Elephant Attack: ಮದುವೆ ಫೋಟೋಶೂಟ್ ವೇಳೆ ಆನೆ ದಾಳಿ, ವಿಡಿಯೋ ವೈರಲ್
Wedding Photoshoot: ಹಲವು ಬಾರಿ ಆನೆಗಳ ದಾಳಿಯ ವಿಡಿಯೋಗಳು ವೈರಲ್ ಆಗುತ್ತವೆ. ರಸ್ತೆಯಲ್ಲಿ ನಡೆಯುತ್ತಿರುವವರ ಮೇಲೆ ಆನೆಗಳು ದಾಳಿ ಮಾಡಿದ್ದನ್ನು ಅಥವಾ ಸಫಾರಿಗೆ ಹೋದವರ ಮೇಲೆ ದಾಳಿಗೆ ಮುಂದಾಗಿದ್ದನ್ನು ನಾವು ಕಾಣಬಹುದು. ಇತ್ತೀಚೆಗೆ ಇಂತಹದ್ದೇ ಒಂದು ವಿಡಿಯೋ ಎಲ್ಲಡೆ ವೈರಲ್ ಆಗಿದೆ.
Wedding Photoshoot: ಹಲವು ಬಾರಿ ಆನೆಗಳ ದಾಳಿಯ ವಿಡಿಯೋಗಳು ವೈರಲ್ ಆಗುತ್ತವೆ. ರಸ್ತೆಯಲ್ಲಿ ನಡೆಯುತ್ತಿರುವವರ ಮೇಲೆ ಆನೆಗಳು ದಾಳಿ ಮಾಡಿದ್ದನ್ನು ಅಥವಾ ಸಫಾರಿಗೆ ಹೋದವರ ಮೇಲೆ ದಾಳಿಗೆ ಮುಂದಾಗಿದ್ದನ್ನು ನಾವು ಕಾಣಬಹುದು. ಇತ್ತೀಚೆಗೆ ಇಂತಹದ್ದೇ ಒಂದು ವಿಡಿಯೋ ಎಲ್ಲಡೆ ವೈರಲ್ ಆಗಿದೆ. ಆನೆಯೊಂದು ಉಗ್ರರೂಪದಲ್ಲಿ ಕಾಣಿಸಿಕೊಂಡಿದೆ. ಇಬ್ಬರ ಮದುವೆಯ ಫೋಟೋಶೂಟ್ ನಡೆಯುತ್ತಿದ್ದಾಗ ಆನೆ ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : Viral Video : ಅಡುಗೆಮನೆಯಲ್ಲಿ ಹೆಬ್ಬಾವುಗಳ ಸರಸ! ವಿಡಿಯೋ ವೈರಲ್
ವಾಸ್ತವವಾಗಿ, ಮದುವೆಯ ಬಳಿಕ ದಂಪತಿಗಳ ವಿಡಿಯೋ ಮಾಡುತ್ತಿರುವಾಗ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೊವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ.ಈ ವಿಡಿಯೋದ ಶೀರ್ಷಿಕೆಯಲ್ಲಿ ಸ್ಪಷ್ಟೀಕರಣವನ್ನು ಸಹ ಪ್ರಸ್ತುತಪಡಿಸಲಾಗಿದೆ. ಈ ಘಟನೆಗೆ ನಾವು ಜವಾಬ್ದಾರರಲ್ಲ. ಆನೆ ದಾಳಿಯ ಬಗ್ಗೆ ನೆಗೆಟಿವ್ ಪ್ರಚಾರ ಮಾಡಿರುವುದು ಗಂಭೀರ ವಿಷಯ ಎಂದು ಇದರಲ್ಲಿ ಬರೆಯಲಾಗಿದೆ. ಈ ಫೋಟೋಶೂಟ್ ಸಮಯದಲ್ಲಿ ಇದು ಅನಿರೀಕ್ಷಿತವಾಗಿ ಸೆರೆಯಾಗಿದೆ ಎಂದು ಹೇಳಲಾಗಿದೆ.
ಫೋಟೋಶೂಟ್ ಗಾಗಿ ನಾವು ಯಾವುದೇ ಪ್ರಾಣಿಯನ್ನು ಬಳಸಿಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ದಯವಿಟ್ಟು ನಕಾರಾತ್ಮಕತೆಯನ್ನು ಹರಡಬೇಡಿ ಎಂದು ವಿಡಿಯೋ ಜೊತೆ ಸ್ಪಷ್ಟೀಕರಣ ನೀಡಿದ್ದಾರೆ. ಪೋಸ್ಟ್‌ನ ಕೊನೆಯಲ್ಲಿ ಧನ್ಯವಾದಗಳನ್ನು ಸಹ ತಿಳಿಸಲಾಗಿದೆ. ವಾಸ್ತವವಾಗಿ ನವ ದಂಪತಿಗಳ ಫೋಟೋಶೂಟ್‌ಗಾಗಿ ದೇವಾಲಯದ ಒಳ ಆವರಣದ ಸ್ಥಳವನ್ನು ಆಯ್ಕೆ ಮಾಡಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಈ ಮಧ್ಯೆ, ಈ ಆನೆ ಕೂಡ ದಂಪತಿಯ ಹಿಂದೆ ನಿಂತಿರುವುದು ಕಂಡುಬರುತ್ತದೆ.
ಇದನ್ನೂ ಓದಿ : Viral Video : ನಿಂತಿದ್ದ ಆಟೋದಲ್ಲಿ ದೆವ್ವದ ಕುಚೇಷ್ಟೆ? ಚಾಲಕನಿಲ್ಲದೇ ಚಲಿಸಿದ ರಿಕ್ಷಾ ಕಂಡು ದಂಗಾದ ಜನ!
ದಂಪತಿಯ ಫೋಟೋಶೂಟ್ ವೇಳೆ ಏಕಾಏಕಿ ಆನೆ ಆಕ್ರಮಣಕಾರಿಯಾಗಿ ಅಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದೆ. ಅಷ್ಟೇ ಅಲ್ಲ, ಆನೆ ಆ ವ್ಯಕ್ತಿಯನ್ನು ಎತ್ತಿ ಎಸೆದಿದ್ದಲ್ಲದೆ, ಬಟ್ಟೆಯನ್ನೂ ಎಳೆದಿದೆ. ಹೇಗೋ ಆ ವ್ಯಕ್ತಿ ಪ್ರಾಣ ಉಳಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಈ ಫೋಟೋಶೂಟ್ ನ ವಿಡಿಯೋದಲ್ಲಿ ಸೆರೆ ಸಿಕ್ಕ ಆನೆ ದಾಳಿಯ ದೃಶ್ಯ ವೈರಲ್ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.