿ ಮೆಟ್ರೋದಲ್ಲಿ ಹುಡುಗಿಯರು ಹೋಳಿ ಆಡುವ ಈ ವಿಡಿಯೋ ಜನರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ-Giorgia Meloni Deepfake Videos: ಪಾರ್ನ್ ನಟಿಯ ಮುಖದ ಮೇಲೆ ಜಾರ್ಜಿಯಾ ಮೇಲೋನಿ ಮುಖ ಅಂಟಿಸಿ ವಿಡಿಯೋ!
ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಇಬ್ಬರು ಹುಡುಗಿಯರು ಮೆಟ್ರೋದ ನೆಲದ ಮೇಲೆ ಕುಳಿತಿರುವುದು ಮತ್ತು ಅವರ ಮುಂದೆ ಬಣ್ಣ ಇರುವುದನ್ನು ನೀವು ನೋಡಬಹುದು. ಅವರಲ್ಲಿ ಓರ್ವ ಹುಡುಗಿ ಬಿಳಿ ಸೂಟ್ ಧರಿಸಿದ್ದಾಳೆ ಮತ್ತು ಇನ್ನೊಬ್ಬಳು ಸೀರೆಯನ್ನು ಧರಿಸಿದ್ದಾಳೆ. ಇಬ್ಬರೂ ಅಸಭ್ಯವಾಗಿ ಪರಸ್ಪರ ಬಣ್ಣ ಬಳಿದುಕೊಳ್ಳುತ್ತಿರುವುದನ್ನು ನೀವು ನೋಡಬಹುದು. 2013 ರ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ರಾಮಲೀಲಾ ಚಿತ್ರದ ಜನಪ್ರಿಯ ಹಾಡು 'ಆಂಗ್ ಲಗಾ ದೇ ರೇ... ವೀಡಿಯೊದ ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ. ಇನ್ನು ವಿಡಿಯೋದಲ್ಲಿ ಈ ಹುಡುಗಿಯರು ಮಲಗಿ ಡ್ಯಾನ್ಸ್ ಮಾಡುವಾಗ ಪರಸ್ಪರ ಹೇಗೆ ಬಣ್ಣ ಹಚ್ಚುತ್ತಾರೆ ಎಂಬುದನ್ನು ನೀವು ನೋಡಬಹುದು. ಮೆಟ್ರೋದಲ್ಲಿ ಕುಳಿತಿರುವ ಎಲ್ಲಾ ಪ್ರಯಾಣಿಕರು ಅವರನ್ನು ನೋಡಿ ತುಂಬಾ ಮುಜುಗರ ಅನುಭವಿಸುತ್ತಿದ್ದಾರೆ ಮತ್ತು ಕೆಲವರು ಅದನ್ನು ಆನಂದಿಸುತ್ತಿದ್ದಾರೆ. (Delhi metro vulgar dance videos latest)
ಸಹಪ್ರಯಾಣಿಕರು ಸಾಕ್ಷಿಯಾಗಿರುವ ಈ ಘಟನೆಯು ಆನ್‌ಲೈನ್ ಬಳಕೆದಾರರ ತೀವ್ರ ತರಾಟೆಗೆ ಗುರಿಯಾಗಿದೆ, ಅವರು ಹುಡುಗಿಯರ ಮಾಡಿರುವುದು ಅನುಚಿತವೆಂದು ಖಂಡಿಸುತ್ತಿದ್ದಾರೆ. ಇದಲ್ಲದೆ, ದೆಹಲಿ ಮೆಟ್ರೋ ಕಾರ್ಪೊರೇಷನ್ ಇಂತಹ ವರ್ತನೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ (Social Media) ವೀಡಿಯೊ ಪೋಸ್ಟ್ ಮಾಡಿದ್ದಾರೆ ಮತ್ತು "ಇದರ ವಿರುದ್ಧ ನಮಗೆ ಸಾಧ್ಯವಾದಷ್ಟು ಬೇಗ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ" ಎಂಬ ಶೀರ್ಷಿಕೆ ಬರೆದಿದ್ದಾರೆ.
ವಿಡಿಯೋ ಕುರಿತು ಕಾಮೆಂಟ್ ಮಾಡಿರುವ ಓರ್ವ ಬಳಕೆದಾರರು, "ಈ ವೀಡಿಯೊವನ್ನು ವೀಕ್ಷಿಸಲು ನನಗೆಯೇ ಮುಜುಗರವಾಗುತ್ತಿದೆ! ಹಿನ್ನೆಲೆಯಲ್ಲಿ ಹಿನ್ನಲೆಯಲ್ಲಿ ಇರುವ ಜನರ ಗತಿ ಎನಾಗಿರಬಹುದು" ಎಂದಿದ್ದಾರೆ. ವೀಡಿಯೋ ಕುರಿತು ಪ್ರತಿಕ್ರಿಯಿಸಿರುವ ಮತ್ತೊರ್ವ ಬಳಕೆದಾರರು, "ಇದಕ್ಕೆ ಯಾವುದೇ ಕಾನೂನು ಅವಶ್ಯಕತೆ ಇಲ್ಲ, 15 ಸೆಕೆಂಡ್ ವಿಡಿಯೋ ಹಂಚಿಕೊಳ್ಳಲು 1 ಲಕ್ಷ ರೂ. ಶುಲ್ಕ ನಿಗದಿಪಡಿಸಿ ಸಾಕು" ಎಂದು ಬರೆದಿದ್ದಾರೆ.
ವೈರಲ್ ಆಗುತಿರುವ ವಿಡಿಯೋ ಇಲ್ಲಿದೆ ನೋಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ