snake video: ಹಾವುಗಳು ಕಪ್ಪೆಗಳನ್ನು ತಿನ್ನುತ್ತವೆ, ಅದ್ದರಿಂದ ಈ ಹಾವುಗಳನ್ನು ನೋಡಿದ ತಕ್ಷಣ ಕಪ್ಪೆಗಳು ಹೆದರಿ ಓಡಿ ಹೋಗಲು ಪ್ರಾರಂಭಿಸುತ್ತವೆ.  ಆದರೆ ಇಲ್ಲೊಂದು ಕಪ್ಪೆ ಆ ನಿಯಮವನ್ನೆ ಹುಸಿಯಾಗಿಸಿ, ಹಾವಿನ ಮೇಲೇರಿ ಜಾಲಿ ರೈಡ್‌ ಹೊರಟಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇಲ್ಲೊಂದು ಹಾವು ಹುಲ್ಲಿನ ಮೇಲೆ ತೆವಳುತ್ತಾ ಮುಂದೆ ಸಾಗಿದೆ, ಹಾವಿನ ಮೇಲೆರಿದ ಕಪ್ಪೆಯೊಂದು ಹಾವಿನ ಮೇಲೆ ಕೂತು ಮುಂದೆ ಸಾಗಿದ, ತನ್ನ ಆಹಾರ ತನ್ನ ಬೆನ್ನ ಮೇಲೆಯೇ ಇದೆ ಎಂದು ತಿಳಿಯದ ಹಾವು ತನ್ನ ಪಾಡಿಗೆ ತಾನು ಮುಂದೆ ಸಾಗಿದೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಇದನ್ನು ನೋಡಿದ ನೆಟ್ಟಿಗರು ಕಪ್ಪೆಯ ಧೈರ್ಯವನ್ನು ಮೆಚ್ಚಿ ಹಾಡಿ ಹೊಗಳಿದ್ದಾರೆ.


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


ಈ ವೈರಲ್‌ ವಿಡಿಯೋದಲ್ಲಿ  ಬಿಳಿ ಬಣ್ಣದ ಹಾವು ಎತ್ತರದ ಹುಲ್ಲಿನ ಮೇಲೆ ತೆಲಳುತ್ತಾ ಮುಂದೆ ಸಾಗಿದೆ. ಬೃಹತ್‌ ಗಾತ್ರದ ಈ ಹಾವು ತನ್ನ ಬೆನ್ನಿನ್ನ ಮೇಲೆ ತನ್ನ ಆಹಾರ ಇರುವ ಪರಿವೇ ಇಲ್ಲದೆ ಮುಂದೆ ಸಾಗಿದೆ. ಇನ್ನೂ ಹಾವಿನ ಬೆನ್ನ ಮೇಲೇರಿ ಕುಂತ ಕಪ್ಪೆ ಹಾಯಾಗಿ ಮುಂದೆ ಸಾಗಿದೆ. 


ಎಕ್ಸ್‌ನ ಹ್ಯಾಂಡಲ್ 'ನೇಚರ್ ಈಸ್ ಅಮೇಜಿಂಗ್' ಪೋಸ್ಟ್ ಮಾಡಿದ ಈ 10 ಸೆಕೆಂಡುಗಳ ವೀಡಿಯೊವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದು, ಸಾಕಷ್ಟು ಜನರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡುವುದಷ್ಟೆ ಅಲ್ಲದೆ ಸ್ನೇಹಿತರೊಂದಿಗೆ ವಿಡಿಯೋವನ್ನು ಹಂಚಿಕೊಂಡು ವೈರಲ್‌ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.