ಗೆಳೆಯನನ್ನು ರಕ್ಷಿಸಲು ದೈತ್ಯ ಹೆಬ್ಬಾವಿನ ಜೊತೆ ನರಿ ಹೋರಾಟ..! ರೋಚಕ ವಿಡಿಯೋ ನೋಡಿ..
Fox and Python viral video : ನರಿಯೊಂದು ತನ್ನ ಸ್ನೇಹಿತನನ್ನು ರಕ್ಷಿಸಲು ದೈತ್ಯ ಹೆಬ್ಬಾವಿನ ವಿರುದ್ಧ ಹೋರಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬನ್ನಿ ಈ ಘಟನೆ ಎಲ್ಲಿ ನಡೆಯಿತು, ಏನು ಇದರ ಹಿಂದಿನ ಕಥೆ ಅಂತ ತಿಳಿಯೋಣ..
Animal viral video : ಪ್ರಾಣಿಗಳ ಕುರಿತ ಅನೇಕ ವೀಡಿಯೊಗಳು ಇಂಟರ್‌ನೆಟ್‌ನಲ್ಲಿ ಸಂಚಲ ಮೂಡಿಸುತ್ತಿರುತ್ತವೆ. ನೆಟ್ಟಿಗರು ಮನುಷ್ಯರ ಕಾದಾಟಗಳನ್ನು ನೋಡುವ ಆಸಕ್ತಿಯಿರುವಂತೆಯೇ ಪ್ರಾಣಿಗಳು ಬೇಟೆಯಾಡುವ ಮತ್ತು ಅವುಗಳು ಕಾದಾಡುವ ವೀಡಿಯೊಗಳನ್ನು ಹೆಚ್ಚು ಆಸಕ್ತಿಯಿಂದ ವೀಕ್ಷಿಸಿಲು ಇಷ್ಟಪಡುತ್ತಾರೆ. ಸದ್ಯ ನರಿ ಮತ್ತು ಹೆಬ್ಬಾವಿನ ವಿಡಿಯೋ ಒಂದು ನೆಟ್ಟಿಗರಿಗೆ ಬಾಯ್ತೆರೆದು ನೋಡುವಂತೆ ಮಾಡಿದೆ.
ಹೌದು.. ಅನೇಕ ಪ್ರಾಣಿ-ಸಂಬಂಧಿತ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಪ್ರತಿದಿನ ಹಲವಾರು ಹೊಸ ವೀಡಿಯೊಗಳು ಇಂಟರ್ನೆಟ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಕಾಡು ಪ್ರದೇಶಗಳಲ್ಲಿ ಮಾತ್ರವಲ್ಲದೆ ವಸತಿ ಪ್ರದೇಶಗಳಲ್ಲಿ ಪ್ರಾಣಿಗಳಿಗೆ ದಾಳಿ ಮಾಡುವ ಮತ್ತು ಆಹಾರವನ್ನು ತಿನ್ನಲು ಊರಿಗೆ ನುಗ್ಗುವ ಕಾಡು ಪ್ರಾಣಿಗಳ ವಿಡಿಯೋಗಳು ಇಂಟರ್‌ನೆಟ್‌ನ ಸೆಂಟರ್ ಅಟ್ರ್ಯಾಕ್ಷನ್ ಆಗುತ್ತಿರುತ್ತದೆ.
ಇದನ್ನೂ ಓದಿ: ಮಣಿಪುರ ಮಹಿಳೆಯರ ನೋವು ಪ್ರಧಾನಿಗೆ ಅರ್ಥವಾಗುತ್ತಿಲ್ಲ: ಶರದ್ ಪವಾರ್
ಕಾಡುಪ್ರಾಣಿಗಳಲ್ಲದೇ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಕೋಳಿ ಮುಂತಾದವುಗಳ ಚೇಷ್ಟೆ, ಹಾಸ್ಯ, ವಿಚಿತ್ರ ಚಟುವಟಿಕೆಗಳು ವಿಡಿಯೋಗಳು ಸಹ ನೆಟ್ಟಿಗರ ಗಮನಸೆಳೆಯುತ್ತಿರುತ್ತವೆ. ಆನೆಗಳು, ಸಿಂಹಗಳು, ಹುಲಿಗಳು, ನಾಯಿಗಳು, ಬೆಕ್ಕುಗಳು ಇತ್ಯಾದಿಗಳ ವೀಡಿಯೊಗಳು ಹೆಚ್ಚು ವೀಕ್ಷಕರನ್ನು ಹೊಂದಿರುವಂತೆ, ಹಾವುಗಳ ವೀಡಿಯೊಗಳು ಸಹ ಹೆಚ್ಚಿನ ವೀಕ್ಷಕರನ್ನು ಹೊಂದಿವೆ, ಅನೇಕ ಜನರನ್ನು ಆಕರ್ಷಿಸುತ್ತದೆ.
ಆ ನಿಟ್ಟಿನಲ್ಲಿ ಇತ್ತೀಚೆಗೆ ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ನರಿ ಮತ್ತು ಹೆಬ್ಬಾವಿನ ನಡುವೆ ನಡೆದ ಭೀಕರ ಕಾಳಗದ ವೀಡಿಯೋ ಇದೀಗ ಸಾಕಷ್ಟು ಶೇರ್ ಆಗುತ್ತಿದೆ. ದೈತ್ಯ ಹಾವು ಮತ್ತು ಅದರ ಬಿಗಿ ಹಿಡಿತ, ಏನಾದರೂ ಮಾಡಿ ತನ್ನ ಗೆಳೆಯನ್ನು ಕಾಪಾಡಬೇಕು ಎನ್ನುವ ನರಿಯ ಹಠ ನೋಡುಗರ ಎದೆ ಝಲ್ ಎನಿಸುವಂತಿದೆ. ಹೆಬ್ಬಾವು ನರಿಯ ಉಗ್ರ ದಾಳಿಗೆ ಪ್ರತಿಯಾಗಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು. ಅಪಾಯದ ನಡುವೆಯೂ ತನ್ನ ಗೆಳೆಯನನ್ನು ಬಿಟ್ಟು ಹಿಂದೆ ಸರಿಯಲಿಲ್ಲ. ಅದೃಷ್ಟವಶಾತ್, ಕೊನೆಯಲ್ಲಿ, ಹೆಬ್ಬಾವು ನರಿಯಿಂದ ತಪ್ಪಿಸಿಕೊಳ್ಳುತ್ತದೆ, ನರಿ ರೋಚಕ ಯುದ್ಧದಲ್ಲಿ ಗೆಲ್ಲುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ