Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲಿ ಕೆಲವು ಫನ್ನಿಯಾಗಿದ್ದರೆ, ಮತ್ತೆ ಕೆಲುವು ಅಚ್ಚರಿ ಹುಟ್ಟುಹಾಕುತ್ತವೆ. ತೆಲುಗು ಬ್ಲಾಕ್‌ಬಸ್ಟರ್ ಪುಷ್ಪಾ ಸಿನಿಮಾದ ಊ ಅಂಟವಾ ಹಾಡು ಸೃಷ್ಟಿ ಮಾಡಿದ ಕ್ರೇಜ್‌ ಅಷ್ಟಿಷ್ಟಲ್ಲ. ಇಂಟರ್ನೆಟ್‌ನಲ್ಲಿ ಈಗಲೂ ಈ ಹಾಡು ಜನರ ಫೆವರೆಟ್‌ ಆಗಿದೆ. ಆಗಾಗ್ಗೆ ಈ ಹಾಡಿಗೆ ರೀಲ್ಸ್ ಮಾಡುತ್ತಿರುತ್ತಾರೆ. ಕೆಲವು ಕಾರ್ಯಕ್ರಮಗಳಲ್ಲಿ ಸಹ ಈ ಸಾಂಗ್‌ ಹಾಕಿ ಹೆಜ್ಜೆ ಹಾಕುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video : ಸಿಂಗಲ್ಸ್‌ ಈ ವಿಡಿಯೋ ನೋಡ್ಲೇಬೇಡಿ! ಅಪ್ಪನ ವಯಸ್ಸಿನ ವ್ಯಕ್ತಿಗೆ ಮಗಳ ವಯಸ್ಸಿನ ಗರ್ಲ್‌ಫ್ರೆಂಡ್‌


ಇದೀಗ ನೋಯ್ಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೀರೆಯುಟ್ಟ ಮೂವರು ನೀರೆಯರು ಸೊಂಟ ಬಳಕಿಸುತ್ತಾ ಬೆಲ್ಲಿ ಡ್ಯಾನ್ಸ್ ಮಾಡಿದ್ದು, ಸಖತ್‌ ವೈರಲ್‌ ಆಗುತ್ತಿದೆ. ಊ ಅಂಟವಾ ಹಾಡಿಗೆ ಮೂವರು ಮಹಿಳೆಯರು ಬೆಲ್ಲಿ ಡಾನ್ಸ್ ಮಾಡಿದರು. ಈ ಹಾಡಿನ ಮಧ್ಯೆ ಟಿಪ್ ಟಿಪ್ ಬರಸಾ ಪಾನಿ ಹಾಡು ಪ್ಲೇ ಆಗಿದ್ದು, ಈ ಹಾಡಿಗೂ ಸಹ ಸಖತ್ ಆಗಿಯೇ ಸೊಂಟ ಬಳುಕಿಸಿದ್ದಾರೆ. 


 



 


ಈ ವಿಡಿಯೋವನ್ನು ಖುಷಿ ಶರ್ಮಾ ಎಂಬುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ 13.7 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 1,100ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಫೇಸ್‌ಬುಕ್‌ನಲ್ಲಿ 8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. 


ಇದನ್ನೂ ಓದಿ: Viral Video: ಎಕ್ಸ್‌ಪ್ರೆಸ್ ರೈಲಿಗೆ ಕೈ ಅಡ್ಡಹಾಕಿ ನಿಲ್ಲಿಸಿದ ತಾತ, ದಂಗಾದ ನೆಟ್ಟಿಗರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.