ಪಾಕಿಸ್ತಾನ : ಲಾಹೋರ್‌ನಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅವರ ಮೇಕೆ ಕಳ್ಳತನವಾಗಿದೆ. ಕದ್ದ ಮೇಕೆಯನ್ನು ಬಕ್ರೀದ್ ಹಬ್ಬದಂದು ಬಲಿ ಕೊಡಲು ಖರೀದಿಸಿ ಮನೆಗೆ ತರಲಾಗಿತ್ತು. ಆದರೆ ಬಕ್ರೀದ್‌ಗೂ ಮುನ್ನವೇ ಕಮ್ರಾನ್ ಅಕ್ಮಲ್‌ಗೆ ಕಳ್ಳರು ಶಾಕ್ ನೀಡಿದ್ದಾರೆ. ಕಮ್ರಾನ್ ಅಕ್ಮಲ್ ಅವರ ಮನೆಯಲ್ಲಿ ಈ ವರ್ಷ ಬಕ್ರೀದ್‌ಗೆ 6 ಮೇಕೆಗಳನ್ನು ನೀಡಬೇಕಾಗಿತ್ತು. ಆದರೆ, ಆರು ಮೇಕೆಗಳ ಪೈಕಿ ಒಂದನ್ನು ಕಳವು ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಡಿದ ನಂತರ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಬಕ್ರೀದ್ ಹಬ್ಬದಂದು ಬಲಿ ನೀಡಲು 6 ಮೇಕೆಗಳ ಖರೀದಿ : 
ವರದಿಯ ಪ್ರಕಾರ, ಕಮ್ರಾನ್ ಅಕ್ಮಲ್ ಅವರ ತಂದೆ ಬಕ್ರೀದ್ ಹಬ್ಬದಂದು ಬಲಿ ನೀಡಲು ಒಂದು ದಿನ ಮುಂಚಿತವಾಗಿ ಮಾರುಕಟ್ಟೆಯಿಂದ 6 ಮೇಕೆಗಳನ್ನು ಖರೀದಿಸಿದ್ದರು. ಆ ಮೇಕೆಗಳನ್ನು ಮನೆಯ ಹೊರಗೆ ಕಟ್ಟಿ ಹಾಕಿದ್ದರು. ಆದರೆ ಈ ಮೇಕೆಗಳ ಪೈಕಿ ಒಂದನ್ನು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳ್ಳರು ಕದ್ದೊಯ್ದಿದ್ದಾರೆ. ಮೇಕೆ ಕಾವಲು ಕಾಯಲು ನೇಮಿಸಿದ್ದ ವ್ಯಕ್ತಿ ನಿದ್ದೆ  ಹೋಗಿದ್ದ ಕಾರಣ ಕಳ್ಳರಿಗೆ ತಮ್ಮ ದಾರಿ ಸುಲಭವಾಗಿದೆ. 


ಇದನ್ನೂ ಓದಿ : ಪ್ರತಿ ದಿನ 1 ಮಿಲಿಯನ್ ಸ್ಪ್ಯಾಮ್ ಅಕೌಂಟ್‌ಗಳು ಪತ್ತೆ, ಆಘಾತಕಾರಿ ವಿಚಾರ ಬಿಚ್ಚಿಟ್ಟ Twitter


 90 ಸಾವಿರ ರೂ. ಮೌಲ್ಯದ  ಮೇಕೆ : 
 ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅವರ ತಂದೆ ಬಕ್ರೀದ್ ಹಬ್ಬದಂದು ಬಲಿ ಕೊಡುವ ಉದ್ದೇಶದಿಂದ 6 ಮೇಕೆಗಳನ್ನು  ಮಾರುಕಟ್ಟೆಯಿಂದ ಖರೀದಿಸಿದ್ದರು. ಅವುಗಳಲ್ಲಿ ಉತ್ತಮವಾದ ಮೇಕೆಯನ್ನು ಕಳ್ಳರು ಕದ್ದು ತೆಗೆದುಕೊಂಡು ಹೋಗಿದ್ದಾರೆ. ಆ ಮೇಕೆ ಬೆಲೆ 90 ಸಾವಿರ ರೂಪಾಯಿ ಎನ್ನಲಾಗಿದೆ. 


ಮೇಕೆ ಕಳ್ಳರಿಗಾಗಿ ಮುಂದುವರಿದ ಶೋಧ :
ಕಮ್ರಾನ್ ಅಕ್ಮಲ್ ಅವರ ಮೇಕೆ ಕಳ್ಳತನವಾಗಿರುವ ಬಗ್ಗೆ ಹೌಸಿಂಗ್ ಸೊಸೈಟಿಯ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದೆ. ಕಳ್ಳರನ್ನು ಆದಷ್ಟು ಬೇಗ ಪತ್ತೆ ಹಚ್ಚಿ, ಮೇಕೆಯನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅವರು ಕಮ್ರಾನ್ ಅಕ್ಮಲ್ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. 


ಇದನ್ನೂ ಓದಿ : Watch: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ, ವಿಡಿಯೋ ವೈರಲ್‌


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.