Funny Viral Video : ಮಳೆ ಬಂದರೆ ಸಾಕು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಬಿಡುತ್ತದೆ. ಕೆಲವೊಮ್ಮೆ ರಸ್ತೆಗಳು ಹಳ್ಳ ಕೊಳ್ಳಗಳಾಗಿ ಮಾರ್ಪಾಡಾಗಿ ಬಿಡುತ್ತವೆ. ಹೀಗಾದಾಗ ಪಾಪ ವಾಹನ ಸವಾರರ ಪಾಡು ಹೇಳತೀರದು. ಮಳೆ ಮತ್ತು ಮಳೆ ನೀರಿನ ನಡುವೆ ಘಟಿಸಿದ ದೃಶ್ಯವೊಂದು ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಲಕ್ಷಾಂತರ ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ ಎನ್ನಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಮಳೆಯಿಂದಾಗಿ ರಸ್ತೆಯುದ್ದಕ್ಕೂ ನೀರು ನಿಂತಿರುವುದನ್ನು ಈ ವಿಡಿಯೋದಲ್ಲಿ ಗಮನಿಸಬಹುದು. ನೀರಿನ ಕಾರಣದಿಂದ ವಾಹನಗಳು ಕೂಡಾ ನಿಧಾನವಾಗಿಯೇ ಚಲಿಸುತ್ತಿವೆ. ಈ ಮಧ್ಯೆ, ಯುವಕನೊಬ್ಬನ ಸ್ಕೂಟಿ ರಸ್ತೆ ಮಧ್ಯೆಯೇ ಬಂದ್ ಬಿದ್ದಿದೆ. ಆ ಯುವಕ ಒಬ್ಬನೇ ಇರಲಿಲ್ಲ. ಪಾಪ ತನ್ನ ಸ್ಕೂಟಿಯ ಹಿಂಭಾಗ ಗೆಳತಿಯನ್ನು ಕೂರಿಸಿಕೊಂಡು ಬೇರೆ ಹೋಗುತ್ತಿದ್ದ. ಸ್ಕೂಟಿ ಬಂದ್ ಬಿದ್ದಿದ್ದೇ ತಡ ಯುವಕ ಕೆಳಗಿಳಿದು ಅದನ್ನು ತಳ್ಳಲು ಶುರು ಮಾಡಿದ್ದಾನೆ. ರಸ್ತೆಯುದ್ದಕ್ಕೂ ಕೊಳಚೆ ನೀರು ಬೇರೆ. ಹುಡುಗ ಏನೋ ಸ್ಕೂಟಿ ಬಿಟ್ಟು ಕೆಳಗೆ ಇಳಿದಿದ್ದಾನೆ. ಆದರೆ ಯುವತಿ ಇಳಿಯಬೇಕಲ್ಲ. ಕೊಚ್ಚೆ ನೀರಿಗೆ ಕಾಲಿಡುವುದು ಹೇಗೆ ಎನ್ನುವ ಯೋಚನೆ ಆ ಹುಡುಗಿಯದ್ದು. ಹಾಗಾಗಿ ಆಕೆ ಕುಳಿತಲ್ಲಿಂದ ಅಲುಗಾಡುವುದಿಲ್ಲ. 


ಇದನ್ನೂ ಓದಿ : Shocking Video: ಅಬ್ಬಾ...! ಲೈವ್ ಟಿವಿ ಕಾರ್ಯಕ್ರಮದಲ್ಲಿ ವ್ಯಕ್ತಿಗೆ ಕಚ್ಚಿದ ಹಾವು... ಮುಂದೇನಾಯ್ತು ನೀವೇ ನೋಡಿ!


ಪಾಪ ಸ್ಕೂಟಿಯಲ್ಲಿ ಕೂರಿಸಿಕೊಂಡು ಬಂದ ತಪ್ಪಿಗೆ ಹುಡುಗ ಕೂಡಾ  ಹುಡುಗಿಯನ್ನು ಕುರಿಸಿಕೊಂಡೆ ಸ್ಕೂಟಿಯನ್ನು ತಳ್ಳುತ್ತಾನೆ. ಸ್ಕೂಟಿ ಮತ್ತು ಹುಡುಗಿ ಇಬ್ಬರನ್ನು ಸಂಭಾಳಿಸುವುದು ಆತನಿಂದ ಸಾಧ್ಯವಾಗುವುದಿಲ್ಲ.  ನೀರಿನ ರಭಸಕ್ಕೋ, ಹುಡುಗಿಯ ಭಾರಕ್ಕೋ ಬ್ಯಾಲೆನ್ಸ್ ತಪ್ಪಿ ಸ್ಕೂಟಿ ನೀರಿನಲ್ಲಿ ಬಿದ್ದು ಬಿಡುತ್ತದೆ. ಕೊಳಚೆ ನೀರು ಕಾಲಿಗೆ ತಾಗಬಾರದು ಎಂದು  ಕದಲದೆ ಕುಳಿತ ಹುಡುಗಿಯೂ ನೀರಿನಲ್ಲಿ ಬೀಳುತ್ತಾಳೆ. ಆ ನೀರಿನಲ್ಲಿ ಕಾಲಿಡುವುದಕ್ಕೂ ಅಸಹ್ಯ ಪಡುತ್ತಿದ್ದ ಹುಡುಗಿ ಕೊಳಚೆ ನೀರಿನಲ್ಲೇ ತೋಯ್ದುಹೋಗುತ್ತಾಳೆ.   


ಇಲ್ಲಿದೆ ವಿಡಿಯೋ : 


 


 

 

 

 



 

 

 

 

 

 

 

 

 

 

 

A post shared by Meemlogy (@meemlogy)


ಇದನ್ನೂ ಓದಿ : Viral Video: 73 ವರ್ಷದ ವೃದ್ಧನ ಮಧುರ ಕಂಠಕ್ಕೆ ಖ್ಯಾತ ಬಾಲಿವುಡ್ ಗಾಯಕ ಶಾನ್ ಪಾಪಾ ಫಿದಾ; ವಿಡಿಯೋ ವೈರಲ್!


ಈ ವಿಡಿಯೋ ಎಲ್ಲಿಯದ್ದು ಎನ್ನುವುದು ತಿಳಿದು ಬಂದಿಲ್ಲ. ಈ ವಿಡಿಯೋವನ್ನು ಕೇಳದ ವರ್ಷವೇ ಅಪ್ ಲೋಡ್ ಮಾಡಲಾಗಿದೆ. ಈ ಮಳೆಗಾಲದ ಹೊತ್ತಿನಲ್ಲಿ ಮತ್ತೆ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಮೀಮ್ಲೊಜಿ ಹೆಸರಿನ ಪುಟದಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ ಲಕ್ಷಾಂತರ ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ. ಲೈಕ್ ಮಾಡಿದ್ದಾರೆ.  


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.