Viral Video: ಶಾಲೆಗೆ ಫುಲ್ ಟೈಟ್ ಆಗಿ ಬಂದ ಪ್ರಿನ್ಸಿಪಾಲ್: ನಶೆ ಏರಿದ ಶಿಕ್ಷಕನನ್ನು ಕಂಡು ಮಕ್ಕಳು ಮಾಡಿದ್ದೇನು? ಈ ವಿಡಿಯೋ ನೋಡಿ
Drunk Teacher Slept In Classroom Viral Video: ಒಡಿಶಾದ ನುವಾಟಿಪಿಲೆಯ ಭುವನ್ ಬ್ಲಾಕ್ʼನ ಧೆಂಕನಲ್ʼನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಕಂಠಪೂರ್ತಿ ಕುಡಿದು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಂದಿದ್ದಾನೆ. ಈ ಬಗ್ಗೆ ತಿಳಿದ ಮಕ್ಕಳು ಆತನ ಮುಖಕ್ಕೆ ನೀರನ್ನು ಎರಚಿ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ.
Drunk Teacher Slept In Classroom Viral Video: ಶಿಕ್ಷಕನೆಂದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಷ್ಟೇ ಅಲ್ಲ, ಸರಿಯಾದ ಮಾರ್ಗದರ್ಶನ ನೀಡಿ ಅವರಿಗೆ ಸರಿ ಯಾವುದು? ತಪ್ಪು ಯಾವುದು? ಎಂಬುದನ್ನು ತಿಳಿಹೇಬೇಕಾದವರು. ಆದರೆ ಅಂತಹ ಶಿಕ್ಷಕರೇ ನಾಚಿಗೇಡಿನ ಕೆಲಸ ಮಾಡಿದರೆ ಏನೆಲ್ಲಾ ಆಗಬಹುದು? ಅಂದಹಾಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ಜಗತ್ತಿಗೇ ಶ್ರೇಷ್ಠ ಕ್ರಿಕೆಟಿಗರಾದ್ರೂ ಫೀಲ್ಡಿಂಗ್ʼನಲ್ಲಿ ಇವರಷ್ಟು ಕಳಪೆ ಮತ್ಯಾರೂ ಇಲ್ಲ!
ಒಡಿಶಾದ ನುವಾಟಿಪಿಲೆಯ ಭುವನ್ ಬ್ಲಾಕ್ʼನ ಧೆಂಕನಲ್ʼನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಕಂಠಪೂರ್ತಿ ಕುಡಿದು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಂದಿದ್ದಾನೆ. ಈ ಬಗ್ಗೆ ತಿಳಿದ ಮಕ್ಕಳು ಆತನ ಮುಖಕ್ಕೆ ನೀರನ್ನು ಎರಚಿ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಾಣುವಂತೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ, ಪಾನಮತ್ತನಾಗಿ ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಪ್ರಜ್ಞಾಹೀನನಾಗಿ ಮಲಗಿದ್ದಾನೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆತನನ್ನು ಎಚ್ಚರಿಸಲೆಂದು ಮುಖಕ್ಕೆ ನೀರು ಚಿಮುಕಿಸುತ್ತಿದ್ದಾರೆ. ಇನ್ನು ಆ ಶಾಲೆಯ ಇತರ ಶಿಕ್ಷಕರು ತರಗತಿಯ ಹೊರಗೆ ನಿಂತಿರುವುದನ್ನ ಸಹ ನೋಡಬಹುದಾಗಿದೆ.
ಇದನ್ನೂ ಓದಿ: ಏಕದಿನ ಮತ್ತು ಟಿ20ಯಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸದ ಟೀಂ ಇಂಡಿಯಾದ ಮೂವರು ಕ್ರಿಕೆಟಿಗರು ಇವರೇ
ಇನ್ನು ಈ ರೀತಿ ಕಂಠಪೂರ್ತಿ ಕುಡಿದು ಪ್ರಜ್ಞೆಯಿಲ್ಲದಂತೆ ಮಲಗಿರುವ ಪ್ರಾಂಶುಪಾಲನ ಹೆಸರು ರವೀಂದ್ರನಾಥ್ ಮುರ್ಮು. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದು,ಆತನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ