ವಾಹನಗಳ ಮೇಲೆ ಆನೆ ದಾಳಿ: ಬೈಕ್ ಬಿಟ್ಟು ಓಡಿದ ಸವಾರರು ವಿಡಿಯೋ ವೈರಲ್
![ವಾಹನಗಳ ಮೇಲೆ ಆನೆ ದಾಳಿ: ಬೈಕ್ ಬಿಟ್ಟು ಓಡಿದ ಸವಾರರು ವಿಡಿಯೋ ವೈರಲ್ ವಾಹನಗಳ ಮೇಲೆ ಆನೆ ದಾಳಿ: ಬೈಕ್ ಬಿಟ್ಟು ಓಡಿದ ಸವಾರರು ವಿಡಿಯೋ ವೈರಲ್](https://kannada.cdn.zeenews.com/kannada/sites/default/files/styles/zm_500x286/public/2025/01/26/488922-elephant-attack-video.jpg?itok=82RqC1Y5)
Elephant Viral Video: ಲಾರಿಯೊಂದರ ಮೇಲೆ ದಾಳಿ ಮಾಡಿದ ಆನೆಯು ತರಕಾರಿ, ಬೆಲ್ಲವನ್ನು ಕಿತ್ತು ತಿನ್ನಲು ಪ್ರಯತ್ನಿಸಿದೆ. ಆನೆ ದಾಳಿ ವೇಳೆ ಬೈಕ್ ಸವಾರರು ಜಸ್ಟ್ ಮಿಸ್ ಆಗಿ, ಬೈಕ್ ಬಿಟ್ಟು ಓಡಿದ್ದಾರೆ.
Viral Video Today: ಆಹಾರ ಅರಸಿ ರಸ್ತೆಗಿಳಿದ ಕಾಡಾನೆಯೊಂದು ವಾಹನಗಳ ಮೇಲೆ ದಾಳಿಗೆ ಮುಂದಾದ ಘಟನೆ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಬಂಡೀಪುರ- ಮಧುಮಲೈ ರಸ್ತೆ ನಡುವೆ ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ.
ಲಾರಿಯೊಂದರ ಮೇಲೆ ದಾಳಿ ಮಾಡಿದ ಆನೆಯು ತರಕಾರಿ, ಬೆಲ್ಲವನ್ನು ಕಿತ್ತು ತಿನ್ನಲು ಪ್ರಯತ್ನಿಸಿದೆ. ಇನ್ನು, ಈ ವೇಳೆ, ಇಬ್ಬರು ಬೈಕ್ ಸವಾರರು ಆನೆ ಕಂಡು ಬೈಕ್ ಬಿಟ್ಟು ಓಡಿದ್ದು ಆನೆ ದಾಳಿಯಿಂದ ಸವಾರರು ಪಾರಾಗಿದ್ದಾರೆ.
ರಸ್ತೆಯಲ್ಲಿ ಚೆಲ್ಲಿದ್ದ ಅಕ್ಕಿ ತಿನ್ನುತ್ತಾ ನಿಂತ "ಕಾಡಾನೆಗಳು": ಅರ್ಧ ತಾಸು ಟ್ರಾಫಿಕ್ ಜಾಮ್
ತರಕಾರಿ ಸೇರಿ ಆಹಾರದ ಮೇಲಿನ ಆಸೆಗೆ ವಾಹನಗಳ ಮೇಲೆ ಆನೆ ದಾಳಿ ಮಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.
ಇದನ್ನೂ ಓದಿ- ನಡು ರಸ್ತೆಯಲ್ಲಿ ಜೋಡಿ ಕರಡಿಗಳ ಜಾಲಿ ಓಡಾಟ: ಅಪರೂಪದ ದೃಶ್ಯ ಮೊಬೈಲ್ ಫೋನ್‌ನಲ್ಲಿ ಸೆರೆ
ಈ ಕುರಿತು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಮಾತನಾಡಿ, ತರಕಾರಿ ಆಸೆಗೆ ಕಾಡಾನೆಯೊಂದು ರಸ್ತೆಗಿಳಿಯುತ್ತಿದ್ದು ಕಾಡಿಗೆ ಅಟ್ಟಲು ಪ್ರಯತ್ನ ಮಾಡುತ್ತಿದ್ದೇವೆ. ಪಟಾಕಿ ಸಿಡಿಸಿ ಓಡಿಸಲು ಮುಂದಾದರೇ ಬೇರೆ ವಾಹನಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ, ಇಂದು ಕೂಡ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸುತ್ತಿದ್ದೇವೆ, ಆನೆ ಕಾಣಿಸಿಲ್ಲ ಎಂದು ಹೇಳಿದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.